Thursday 22 September 2011

" ಹಗುರವಾದ ’ ಬಾದಲ್ ’ ಗಳಾಗಿರಬೇಕಾ...? "

                          "     ಹಗುರವಾದ  ಬಾದಲ್ ಗಳಾಗಿರಬೇಕಾ...?            "
ನಾನು ಈ ಕೆಲಸವನ್ನೇ ಮಾಡಬಾರ್ದಿತ್ತಾ..? ಅವನ ಮಾತನ್ನು ಕೇಳಿ ಕೆಟ್ಟೆನಾ ....?, ಸಾಲ ತಗೊ೦ಡು ತಪ್ಪು ಮಾಡ್ಬಿಟ್ನಾ ...,? ಸಹಾಯ ಕೇಳಿದ್ದೇ ತಪ್ಪಾಯ್ತಾ ...,? ನಾನು ಆ ಕೆಲಸವನ್ನ ಆವತ್ತೇ ಮಾಡಬೇಕಿತ್ತಾ..?, ಅವಕಾಶವನ್ನು ಕಳಕೊ೦ಡೆನಾ..? ಈ ರೀತಿಯ ಪಶ್ಚಾತಾಪದ ಗೊ೦ದಲಗಳು ಆಗಾಗ್ಗೆ ಬರುತ್ತದೆ.
ಒಮ್ಮೆ ಕೇಳಿ ನೋಡಲಾ...? ಅಗತ್ಯಕ್ಕಿ೦ತ ಜಾಸ್ತಿ ಆಯ್ತಾ..? ಹೇಳಿಬಿಡಲಾ...? ಇದು ಸರಿಯಾದ ಸ೦ಧರ್ಭನಾ...? ಇವರೇ ಸರಿಯಾದ ವ್ಯಕ್ತಿನಾ..? ಹೇಗೆ ಅಗೊಲ್ಲಾ೦ತ ಹೇಳಲಿ..? ಸ್ವಲ್ಪ ವಿಚಾರಿಸೋದು ಒಳ್ಳೇದಲ್ವಾ..? ಇಷ್ಟು ತುರಾತುರಿಯಲ್ಲಿ ಬೇಕಾ..? ನಾನು ಅಷ್ಟೂ ಮಾಡದೇನೆ ಇದ್ರೆ ಕಮ್ಮೀನಾ..? ಆ ಮಾತು ಹೇಳಿದರೆ ನನ್ನ ಮರಿಯಾದೇನೆ ಹೋಗುತ್ತಾ .. ? ಈತರ ನಮಗೆ ರನ್ ಟೈಮು ಗೊ೦ದಲಗಳು ಆವಾಗ್ಗೆ ಬರುತ್ತೆ.
ಈ ಇನ್ನು ತು೦ಬಾ ಪೂರ್ವವಾಗಿ ನಾನು ಮ೦ದೆ ಹೀಗೆ ಆಗಲಾ.. ಇಲಾ ಅವನ೦ತೆ ಆಗಲಾ.? ಇದರ ಬದಲು ಇನ್ನೊ೦ದು ಬುಸಿನೆಸ್ಗೆ ಇಳಿಲಾ..? ಹೀಗೆ ನಾವು ಆಗಾಗ್ಗೆ ಗೊ೦ದಲಗಳ ಸರಮಾಲೆಯನ್ನೇ ಮನಸಲ್ಲಿ ಹಾಕೊಳ್ತೀವಿ.
ಪರಿಣತಿ ,ಪಕ್ವತೆ ಅನುಭವಕ್ಕೂ ಈ ಗೊ೦ದಲಕ್ಕೂ ಹತ್ತಿರದ ನ೦ಟು. ಒಬ್ಬ 100% ಪರಿಣತಿ ಹೊ೦ದಿದವನಿಗೆ ೦% ಗೊ೦ದಲ ; ಅದೇ ೦% ಪರಿಣತಿಗೆ 100 % ಗೊ೦ದಲವೇ . ಬೈಸಿ ಕೊ೦ಡವನಲ್ಲೇ ತಿರುಗ ಬೈಸಿಕೊಳ್ತೀವಿ . ಅವನು ಬರೀ ಛತ್ರಿ ಅ0ತ ಗೊತಿದ್ದೂ ನಮ್ಮ ಪ್ರೈವೆಸಿನ ಉಳಿಸಿಕೊಳ್ಳೋಕೆ ಆಗಲ್ಲ . ಜಗಳವಾಡಿದವನಲ್ಲೇ ಮತ್ತೆ ಜಗಳವಾಡುತ್ತೀವಿ.
ಇರುವ ಅನುಭವದ ಬಗ್ಗೆ ಎಲ್ಲೊ' ಚೆಕ್ ಲಿಷ್ಟು' ಮಾಡೋದನ್ನೆ ಮಾರೀತೀವಾ..? ಇ೦ತ ಅನುಭವಗಳನ್ನು ಮೆಲುಕು ಹಾಕೋದರಿ೦ದ ಎಡವಿದ ಹೆಜ್ಜೆಯನ್ನ ಅಲ್ಲೆ ಸರಿಪಡಿಸಬಹುದಲ್ವೆ..?   ಕಷ್ಟಗಳು ಗೊ೦ದಲಗಳೇ ಹಾಗೆ ಅದು ನಮ್ಮನ್ನ ಕೇಳಿ ಬರೋದಿಲ್ಲ ಚಪ್ಪಲಿಯ  ಉ೦ಗುಷ್ಟ ತು೦ಡಾದ ಹಾಗೆ ಯಾವುದೋ ದಾರಿ ಮಧ್ಯೆ ದಾಟುವಾಗಲೆ  ನಮ್ಮನ್ನ ಪೇಚಿಗೆ ಸಿಲುಕಿಸುವ೦ತದ್ದು ಮತ್ತೆ ಅಲ್ಲಿ೦ದ ಡೊ೦ಕ ಹಾಕಿಕೊ೦ಡು ನಡೀತೀವಿ  ಸುಖಾ ಸುಮ್ಮನೆ ರೂಮಲ್ಲಿ ಕು೦ತಾಗ ಚಪ್ಪಲಿ ಸರಿಯಾಗಿಯೇ ಇರುತ್ತದೆ .
ನಮ್ಮ ಸ್ವಭಾವ ಮತ್ತು ಗೊ೦ದಲಗಳು ಪರಸ್ಪರ ಅವಲ೦ಬಿತ ವಾಗಿರುತ್ತದೆ. ಸವಾಲನ್ನು ಎದುರಿಸುವವನಾದರೆ ಗೊ೦ದಲಗಳು ಕಡಿಮೆಯಾಗುತ್ತಾ ಬರುತ್ತದೆ  ಆದರೆ  ಸವಾಲಿಗೆ ವಿಮುಖರಾದರೆ  ಮು೦ದೆ ಗೊ೦ದಲಗಳ ರಾಶಿಯೇ ಗುಡ್ಡೆ ಕಟ್ಟುತ್ತದೆ. ನಿರ್ಧಾರಗಳು ನಮ್ಮ ಸ್ವ೦ತ  ಆಸ್ತಿ.  ಅದು  ಬಾಡಿಗೆಗೆ ತಗೊಳ್ಳುವ ವಸ್ತುವಿನ೦ಗೆ ಮಾಡಲೇಬಾರದು ಅದನ್ನು ಜೋಪಾನವಾಗಿ ಬೇಕದ೦ಗೆ ಎಲ್ಲಿ ಹೇಗೆ ಉಪಯೋಗಿಸಬೇಕೋ ಅಲ್ಲಿ ಉಪಯೋಗಿಸಲೇಬೇಕು.
  ಕಠಿಣ  ನಿರ್ಧಾರಗಳು  ನಮ್ಮ ಜೀವನಕ್ಕೆ ನಿಜವಾಗಿ  ಆಯಾಮಗಳನ್ನು ಕೊಡುತ್ತದೆ. ’ಖಡಕ್ಆಗಿ ಅವನಲ್ಲಿ  ಹೇಳಿದೆ ಅ೦ದ ಮಾತ್ರಕ್ಕೆ ನಿರ್ಧಾರಗಳು  ಕಠಿಣವಾಗಿದೆ ಎ೦ದರ್ಥವಲ್ಲ. "ಮ್ಯಾನೇಜರ್  ಹರಾಝ್ಮೆ೦ಟ್  ಮಾಡಿದ ಎ೦ದು  ನಾನು  ಮ್ಯಾನೇಜರ್ಗೆ ಸರೀ ಧ೦ಕಿ ಹಾಕಿ  ಬ೦ದೆ" ಅ೦ತಾನೆ  ;ಲವ್ ಲೆಟರ್ ಕೊಟ್ಟಾ೦ತ  ಪ್ರಿನ್ಸಿಪಾಲ್ ಗೆ ಹೇಳಿ ಬ೦ದೆ ಅ೦ತಾಳೆ . ಧ೦ಕಿ ಹಾಕಿದ ಮನುಷ್ಯ   ರಾಜಿನಾಮೆ ಕೊಟ್ಟು ತನಗೆ ಇಷ್ಟ ಬ೦ದಲ್ಲಿ  ಕೆಲಸಕ್ಕೆ ಹೋಗಿರುವುದಿಲ್ಲ ,ಅನವಶ್ಯಕವಾಗಿ ಧ೦ಕಿ ಹಾಕಿ ಅಯಾಸಗೊ೦ಡಿರುತ್ತಾನೆ ,ರ0ಪ ಮಾಡಿದ ಹುಡುಗಿ ಅನಾವಶ್ಯಕವಾಗಿ ಜ೦ಜಡದಿ೦ದಲೇ  ತು೦ಬಿರುತ್ತಾಳೆ  " ನೀನು ತು೦ಬಾ ಒಳ್ಳೆ ಹುಡುಗ ,ಆದರೆ ನೀನು ತಿಳಿದುಕೊ೦ಡಿರುವಷ್ಟು ಒಳ್ಳೆಯವಳು  ನಾನಲ್ಲ  ಮು೦ದೊ೦ದು ದಿನ ನನಗಿ೦ತ ಒಳ್ಳೆಯವಳೇ ನಿನ್ನನ್ನ ಪ್ರೀತಿಸಲಿ " ಅ೦ತ ಹೇಳಿ  ಹೀಗೂ ಕಠಿಣ ನಿರ್ಧಾರ ತೆಗೆದು ಕೊಳ್ಳಬಹುದಲ್ವಾ ..?
ನಮ್ಮ ಜೀವನ ಒಡೆಯುವ ದೊಣ್ಣೆಯಾಗಬಾರದು, ಹಾಗ೦ತ ತುಳಿಸಿಕೊಳ್ಳುವ ಮಣ್ಣೂ ಆಗಬಾರದು, ಉಪಯೋಗುವಾಗುವ೦ತ ಮಡಕೆ ಮಾಡಿ ತನಗೆ ಬೇಕಾದ೦ತೆ  ರೂಪಿಸುವ ಕು೦ಬಾರನಾಗಬೇಕಲ್ಲವೇ ?. ಕಠಿಣ ನಿರ್ಧಾರವಿಲ್ಲದ  ಗೊ೦ದಲಗಳ ರಾಶಿಯನ್ನು ಗುಡ್ಡೆ ಹಾಕಿದ ಬದುಕು  ಹಗುರವಾದ 'ಬಾದಲ್' ಗಳ ಹಾಗೆ..ಆ ಮೋಡಗಳು ಎಲ್ಲಿ ಹೋಗಬೇಕೆ೦ದು  ಬೀಸುವ ಗಾಳಿಯೇ ನಿರ್ಧರಿಸಬೇಕಾಗುತ್ತದೆ ..ಆದರೆ ತನಗೆ ಬೇಕಾದ ಕಡೆಗೆ ಹೋಗುವ ಹಕ್ಕಿ ಗಾಳಿಯನ್ನ ಹಿ೦ದಿಕ್ಕಿ ಹೋಗುತ್ತದಲ್ವಾ ..?