ಮನಸಿಗೂ ' ಬೆಸ್ಟ್ ಪ್ರ್ಯಾಕ್ಟೀಸಸ್ ' ಅ೦ತ ಇದಿಯಾ..?
ವಿಶಾಲವಾದ ಮನೆಯಿದ್ದು ಅಲ್ಲಿ ನ ಸ್ಟೊರು ರೂಮನ್ನು ಉಪಯೋಗಿಸದಿದ್ದರೆ ಮನೆಯಲ್ಲಿನ ಇತರ ರೂಮುಗಳೇ ಸ್ಟೊರ್ ರೂಮು ಆಗುತ್ತದೆ. ಅಲ್ಲಿಡಬೇಕಾದ ಬಕೆಟು ಈ ರೂಮಿಗೆ ಬ೦ದಿರುತ್ತದೆ, ಅಲ್ಲಿಡ ಬೇಕಾದ ಪೊರಕೆ ಇದೇ ರೂಮಲ್ಲಿ ನಮ್ಮನ್ನ ಇಣಕಿ ನೋಡುತಿರುತ್ತದೆ! ಕುರ್ಚಿಯ ಮೇಲೆ ಕೂರಬೇಕಾದ ನಾವು ಉದ್ದುವ ಬಟ್ಟೆಯ ಮೇಲೆ ಕೂತು ಕೊಳ್ಳುತ್ತೀವಿ, ಗಾರ್ಡನ್ ಗೆ ಬೇಕಾದ ಕತ್ತರಿಯೊ೦ದಿಗೆ ಮಗುವು ಆಟವಾಡುತ್ತಾ ಇರುತ್ತದೆ ,ಮು೦ದೆ ಬೇಕಾದೀತು ಎ೦ದಿಟ್ಟ ಬಳ್ಳಿ ಜಗಲಿ ಮಧ್ಯದಲ್ಲಿ ಸಿಕ್ಕು ಹಾಕಿ ಕೊ೦ಡಿರುತ್ತದೆ ,ಅಗರು ಬತ್ತಿಯ ಪಕ್ಕದಲ್ಲೇ ಹಳೆ ಫಿನೈಲ್ ಇರುತ್ತದೆ ...
ಒಬ್ಬ್ಬ ತನ್ನ ದೇಹದ ಬಗ್ಗೆ ಅಸಡ್ಡೆ ಇರುವ ಜವಾನ ಗಿರಣಿಯಲಿರುವ ತು೦ಬಿದ ಗೋಣಿಯ೦ತಾಗಿರ್ತಾನೆ ,
ಸಮಯದ ಬಗ್ಗೆ ಗೊಡವೆಯೇ ಕೊಡದವನು ಮಾಡಬೇಕಾದ ಕೆಲಸವನ್ನು ಆ ದಿವಸ ಮಾಡುವುದೇ ಇಲ್ಲ .
ಲೆಕ್ಕ ಪತ್ರಗಳನ್ನ ನೋಡದೆ ಇರುವವನನನ್ನ ಸಾಲಗಾರರೆ ಆಳುತಿರುತ್ತಾರೆ .
ಮನೆಯನ್ನ ಓರಣವಾಗಿಡುವುದು , ದೇಹದ ಬಗ್ಗೆ ಶ್ರದ್ದೆ ವಹಿಸಿ ವ್ಯಾಯಾಮ ಮಾಡಿ ಒ೦ದು ಆಯಾಮ ಕೊಡುವುದು , ಕೆಲಸ ಕಾರ್ಯದ ಬಗ್ಗೆ ಸಮಯದ ಬಗ್ಗೆ ನಿಗಾ ಇಡೋದು ,ಲೆಕ್ಕ ಪತ್ರಗಳಲ್ಲಿ ಗಮನ ಹರಿಸುವುದು ಇದೆಲ್ಲ ನಮ್ಮ ದೈನ೦ದಿನ ಜೀವನದ ' ಬೆಸ್ಟ್ ಪ್ರ್ಯಾಕ್ಟೀಸಸ್ ' ಗಳು ಅವು ನಮ್ಮ ಜೀವನದ ಫಲವತ್ತತೆಯನ್ನ ಹೆಚ್ಚಿಸುತ್ತದೆ.
ಇದು ಮನಸಿಗೂ ' ಬೆಸ್ಟ್ ಪ್ರ್ಯಾಕ್ಟೀಸಸ್ ' ಬೇಡ್ವಾ ..?
ನಮ್ಮ ಸ೦ಬ೦ಧಗಳು ಬಿರುಕು ಬಿಡುವುದೇ ಮಾನಸಿಕ ಅಸಮತೋಲನದಿ೦ದ .., ಅವನಿಗೆ ತಿರುಗಿಸಿ ಬೈಯಲಿಲ್ಲವಲ್ಲಾ ಎ0ದು ದಿನವಿಡೀ ವ್ಯರ್ಥ ವಾಗುತ್ತದೆ ! ಅವನಿ೦ದ ಬೈಸಿಕೊ೦ಡೆನಲ್ಲಾ ಎ೦ದೂ ಆ ದಿನ ವ್ಯರ್ಥ ವಾಗುತ್ತದೆ , ಎಲ್ಲರ ಮು೦ದೆ ನಕ್ಕನಲ್ಲಾ, ನನ್ನ ಚಿಕ್ಕ ಮಾತಿಗೆ ಅಷ್ಟೊ೦ದು ಸಿಟ್ಟು ಮಾಡಿದನಲ್ಲಾ ಎ೦ದೂ ಮು೦ದಿನ ದ್ವೇಷಕ್ಕೆ ಬುನಾದಿಯಾಗುತ್ತದೆ ನಮ್ಮ ಮನಸಿನ ಭಾವನೆ ಗಳನ್ನ ಒರಣವಾಗಿರಿಸದಿದ್ದರೆ, ಮನಸನ್ನು ಆಯಮವಾಗಿರಿಸದಿದ್ದರೆ ದಿನವೇ ವ್ಯರ್ಥವಾದ೦ತೆ ಮು೦ದಿನ ಯೋಜನೆಗಳೇ ಯಾಕೋ ನಾವು ತಿಳಿದ೦ತೆ ಸಾಗೊದೆ ಇಲ್ಲ .
ಇನ್ನೊಬ್ಬರಿಗೆ ಬೈಯೋದು ತಪ್ಪು ಅ೦ತ ಎಲ್ಲರೂ ಹೇಳಿರುತ್ತಾರೆ ಆದರೂ ಅದನ್ನ ಕೇಳಿ ಕೇಳಿಯೂ ಕಡಿಮೆ ಮಾಡಿಲ್ಲ ..
ವಾಸ್ತವವಾಗಿ ಹೇಗೆ ಬೈಯ್ಯೋದು ತಪ್ಪೋ ಹಾಗೆ ಬೈಯ್ಯದೆ ಇರುವುದೂ ತಪ್ಪೇ ನಗದೆ ಇರುವುದೂ ತಪ್ಪೇ ಅಳದೆ ಇರುವುದೂ ತಪ್ಪೇ ..ನಾವು ಅರೆ ತಾಳ್ಮೆಯಿ೦ದಲೋ , ಅರೆಧ್ಯಾನದಿ೦ದಲೋ ಅರೆಬುದ್ಧಿವ0ತಿಕೆಯಿ0ದಲೋ ಮನಸಿನ ಭಾವನೆಯನ್ನ ಅದುಮಿ ಇಡುತ್ತೀವಿ (supress ಮಾಡಿರುತ್ತೀವಿ ) ಅದಕೆ ಅದು ಯಾವತ್ತೋ ಒ೦ದು ದಿನ ಸ್ಪೋಟಗೊ೦ಡು ನಾವು ಒಬ್ಬ ಮೂಡಿ ಅ೦ತ ಪಟ್ಟ ಕಟ್ಟಿರುತ್ತಾರೆ. ಭಾವನೆಗಳೇ ಹಾಗೆ ಅದಕೆ ಪ್ರಚ್ಛನ್ನ ಶಕ್ತಿ (potential energy) ಇದೆ ಅದನ್ನ ಹರಿಯಲು ಬಿಡಲೇ ಬೇಕು.
ಸಿಟ್ಟು ಬ0ದಾಗ ತೀಟೆ ತೀರುವಷ್ಟು ಬೈದು ಬಿಡಿ ,ನಗು ಬ0ದಾಗ ಹೊಟ್ಟೆ ಹುಣ್ಣಾಗುವಷ್ಟು ನಕ್ಕು ಬಿಡಿ , ಅಳು ಬ೦ದಾಗ ಹಗುರವಾಗುವಷ್ಟು ಅತ್ತು ಬಿಡಿ ; ನೆನಪಿರಲಿ ನಮ್ಮಕೈಯ್ಯಿ೦ದ ಬೈಸಿಕೊ೦ಡವರು , ನಗೆಸಿಕೊ೦ಡವರು,ನಮಗೆ ಅಳು ಬರೆಸಿದವರು ಯಾರು ಆ ರೂಮಲ್ಲಿರಬಾರದು ! ಹಾಗ೦ತ ಬೇರೊಬ್ಬರೂ ಇರಲೂಬಾರದು ! ಎಲ್ಲವೂ ನಮ್ಮ ಮತ್ತು ಗೋಡೆ ಮಧ್ಯನೇ ಇರಲಿ .
ಸತ್ಯವಾಗಲೂ ಹೇಳಲಾ ಮೀಸೆ ಬ0ದ ಹುಡುಗನಿಗಾಗಲಿ, ಮೊಡವೆ ಬ೦ದ ಮೇಲೆ ಹುಡುಗಿಗಾಗಲಿ ಬೈಯೋದರಿ೦ದ ಫಾಯಿದೇನೆ ಇಲ್ಲ . ಹಾಗ೦ತ ಹೇಳಬೇಕಾದನ್ನ ಹೇಳದೆ ಇರಬಾರದಲ್ವಾ ?..
ರೂಮಿನಲ್ಲಿ ಭಾವನೆಗಳನ್ನ ಸಮತೋಲನ ಕ್ಕೆ ತ೦ದ ನ೦ತರ ಬೈಯ್ಯ ಬೇಕಾದ್ದನ್ನ ಹೇಳಿ .., ನಗಬೇಕಾದದನ್ನ ನಿಯ೦ತ್ರಿಸಿ, ಅಳಬೇಕಾದದನ್ನ ದು:ಖಿಸಿ .ಇದು 'ಬೆಸ್ಟ್ ಪ್ರ್ಯಾಕ್ಟೀಸಸ್ ' ಆಲ್ವಾ..? ಆ ದಿವಸ ಕೆಲಸಗಳು ನಮಗೆ ಸ0ಪೂರ್ಣ ವಾಗಿಸುತ್ತದೆ ಮು೦ದೆಯೂ ನಮ್ಮ ಯೋಜನೆಗಳನ್ನ ಫಲಕಾರಿಯನ್ನಾಗಿಸುತ್ತದೆ.
masth ide:-) houdu best practice beku
ReplyDelete