KP Nettar's
ದಾ...ರಿ
#75, 5 ನೇ ಘಟ್ಟ 'ಅಂತಿಮ ' ಕ್ಕೆ ದಾರಿ ಎಲ್ಲೆಂದು ಒಬ್ಬ ದಾರಿ ಹೋಕನು ಅಂಗಡಿಯವನಲ್ಲಿ ಕೇಳಿದನು.
"ಮುಂದಿನ ಮೂರನೇ ರಸ್ತೆಯ ಎಡಬಾಗದಲ್ಲಿ ಗಣಪತಿ ದೇವಸ್ಥಾನ ಸಿಗುತ್ತದೆ ಅಲ್ಲಿಂದ ಬಲಬದಿಗೆ ತಿರುಗಿದಾಗ ಒಂದು ಮಠ ಕಾಣಬಹುದು .. ಅಲ್ಲೇ ಹತ್ತಿರ " ಎಂದನು ಅಂಗಡಿಯವನು....
#75, 5 ನೇ ಘಟ್ಟ 'ಅಂತಿಮ ' ಕ್ಕೆ ದಾರಿ ಎಲ್ಲೆಂದು ಇನ್ನೊಬ್ಬ ದಾರಿ ಹೋಕನು ಅಂಗಡಿಯವನಲ್ಲಿ ಕೇಳಿದನು.
" ಇದೇ ದಾರಿಯಲ್ಲೇ ಹೋದಾಗ ಗ್ರಂಥಾಲಯ ಕಾಣಬಹುದು...ಅಲ್ಲಿಂದ ಇನ್ನು ಸ್ವಲ್ಪ ಮುಂದೆ ಹೋದಾಗ ಮುದ್ರಣಾಲಯ ಸಿಗುತ್ತದೆ ಅಲ್ಲೇ ನೀವು ಕೇಳಿದ ವಿಳಾಸ ಸಿಗಬಹುದು" ಎಂದನು..
#75, 5 ನೇ ಘಟ್ಟ 'ಅಂತಿಮ ' ಕ್ಕೆ ದಾರಿ ಎಲ್ಲೆಂದು ಇನ್ನೊಬ್ಬ ಕೇಳಿದನು.
"ಮುಂದೆ ಹೋದಾಗ ಕಲಾ ಮಂಟಪ ಸಿಗುತ್ತದೆ ಅಲ್ಲಿಂದ ಬಲು ಹತ್ತಿರ ಎಂದನು .."
#75, 5 ನೇ ಘಟ್ಟ 'ಅಂತಿಮ ' ಕ್ಕೆ ದಾರಿ ಎಲ್ಲೆಂದು ಮೊದಲೊಬ್ಬ ಕೇಳಿದನು.
ಒಂದು ತಿರುವಿನಲ್ಲಿ ಪೋಲಿಸ್ ಸ್ಟೇಷನ್ ಇದೆ ಅಲ್ಲಿಂದ right turn ತಗೊಂಡರೆ ಮುಂದಿನ ಹಾದಿಯಲ್ಲಿ ಆ ವಿಳಾಸ ಬರುತ್ತ್ತದೆ! ಅಂದ.
#7 5 ....... ಕ್ಕೆ ದಾರಿ ಎಲ್ಲಿಯೆಂದು ಮತ್ತೊಬ್ಬ ಕೇಳಿದನು
"ಮುಂದೆ ಒಂದು ವಿದ್ಯಾಲಯ ಇದೆ ಅದರ ಪಕ್ಕದಲ್ಲಿ ಇನ್ನೊಂದು ವಿಶ್ವವಿದ್ಯಾಲಯವಿದೆ ಮುಂದಿನದು ನಿಮ್ಮದೇ ದಾರಿಯಾಗಿರುತ್ತದೆ ಎಂದನು ......
ಅಂಗಡಿಯ ಪಕ್ಕದಲ್ಲಿದ್ದ ಹುಡುಗ: " ಎಲ್ಲರೂ ಒಂದೇ ದಿಶೆಯನ್ನು ಕೇಳಿದಾಗ ನೀವು ಯಾಕೆ ಪ್ರತಿಯೊಬ್ಬರಿಗೂ ವಿಭಿನ್ನ ಸುಳ್ಳು ಮಾರ್ಗವನನ್ನ ತೋರಿದಿರಿ? " ಅಂದನು
ಅಲ್ಲೇ ಪಕ್ಕದಲ್ಲಿದ್ದ ಸಂತ : ಮಗು ಅಂಗಡಿಯವನು ಅನುಭವಿ ಮತ್ತು ತುಂಬಾ ಜನರನ್ನ ನೋಡಿದಾತ... ಎಲ್ಲೂ ತಪ್ಪು ಹೇಳಿಲ್ಲ ಎಲ್ಲರಿಗೂ ದಿಶೆ ಒಂದು ಆದರೆ ಮಾರ್ಗ ಹಲವು . ಯಾರುಯಾರಿಗೆ ಯಾವ ಮಾರ್ಗ ಬೇಕೊ ಆ ಮಾರ್ಗವನ್ನ ಸೂಚಿಸಿದ್ದಾನೆ . ಬಹುಪಾಲು ನಮ್ಮ ಜೀವನ 'ದಾರಿ'ಯನ್ನೇ ಅವಲಂಬಿತವಾಗಿದೆ! ಹೆದ್ದಾರಿ ಕೆಲವರದ್ದಾದರೆ ಕಳ್ಳದಾರಿ ಇನ್ನು ಕೆಲವರದು .ದಾರಿಯಲ್ಲಿ ಮುಳ್ಲಿರುವುದು ಒಂದು ಜೀವನವಾದರೆ ,ಮುಳ್ಳಲ್ಲೇ ದಾರಿ ಮಾಡಿಕೊಂಡು ಬದುಕುವ ಜೇವನವಿದೆ. ನಡೆದದ್ದೇ ದಾರಿ ನಾಯಕನದ್ದು , ಅನುಸರಿಸಿದ ದಾರಿ ಹಿಂಬಾಲಕರದ್ದು .
ಜೀವನದಲ್ಲಿ ತಪ್ಪು ದಾರಿ , ಕಳ್ಳದಾರಿ (wrong turn )ಹಿಡಿದವನಿಗೆ right turn (ಸರಿ ದಾರಿ) ಹೇಳಿದ್ದಾನೆ ,ಕಲಾ ರಸಿಕನಿಗೆ ಕಲಾ ಕ್ಷೆತ್ರ ತೋರಿದ್ದಾನೆ . ವಿದ್ಯಾರ್ಥಿಗೆ ವಿದ್ಯಾಲಯ ತೋರಿದ್ದಾನೆ ,ಭಕ್ತನಿಗೆ ಮಂದಿರ ....... ,, ಹೀಗೆ.....
ಹುಡುಗ: ಹಾಗಾದರೆ #7 5 ವಯಸ್ಸಾ.....? 5 ಘಟ್ಟ ಗಳು ಅಂದರೆ ಬಾಲ್ಯ ,ಯವ್ವನ ,ಗೃಹಸ್ಥಾಶ್ರಮ ......?, ಅಂತಿಮ ಅಂದರೆ final destination ..?
No comments:
Post a Comment