ಚೆಲ್ವಿಗೊಂದು ಮಾತು ...
ಅವನು ನೋಡಿಯೂ ವಿನಯದಿಂದ ನಗಲಿಲ್ವಾ..? ನಿನ್ನನ್ನ ನೋಡಿಯೂ ಮಾತನಾಡಿಸಲಿಲ್ವ..? ಹುಟ್ಟು ಹಬ್ಬದ ಶುಭಾಷಯ ಕಳಿಸಿಲ್ವಾ..? ನೀ ಮೆಚ್ಚಿದ ಹುಡುಗ ಇನ್ನೊಬ್ಬಳೊಂದಿಗೆ ಫ್ಳರ್ಟು ಮಾಡ್ತಾ ಇರ್ತಾನ.? ನೀ ಕರೆದಾಗ ಭೇಟಿಯಾಗಲು ಪಾರ್ಕಿಗೆ ಬರಲಿಲ್ವ..? ಸಿನೆಮಾಕ್ಕಂತೂ ಕರಕ್ಕೊಂಡು ಹೋಗಿಲ್ವಾ..? miss call ಕೊಟ್ಟಾಗ ಅವನು ತಿರುಗ call ಮಾಡಲ್ವಾ..? ಹೋಗಲಿ call ಮಾಡಿದಾಗ ಪ್ರತೀ call ನ್ನೂ attend ಮಾಡಿಲ್ವಾ.? Mail ಗೆ respond ಮಾಡಲ್ವ..? ನೀ ಚೆಂದವಾಗಿ ಕಾಣುವಂತೆ ಅಲಂಕರಿಸಿ ಉಡುಗೆ ತೊಟ್ಟಾಗ ಒಳ್ಳೆಯ ಮಾತನ್ನೂ ಹೇಳದೇ ಹೊರಟು ಹೋದನಾ .? ಒಂದುಸಲನೂ ಚಾಕಲೇಟ್ ಐಸುಕ್ರೀಮು ಕೊಟ್ಟಿಲ್ವಾ...? ಈವರೆಗೆ ಜೀನ್ಸು ಪೇಂಟು ಗಿಫ್ಟಾಗಿ ಕೊಂಡುಕೊಳಲಿಲ್ವಾ..?
ಗೆಳತಿ...,
ಅಷ್ಟೊಂದು ಜನ ಸ್ಪರ್ಧೆಗಿರುವಾಗ .."ನಿನಗೆ ಸಿಗಲ್ಲ ಬಿಡು" ಅನ್ನೋ ಹುಡುಗನಿಗಿಂತ "ಅಷ್ಟೂ ಜನರಲ್ಲಿ ನೀ ಒಬ್ಬಳು ಯಾಕಾಗಬಾರದು ಪ್ರಯತ್ನಿಸಿ ನೋಡು" ಅನ್ನುವವನ ಮಾತು ಹತ್ತಿರವಾಗಬೇಕು.
ಹಿರಿಯರ ಮುಂದೆ ಕಾಲಮೇಲೆ ಕಾಲು ಬೇಡ !..ಕಾಲು ಅಲ್ಲಾಡಿಸಬೇಡ! ಅನ್ನೋದು ಅವನಿಂದ ಕಿರಿ ಕಿರಿ ಮಾತು ಆದರೂ ...ಅದು ನಮ್ಮನ್ನ ಡಿಸೆನ್ಸಿಯನ್ನಾಗಿಸುತ್ತದೆ. ಅವನ ಮಾತು ತುಂಬಾ ಸಲ ಪ್ರಯೋಜನಕಾರಿಯನ್ನಾಗಿಸುತ್ತದೆ.
ತುಂಬಾ ಸಲುಗೆಯಿಂದಿರಬೇಡ ..ಎನ್ನುವ ಮಾತು ಹರಟೆಯಾದರೂ ನಮ್ಮನ್ನ ದಾರಿ ತಪ್ಪದಂತೆ ಮಾಡಿದಕ್ಕೆ ಗೌರವ ಕೊಡಲೇಬೇಕು.
ಆ ..ದಿನಗಳಲ್ಲಿ ಕೇವಲ ಸಾಂತ್ವಾನ ಮಾತ್ರ ನೆಮ್ಮದಿ ತರಬಲ್ಲದು, ಕೇಳೆ... ಗೆಳತಿ ಆ ಒಂದು ನೆಮ್ಮದಿಯ ಸಾಂತ್ವಾನ ಸಾವಿರ ಐಸುಕ್ರೀಮು ಕೊಟ್ಟರೂ ಸಿಗದು.
ಚೆಲ್ಲು ಚೆಲ್ಲು ವಾಗಿ ಮಾತನಾಡಿ ಸುಮ್ಮ್ ಸುಮ್ನೆ ಖಾಸಗಿ ವಿಷಯವನ್ನ ಬಯಲು ಮಾಡೋದಕ್ಕಿಂತ, ಅಥವಾ ನಿಜ ವಿಷಯವನ್ನ ತಿರುಚಿ ತರ್ಲೆ ,ರಗಳೆಗಳನ್ನ ನಮ್ಮ ಮೇಲೆ ಬರುವ ಹಾಗೆ ಮಾಡೋದಕ್ಕಿಂತ ತಟಸ್ಥವೆ ಲೇಸು....
ಅಂದಕ್ಕೆ ಅಭಿಮಾನಿಯಾಗು ಒಳ್ಳೆದೇ ಹಾನಿಯೇನಿಲ್ಲ....ಆದರೆ ಅವನ ಅಂಧ:ಕ್ಕೆ ಅಲ್ಲ.
ನನಗೊತ್ತು ನೀನು ಸ್ಟೈಲು ಗಾರ್ತಿ! ಚೂಡಿ ಉಟ್ಟಾಗ ಒಂದು ಸ್ಟೈಲು, ಸೀರೆ ಉಟ್ಟಾಗ ಇನ್ನೊಂದು ತರಹದ ಸ್ಟೈಲು,.. ಜೀನ್ಸು ಹಾಕಿದಾಗ ಕಣ್ಣು ಕ್ಲಿಕ್ಕಿಸುವ ಸ್ಟೈಲು! ಲಿಫ್ಟಿಕ್ ಹಾಕಿದಾಗ ಕಣ್ಣು ಕುಕ್ಕಿಸುವ ಶೋಕಿ ...ಇದು ನಿನ್ನ ಸ್ವಂತ ಆಸ್ತಿ.
ಬಹುತೇಕವಾಗಿ ನಾವು ಅದೇನೋ ನಮ್ಮ ಮೆಚ್ಚಿನ, ನಮಿಗೆ ಹತ್ತಿರವಾದವರು ನಮ್ಮ ದಿನ ನಿತ್ಯದ ಚಲನ ವಲನಕ್ಕೆ ಬೇಲಿ ಹಾಕ್ತಿದ್ದಾರೆ ಆನಿಸಿಬಿಡುತ್ತದೆ. ಆದರೆ ಹೆಚ್ಚಿನ ಸಲ ನಮಗೆ ಗೊತ್ತಿಲ್ಲದಂತೆ ಸುಳ್ಳಾಗುತ್ತದೆ ಅವೆಲ್ಲಾ ಬೇಲಿ ಅಲ್ಲ .. ಅವು ಒಂದು guide map ಆಗಿರುತ್ತದೆ ಅಷ್ಟೇ! ಅದನ್ನು ಉಪಯೋಗಿಸಿದ್ದೆ ಆದಲ್ಲಿ ನಾವು ಹೋಗಬೇಕಾದ ದಾರಿ ತಪ್ಪುವುದಿಲ್ಲ,ಮೋಸಹೋಗುವುದು ಕಡಿಮೆಯಾಗುತ್ತದೆ!
ಇನ್ನೂ ಸಾಕಷ್ಟು ಮಾತಾಡಬೇಕಿತ್ತು.... Coffee-DAY ಗೆ ಬರ್ತಿಯಾ...?
No comments:
Post a Comment