Saturday 3 December 2011

ಪ್ರಾಮುಖ್ಯತೆಗಳನ್ನ sort ಮಾಡಿದ್ದೀವಾ..?

    
                           ಪ್ರಾಮುಖ್ಯತೆಗಳನ್ನ    sort    ಮಾಡಿದ್ದೀವಾ..?   

 ತುಂಬಾ ಒಡನಾಡಿ ..ಆದರೆ ಅವನ ಮನೆಯ ಸಮಾರಂಭಕ್ಕೆ ಹೋಗಲಾಗಲಿಲ್ಲ.ಎಷ್ಟೋ ದಿನದಿಂದ ಕೊಂಡುಕೊಳ್ಳಬೇಕೆಂದು ಕೊಂಡ ವಸ್ತು ಕೊಂಡುಕೊಳ್ಲೋಕಾಗಲಿಲ್ಲ.  ಮನೆಯ ಜಗಲಿಯಲ್ಲಿ  ಒಂದು ಫ್ರೇಮು  ಇಡಬೇಕಂದುಕೊಡಿದ್ದು ಉಹುಂ ಅಲ್ಲಿ  ಏನೂ ಇಲ್ಲ ಖಾಲಿ. ಅದೊಂದು ಇನ್ಶ್ಯುರೆನ್ಸು ಪಾವತಿಸಬೇಕಾಗಿದ್ದು ಅರ್ಧದಲ್ಲೇ ಬಾಕಿ, ಮುಂದೆ ನೋಡೋಣಾ  ಅಂದಿದ್ದು ಮತ್ತೆ ನೋಡಿದ್ದೇ ಇಲ್ಲ,  ಅದೊಂದು ಅಸ್ಸೆಟ್ಟು ಸ್ವಂತದ್ದೂ   ಅಂತ ಬೇಕು ಅಂದಿದ್ದು ಇನ್ನೂ ಸ್ವಂತದ್ದಲ್ಲ, ಇನ್ನೊಂದು ಕೊರ್ಸುಗೆ  ಸೇರಬೇಕೆಂದಿರುತ್ತೀವಿ  ಆದರೆ ಆ ಕೋರ್ಸು ಶುರುವಾಗಿ ಮುಗಿದು ಹೋಗಿರುತ್ತದೆ.

ಅಮ್ಮನನ್ನು ನೋಡಿ! ನಾಳೆಗೆ ತಿಂಡಿ ಏನು ಅಂತ ಇವತ್ತೇ ಲೆಕ್ಕ ಹಾಕಿರುತ್ತಾಳೆ. ಮಗುವಿನ  ಸಮವಸ್ತ್ರ ಒಗೆದಾಗಿದೆಯಾ  ಅಂತ ನೋಡುತ್ತಾಳೆ. ಮನೆಯವರು ಬೆಳಗ್ಗೆ ಬೇಗ ಬಸ್ಸಿಗೆ  ಹೋಗಬೇಕಾ ಅಂತ  ಅಲರಾಮು ಇಟ್ಟಿರುತ್ತಾಳೆ. ಮಕ್ಕಳಿಗೆ ಪರೀಕ್ಷೆಯ ಸಮಯವಾ ಎಂದು ಎಚ್ಚರಿಸಲು ಮರೆಯದಿರುತ್ತಾಳೆ.  ಅಪೂರ್ವಕ್ಕೆ ನೆಂಟರು ಬಂದರೆ...ಎಂದು  ಸ್ವೀಟನ್ನು ಬಚ್ಚಿಟ್ಟಿರುತ್ತಾಳೆ.

ಒಡನಾಡಿಯ ಸಮಾರಂಭಗಳಿಗೆ ಹಾಜರಿ ಹಾಕುವುದು, ವಸ್ತುಗಳನ್ನು ಕೊಂಡುಕೊಳ್ಳುವುದು, ಮತ್ತೆ ನೋಡೋಣ ಅಂದಿದ್ದನ್ನ ಗಮನ ಹರಿಸುವುದು, ಇನ್ಶ್ಯೂರೆನ್ಸು  ಪಾವತಿಮಾಡುವುದು, ಅಸ್ಸೆಟ್ಟು ಸ್ವಂತ  ಗೊಳಿಸುವುದು, ಬೇಕಾದ ಕೋರ್ಸಿಗೆ ಸೇರುವುದು, ಇವೆಲ್ಲ ಆಗದೆ ಇರುವ  ಟಾರ್ಗೆಟು  ಗಳಲ್ಲ .ಆದರೆ ಇವೆಲ್ಲ ಮುಗಿಸಿದ್ದರೆ  ಅಪೂರ್ಣ  ಎಂಬುವುದು ಬರುತ್ತಿರಲಿಲ್ಲ.

ನಾಳೆಗೆ ಏನು  ಮಾಡಬೇಕೆಂದು ಇವತ್ತೇ ಯೋಚಿಸಿರುವುದು , ಸಮವಸ್ತ್ರ  ರೆಡಿನಾ ಅಂತ ವಿಚಾರಿಸಿರುವುದು, ಬೇಗ ಕೆಲಸ ಶುರುಹಚ್ಚುವವರಿಗೆ  ಅಲರಾಮು ಇಟ್ಟುಕೊಳ್ಳುವುದು,ಮಕ್ಕಳ ಪರೀಕ್ಷೆಯ  ಬಗ್ಗೆ ಗಮನ ಹರಿಸುವುದು, ಇದೊಂದು ಸವಾಲಿನ ಕೆಲಸವಾದರೂ ಎಲ್ಲವನ್ನ ಸರಿಯಾದ ಸಂಧರ್ಭಕ್ಕೆ ನಿಭಾಯಿಸಿಟ್ಟಿರುತ್ತಾಳೆ. ಬಹುಷಃ  ಕೆಲವು  ವಿದೇಶಗಳಲ್ಲಿ  ಇದಕ್ಕೆಯೇನೋ  ಗೆಳತಿಯಾಗಿರುತ್ತಾರೆ, ಮಡದಿ ಯಾಗಿರುತ್ತಾರೆ  ,.ಆದರೆ 'ಅಮ್ಮ'ಆಗಲು ಹಿಂಜರಿಯುತ್ತಾರೆ.  ಯಾವ  MBA
ಯೂ  ಮಾಡದೆ ಇದ್ದ     ಅಮ್ಮ ಎಲ್ಲವನ್ನೂ ನಿಭಾಯಿಸುತ್ತಾಳೆ. ಅವಳು ಪ್ರಾಮುಖ್ಯತೆಗಳನ್ನ 
 'ಅಂಗಡ-ವಿಂಗಡ' ಮಾಡಿರುತ್ತಳೆನೋ..?

ಕೆಲಸಗಳ  ಬಗ್ಗೆ ನಿಗಾ ಇಲ್ಲದೆ , ಪ್ರಾಮುಖ್ಯತೆಗಳ  ಪ್ರಯೋರಿಟೈಸು ಮಾಡದೆ , ಕೆಲಸಗಳ
 'ಅಂಗಡ-ವಿಂಗಡ'   ಮಾಡದೆ ಇದ್ದಾಗ  ಸಣ್ಣ ಸಣ್ಣ ಅಂದುಕೊಂಡ  ನಮ್ಮ ದೊಡ್ಡ ಕೆಲಸಗಳು  ಅಲ್ಲೇ ಬಾಕಿಯಾಗುತ್ತವೆ ಇಲ್ಲಾ ಸರಿಯಾದ ಸಂಧರ್ಭದಲ್ಲಿ ಪೂರ್ಣ ವಾಗಿರುವುದಿಲ್ಲ.

ನನ್ನ ಸಣ್ಣ ಸಣ್ಣ ಕೆಲಸಗಳು , ಪ್ರಾಮುಖ್ಯತೆಗಳನ್ನ sort  ಮಾಡದೆ ಜೀವನವೆಲ್ಲ  'ನಚ್ಚಿ-ಗುಜ್ಜಿ' ಯಾಗಿದೆ  ...ಯಾವಾಗ   ಪ್ರಾಮುಖ್ಯತೆಗಳನ್ನ   sort   ಮಾಡುತ್ತೀನೋ....?

Saturday 26 November 2011

ಬದಲಾವಣೆ ಮತ್ತು ..ವಿಕಾಸ...

                                                   ಬದಲಾವಣೆ ----->ವಿಕಾಸ...

ಹುಳ ನೋಡು ನೋಡುತಿದ್ದಂತೆ  ಪತಂಗವಾಗಿ ಹಾರಿಬಿಡ್ತು,  ಮೊದ ಮೊದಲು ಬೊಂಬೆಯೊಂದಿಗೆ  ಆಟಿಕೆಯೊಂದಿಗೆ  ಆಟವಾಡುತಿದ್ದ ಹುಡುಗಿ ಮೊಡವೆ ಬಂದೊಡನೆ ತಕ್ಷಣ ಯಾಕೋ  ಒಳಗೇ ನಾಚಿಕೆಗೆ ನಾಂದಿ ಹಾಡುತ್ತಾಳೆ. ಒಂದು ಮಗುವಾದ ಮೇಲೆ ತಕ್ಷಣ  ನಾಚಿಕೆಗೂ ಇವಳಿಗೂ ಯಾವುದೇ ಸಂಭಂಧವೇ ಇಲ್ಲದಂತೆ ತನ್ನದೇ ಜವಾಬ್ಧಾರಿಯೆಡೆಗೆ ಮುಖ ಮಾಡಿರುತ್ತಾಳೆ. ಕಲಿತ ಶಾಲೆಗೆ  ನಾಲ್ಕು ವರ್ಷ ನಂತರ ಒಮ್ಮೆಯಾದರೂ ಹೋಗಿ ನೋಡಿ  ನಮ್ಮ ಎದೆವರೆಗೆ ಬರುತಿದ್ದ ಡೆಸ್ಕು ಬೆಂಚು  ನಮ್ಮ ಮೊಣಕಾಲಿಗೆ   ಬಂದಿರುತ್ತೆ. ನಮಗೆ ಪಾಠ ಹೇಳಿಕೊಟ್ಟ  ಮೇಷ್ಟ್ರ ಕಪ್ಪಗಿನ ಕೂದಲು ಬಿಳಿಯಾಗಿ  ಅನುಭವವನ್ನ ತೋರಿಸುತ್ತಾ ಇರುತ್ತದೆ. ತೆಳು ದನಿಯಲ್ಲಿ ಮಾತನಾದುತಿದ್ದವನು  ಅದೇನೋ ಎರಡುವರ್ಷ ಕಳೆದ ಮೇಲೆ ಮಾತನಾಡುವಾಗ ಗಡಸು ಸ್ವರದಲ್ಲಿ ಮಾತನಾಡುತ್ತಾನೆ..ನಯವಾಗಿದ್ದ ಗಡ್ಡ  ಶೇವು  ಮಾಡುತ್ತಿರುವ ಗಡ್ಡ ವಾಗಿರುತ್ತದೆ.

ಚಿಕ್ಕಮಗಳು ಅಪ್ಪನಲ್ಲಿ ಒಪ್ಪಿ ಕೇಳಿತಂತೆ..ಸ್ವಲ್ಪ ಸಮಯವಾದನಂತರ ಗಂಡನಲ್ಲಿ...ಇನ್ನು ಸ್ವಲ್ಪ ಸಮಯವಾದನಂತರ   ಮಗುವಿನಲ್ಲಿ....ಇನ್ನು ಮುಂದೆ ಹೋದನಂತರ ಪುಳ್ಳಿಯಲ್ಲಿ..(ಮಗುವಾದ ನಂತರ ಅಪ್ಪನಲ್ಲಿ,...ಪುಳ್ಲಿಯಾದನಂತರ  ಮಗನಲ್ಲಿ....ಉಹುಂ !  ಬೇಡ...ಅದಕ್ಕೆ!)

ಇದೆಲ್ಲಾ  ಬದಲಾವಣೆ ಇಲ್ಲೊಂದು   ವಿಕಾಸ.

ಬದಲಾವಣೆ -ವಿಕಾಸ  ಎರಡು  ನಾಣ್ಯಗಳ   ಮುಖದಂತೆ , (sides  of  the Two  coins  , not just   like    Two sides of  A  coin . ) ಬದಲಾವಣೆಗೊಂದು   ಮೌಲ್ಯವಾದರೆ ..ವಿಕಾಸಕ್ಕೆ ಇನ್ನೊಂದು ಮೌಲ್ಯ. ಎಲ್ಲಾ ವಿಕಾಸವೂ ಒಂದು ಬದಲಾವಣೆ ಕಂಡಿದೆ... ಆದರೆ ಎಲ್ಲ ಬದಲಾವಣೆ ವಿಕಾಸವನ್ನು ಹೊಂದಬೇಕೆನಿಲ್ಲ. ವಿಕಾಸವಾಗಬೇಕೆಂದು ಜೀವನದಲ್ಲಿ ಅದೆಷ್ಟೊಂದು ಬದಲಾವಣೆಗಳನ್ನು ಮಾಡುತ್ತೀವಿ, ಅವುಗಳೆಲ್ಲ ಬದಲಾವಣೆಯೇ  ಆಗಿ ಇರುತ್ತವೆಯೇ ಹೊರತು ವಿಕಾಸವಾಗಿರುವುದಿಲ್ಲ. ಬದಲಾವಣೆಯ  frequency  ಜಾಸ್ತಿಯಾದರೆ ಕೊನೆಗೆ ಚಂಚಲವಾಗಿ ಬಿಡುತ್ತವೆ.
ವಿಕಾಸ - ಬದಲಾವಣೆ ಯಿಲ್ಲದ ನಮ್ಮ ಬದುಕು  ನಿಂತಲ್ಲೇ ನಿಂತಿರುತ್ತದೆ. ಗ್ಯಾರೇಜಿನಲ್ಲಿರುವ  ಯಾವುದೋ  ಜಮಾನದ ಟಯರಿನಂತೆ...  ಇತ್ತ ಹೆಚ್ಚ ಸವೆಯುತಿರುವುದಿಲ್ಲ, ಬಲ ಹಾಕದೆ ಮುಂದೆ ಉರುಳೋದೂ ಇಲ್ಲ . ಜಡತ್ವದಿಂದ  ಹೊರಬಂದಿರುವುದಿಲ್ಲ, ಹೊರಬರುವುದೂ ಇರುವುದಿಲ್ಲ. ಬೇರೊಂದು ಸಿದ್ಧಾಂತವನ್ನೇ ಒಪ್ಪಬೇಕೆಂದು ಹೇಳುತ್ತಿಲ್ಲ.ಯಾವುದೋ ಒಂದು ಸಿದ್ಧಾಂತಕ್ಕೆ  ಅಂಟಿಕೊಂಡು - ಜಂಟಿಕೊಂಡು ಇರುವುದರಿಂದ, ನಮ್ಮ ಅಭಿಪ್ರಾಯ/ಸಿದ್ಧಾಂತದ  ನವೀಕರಣಕ್ಕೂ ಯೋಚನೆಯೇ ಮಾಡಿರುವುದಿಲ್ಲ. ನವೀಕರಣ ಮಾಡದ ಹೊರತು ಬದಲಾವಣೆಗೆ  ಅವಕಾಶವಿದೆಯಷ್ಟೇ ಹೊರತು ವಿಕಾಸಕ್ಕಿಲ್ಲ.
 ಹಲವು ಸಲ  ನಮ್ಮ ಒಳ್ಳೆಯ  ಆಸೆ , ಬಯಕೆಗಳು  ನಮ್ಮನ್ನ ವಿಕಸಿಸುತ್ತದೆ. ಬಯಕೆಗಳನ್ನು ಕಾರ್ಯರೂಪಗೊಳಿಸುವಾಗ ಹಲವಾರು ಪಾಠಗಳನ್ನ,ಜೀವನಾಂಶಗಳನ್ನ, ಮೌಲ್ಯಗಳನ್ನ,ಬದಲಾವಣೆಗಳನ್ನ ನಮ್ಮದಾಗಿಸುತ್ತೀವಿ. ಬಯಕೆಗಳನ್ನ ಕಾರ್ಯರೂಪಗೊಳಿಸಲು ಪ್ರಯತ್ನಿಸದೇ ಇದ್ದಾಗ ಅವುಗಳು 'ಬಯಕೆಗಳೇ' ಆಗಿ  ಇರುತ್ತವೆ. ತಿಳಿಯಬೇಕಾದ ಪಾಠ,ಸೇವಿಸಬೇಕಾದ  ಜೀವನಾಂಶ,ಪಡೆಯಬೇಕಾದ ಮೌಲ್ಯಗಳನ್ನ, ಆಗಬೇಕಾದ ಬದಲಾವಣೆಗಳನ್ನ ಎಲ್ಲೋ ಕಳಕೊಳ್ಳುತ್ತೀವಲ್ವಾ..? 

ನಾನಂತೂ   ನನ್ನ  ಜಡತ್ವದಿಂದ ಹೊರಬಂದಿಲ್ಲ.....ಯಾವಾಗ ಹೊರ  ಬರುತ್ತೀನೋ..?




Thursday 10 November 2011

ಸಮಗಾರ ಹೇಳಿದ ಕಥೆ....

                                                        KP  Nettar ' s
                                               ಸಮಗಾರ ಹೇಳಿದ ಕಥೆ.... 

ಚರ್ಮದ  ಬೆಲ್ಟು, ಚಪ್ಲಿ  ಬಗ್ಗೆ ಅವನಿಗೆ  ಎಲ್ಲಿಲ್ಲದ ಪ್ರೀತಿ, ದಿನಾ ನೋಡುವುದು ,ಮಾತನಾಡುವುದು ,ಕೆಲಸಮಾಡುವುದು ಚಪ್ಲಿ ಬಗ್ಗೆ.ಪ್ರೀತಿಯಿಂದ ಹೊಲಿಗೆ ಹಾಕುವುದು , ಪಾಲಿಶ್  ಮಾಡುವುದು, ಚಪ್ಲಿಯನ್ನ  ಓರಣ ವಾಗಿರಿಸುವುದು. ಅವನು ಈ ಕೆಲಸವನ್ನ ಪ್ರೀತಿಸಿದ  ಕಾರಣ  ಬದುಕೂ ಅವನನ್ನ ಪ್ರೀತಿಸಿತ್ತು. ಅವನೊಬ್ಬ ಚಾಣಾಕಿ ಸಮಗಾರನಾಗಿದ್ದ. ಈ ಕಾರಣಕ್ಕೆ  ಊರಿನ  ಜನರೆಲ್ಲಾ ಚಪ್ಲಿಗಾಗಲಿ, ಬೆಲ್ಟು ಗೆ ಆಗಲಿ ಅವನಲ್ಲೇ ಹೋಗುತ್ತಿದ್ದರು....

ಒಂದು ದಿವಸ  ನಾಲ್ಕು ಜನ ಗೆಳತಿಯರು  ಕಾರಿನಲ್ಲಿ   ಯಾವುದೋ ಸಮಾರಂಭಕ್ಕೆ  ಹೊರಟರು. ದಾರಿ ಮಧ್ಯದಲ್ಲಿ  ಒಬ್ಬಳು  'ಬುಕೈ'  ಕೊಂಡುಕೊಳ್ಳಬೇಕೆಂದು  ನೆನಪಿಸಿದಳು. ಅಂಗಡಿಗೆ ಹೋಗಿ ಗೊಂಚಲಿನಲ್ಲಿ 4  ಚೆಂದದ ಹೂವುಗಳಿರುವುದನ್ನೇ ಆಯ್ಕೆ ಮಾಡಿದರು. ಹೀಗೆ ಮತ್ತೆ ಕಾರಿನೊಳಕ್ಕೆ  ಬರುವಷ್ಟರಲ್ಲಿ ಒಬ್ಬಳ ಚಪ್ಪಲಿಯ ಉಂಗುಷ್ಟ ತುಂಡಾಯಿತು. ನಾಲ್ಕೂ ಜನರು  ಸಮಗಾರನ  ಹತ್ತಿರ ಬಂದರು.  ಸಮಗಾರನು ಉಂಗುಷ್ಟಕ್ಕೆ ಹೊಲಿಗೆ ಹಾಕಲು ಶುರು ಮಾಡಿದನು. ನಿಮ್ಮ ಕಾರಿನ ಕ್ಲಚ್ ಗಟ್ಟಿಯಾಗಿರುವುದರಿಂದ ಸಡಿಲಿಸಿದರೆ ಒಳ್ಳೆದು ಎಂದನು. ಕಾರಿನ  ಕ್ಲಚ್  ಗಟ್ಟಿಯಾಗಿರುವುದು  ನಿನಿಗೆ ಹೇಗೆ ಗೊತ್ತಾಯಿತೆಂದು ಕೇಳಿದಳು. ಕ್ಲಚ್ಚನ್ನು ಅದುಮುವ ಪಾದದ ಭಾಗ ಬಹಳ ಅಚ್ಚನ್ನು  ಉಂಟು ಮಾಡಿದೆ ಎಂದನು. ಇದರಿಂದ ಕುತೂಹಲಗೊಂಡ  ಗೆಳತಿಯರು ಹಾಗಾದರೆ ತಮ್ಮ ಬಗ್ಗೆಯೂ ಹೇಳಬೇಕೆಂದರು. ಒಬ್ಬಳಲ್ಲಿ ನೀವು ಗ್ರಾಮೀಣ ಪ್ರದೇಶದಿಂದ ಬಂದಿರುತ್ತೀಯ,ಇನ್ನೊಬ್ಬಳಲ್ಲಿ  ಬಹಳ ಹೊತ್ತು ಅಡುಗೆ ಮನೆಯಲ್ಲಿಯೇ ಇರುತ್ತೀಯ, ಇನ್ನೊಬ್ಬಳಲ್ಲಿ ನೀನೊಬ್ಬಳು ನಾಟ್ಯ ಪ್ರವೀಣೆ ಅಂದ. ಹೇಗೆ ಸರಿಯಾಗಿಯೇ  ಹೇಳಿದಿ  ಎಂದು ಆಶ್ಚರ್ಯದಿಂದ ಕೇಳಿದರು. ಮೊದಲನೆ  ಯವಳಲ್ಲಿ ನಿನ್ನ ಪಾದವು ತುಂಬಾ ದಡರು ನಿಂದ ಕೂಡಿದೆ, ಇನ್ನೊಬ್ಬಳ  ಪಾದ ತುಂಬಾ ಶುಷ್ಕದಿಂದ  ಕೂಡಿ  ನೆರಿಗೆ ಗಳು ಶುರುವಾಗಿದೆ, ಇನ್ನೊಬ್ಬಳಲ್ಲಿ ಹೆಜ್ಜೆ  ಹಾಕುವ ಪಾದದ  ಅಂಚುಗಳು ಗಟ್ಟಿಯಾಗಿದೆ! ಎಂದ. ಅಷ್ಟು ಹೊತ್ತಿಗೆ ಉಂಗುಷ್ಟದ ಹೊಲಿಗೆಯೂ ಸಂಪೂರ್ಣವಾದವು. ಮತ್ತೆ   ಚಪ್ಪಲಿಯನ್ನು ಪಾಲಿಶ್  ಮಾಡುತ್ತಲೇ ...ಇರುವಾಗ  ಒಬ್ಬಳ ಕೈಯಿಂದ ಪುಸ್ತಕ  ಜಾರಿ  ಇವನ ಕೈಗಳಿಗೆ ಬಿದ್ದವು. ಹೀಗಿರುವಾಗ ಒಂದು ಪುಟ ಸಂಪೂರ್ಣವಾಗಿ ಪಾಲಿಶ್ ಮಯವಾದವು...ಆ ಪುಟ ತುಂಬಾ ಮುಖ್ಯ ವಾದವು  ಪಾಲಿಶ್ ನ್ನು ತೆಗೆಯ ಬೇಕೆಂದು ರೇಗಿದಳು. ಸಮಗಾರ ಪಾಲಿಶ್ ನ್ನು ತೆಗೆಯಲು ಪ್ರಯತ್ನಿಸಿದನು. ಇನ್ನೂ ರೇಗಿದಳು. ಸಮಗಾರ ತಾಳ್ಮೆಯನ್ನು  ಕಳಕೊಂಡವನಂತೆ   ಕಂಡು ಬಂದನು... ಬುಕೈ  ಯಲ್ಲಿರುವ  ಹೂವನ್ನು ನಾಲ್ಕೂ ದಿಕ್ಕುಗಳಲ್ಲಿ ಎಸೆದನು.   ಮತ್ತೆ ಜೋರಾಗಿ ರೇಗಿದಳು. ಬರು ಬರುತ್ತಾ ಇವನು ಪ್ರಯತ್ನ ವನ್ನು ನಿಲ್ಲಿಸಿದನು...

ನಾನು ಎಸೆದ ಹೂವುಗಳೆಲ್ಲಾ ಎಲ್ಲಿ ಹೋದವು ಗಮನಿಸಿದ್ದೀರಾ...? ಎಂದನು . ಯಾವ ಹೂವುಗಳೂ ಅಲ್ಲಿ ಇರಲಿಲ್ಲ. "ನಮ್ಮ ಸುತ್ತ ನಾಲ್ಕು ವಿವಿಧ ರೀತಿಯ   ಜನರು  ಬಂದು ಹೋಗಿದ್ದಾರೆ. ಮೊದಲನೆಯವನು   ಆಸ್ತಿಕ, ಹೂವನ್ನು ದೇವರಲ್ಲಿ  ಇಟ್ಟಿದ್ದಾನೆ  , ಎರಡೆನೆಯವನು ರಕ್ಷಕ   ಹೂವಿನ ಮುಳ್ಳನ್ನು  ಬೇಲಿಯೊಂದಿಗೆ ಇರಿಸಿದ್ದಾನೆ.  ಇನ್ನೊಬ್ಬ ರಸಿಕ ಪ್ರೇಮಿ  ಹೂವನ್ನು ಗೆಳತಿಗೆ ತೋರಿಸುತ್ತಿದ್ದಾನೆ! ಇನ್ನೊಬ್ಬ ಅವಿವೇಕಿ  ಸಮಾಜ ಘಾತುಕ  ಮುಳ್ಳನ್ನು  ಅಂಗಡಿಯಲ್ಲಿರುವ  ಬಾಳೆ  ಹಣ್ಣಿನೊಳಗೆ  ಇರಿಸುತಿದ್ದಾನೆ."  ಎಂದ.
 ಇದನ್ನೆಲ್ಲಾ   ಯಾಕಪ್ಪಾ  ಹೇಳುತ್ತೀಯಾ ..  ಅವರಲ್ಲೇ ಒಬ್ಬಳು ಕೇಳಿದಳು...ಸಮಗಾರ ತನ್ನ ಪ್ರಯತ್ನ ದಿಂದ ಆ ಪುಟದಿಂದ  ತೆಗೆದ  ಪಾಲಿಶ್ ನಲ್ಲಿ ಬರೀ ಶೀರ್ಷಿಕೆ  ಮಾತ್ರ ಕಾಣುತಿತ್ತು ... " ಜಗತ್ತು  ಮತ್ತು ವೈವಿದ್ಯತೆ . !"

ಅವರು ಹೋಗುತಿದ್ದುದು  ಬೇರೆ  ಯಾವ ಸಮಾರಂಭಕ್ಕೂ ಅಲ್ಲ. " ಜಗತ್ತು ಮತ್ತು ವೈವಿದ್ಯತೆ. " ಎಂಬ ಬಗ್ಗೆ  ಮಂಡಿಸಲು .
1000  ಕೋಟಿ ಜನರಿಗೂ ಜಗತ್ತು ಒಂದೇ , ಸಮಯದ ಪ್ರಮಾಣ ವೂ ಒಂದೇ!  ಉಪಯೋಗಿಸುವ  ಅವಕಾಶ ,ಮತ್ತು ರೀತಿ, ಸಮಯ  ವೈವಿದ್ಯವನ್ನು ಸೃಷ್ಟಿಸುತ್ತದಲ್ವೆ ..? ಎಂದು ಮೇಲಿನ ನಿದರ್ಶನ ಕೊಟ್ಟು ಮಂಡಿಸಿದಳು......    


Sunday 30 October 2011

ನವಿಲೇಕೆ ಹಾಡಲಿಲ್ಲ ..?

                                     ನವಿಲೇಕೆ  ಹಾಡಲಿಲ್ಲ ..?    

 ಕಾಡಿನಲ್ಲಿ  ಒಮ್ಮೆ  ಸಾಂಸ್ಕೃತಿಕ  ಸಮ್ಮೇಳನವೇ  ನಡೆಯಿತು . ಅಲ್ಲಿ  ಸಿಂಹ , ಆನೆ, ಕುದುರೆ ,ಒಂಟೆ, ಇಲಿ, ಹಾವು, ಕಪ್ಪೆ , ಕೋಗಿಲೆ ,ನವಿಲು,  ನಾಯಿ, ಕೋತಿ  ಎಲ್ಲಾ ಪ್ರಾಣಿಗಳು  ಮೇಳೈಸಿದವು . ತಮ್ಮ ತಮ್ಮ ಪ್ರತಿಭೆಯನ್ನ  ಪ್ರದರ್ಶಿಸಲು  ನಿರ್ಧರಿಸಿದವು. ಸಿಂಹ ಘರ್ಜನೆಯನ್ನು  ಮಾಡದೆ  ತನ್ನ  ಗಾಂಭೀರ್ಯ ಹೆಜ್ಜೆಯನ್ನು ಹಾಕುತ್ತಾ  ಕೊರಳಲ್ಲಿರುವ  ಗರಿ ಗರಿ ಕೂದಲನ್ನು ಕೆದರುತ್ತಾ  ತನ್ನ ಝಳಕ್ಕನ್ನು  ತೋರಿಸುತಿತ್ತು.   ಆನೆ ತನ್ನ ಸೊಂಡಿಲನ್ನು ತಿರುಗಿಸುತ್ತಾ ತನ್ನ ತನ್ನದೇ ಭಂಗಿಯನ್ನು ತೋರಿಸಿತ್ತು,  ಇಲಿಯು  ಒಂದೇ ನಿಮಿಷದಲ್ಲಿ  ಜೇಡ ಕಟ್ಟಿದ  ಹತ್ತಾರು ಪದರದ ಬಲೆಯನ್ನ ತುಂಡರಿಸಿದ್ದನ್ನು  ಕಂಡು ಎಲ್ಲರೂ ವಿಸ್ಮಿತರಾದರು. ಒಂಟೆ ತನ್ನ  ಕತ್ತು ಮತ್ತು ಬೆನ್ನಿನಲ್ಲಿ ಥಳುಕನ್ನು ತೋರಿಸುತಿತ್ತು.  ಹಾವು ತನ್ನ ಹೆಡೆ ಎತ್ತಿ  ಬಾಲವನ್ನು ಸುಂದಿಸುತ್ತಾ  ಬಳ್ಳಿಯಂತೆ  ಆಕೃತಿ  ತಂದವು. ನಾಯಿ ಎಲ್ಲೋ ಹುದುಕಿಟ್ಟ  ಮಾಂಸದ ತುಂಡನ್ನ ಕ್ಷಣಾರ್ಧದಲ್ಲಿ  ತೋರಿಸಿಕೊಟ್ಟಿತು. ಕುದುರೆ  ತನ್ನ  ಬಾಲವನ್ನು   ಅಲ್ಲಾಡಿಸುತ್ತಾ ತಾಳಕ್ಕೆ  ತಕ್ಕಂತೆ ಓಡುತ್ತಾ ನರ್ತಿಸಿ ಎಲ್ಲರ ಮನಸೂರೆ ಗೊಳ್ಳುವಂತೆ  ಮಾಡಿತು. ಹೀಗೆ ಎಲ್ಲ ಪ್ರಾಣಿಗಳು  ತಮ್ಮ ತಮ್ಮ ಪ್ರತಿಭೆಗಳನ್ನು  ಒಂದಕ್ಕಿಂತ ಒಂದು  ಮಿಗಿಲು ಎಂಬಂತೆ ಪ್ರದರ್ಶಿಸಿದವು . ಕೊನೆಯ ಸರದಿ  ಕೋಗಿಲೆ ಮತ್ತು  ನವಿಲಿನದ್ದಾಗಿತ್ತು. ಕೋಗಿಲೆ ನವಿಲಿನಲ್ಲಿ " ತಾಕತಿದ್ದರೆ  ನೀನು ನನ್ನಂತೆ  ಹಾಡಿ ನನಗಿಂತ ಹೆಚ್ಚು ಚಪ್ಪಾಳೆ ಗಿಟ್ಟಿಸಬೇಕು" ಎಂದಿತು . ಬಹಳ ಇಂಪಾದ ಹಾಡನ್ನು ಕೇಳಿ  ಜೋರು ಚಪ್ಪಾಳೆ ಬಂತು. ಮುಂದಿನ ಸರದಿ ನವಿಲಿನದ್ದಾಗಿತ್ತು. ನವಿಲು ಸ್ವಲ್ಪ ಯೋಚಿಸಿ,   ಕೋಗಿಲೆ  ಹಾಡಿದ ತಾಳದಲ್ಲಿಯೇ  ತನ್ನ ಗರಿಯನ್ನು ಕೆದರಿ ಹಾಡುವುದರ ಬದಲಾಗಿ ಕುಣಿಯಲಾರಂಭಿಸಿತು.  ವಿವಿಧ ಭಂಗಿಯಲ್ಲ್ಲಿ  ನರ್ತಿಸಿತು  ಅದರ ನೃತ್ಯ  ಆಕರ್ಷಣೀಯವಾಗಿತ್ತು. ಸಮ್ಮೇಳನಕ್ಕೆ ಬಂದುದು ಸಾರ್ಥಕ ಎಂದು ಎಲ್ಲರೂ  ಮನದಲ್ಲೇ ಅಂದು ಕೊಂಡರು. ಸಾವಿರ ಕಣ್ಣಿ ನ  ನೃತ್ಯ ನೋಡಲು ನಮಗೆ ಎರಡೇ  ಕಣ್ಣು ಸಾಕೆ? ಎಂದು ಮನದಲ್ಲೇ ಮರುಗಿದರು.ನಾಟ್ಯ  ಮುಗಿದಂತೆ ಯಾರು ಚಪ್ಪಾಳೆಯನ್ನು  ತಟ್ಟಲಿಲ್ಲ......ಬದಲಾಗಿ  ಎಲ್ಲರೂ   "ಇನ್ನೊಮ್ಮೆ" " ಇನ್ನೊಮ್ಮೆ"   "ಇನ್ನೊಮ್ಮೆ"  ಎಂದು ಘೋಶವನ್ನು  ಹಾಕಿದರು.

ಇದನ್ನು ದೂರದಿಂದ  ನೋಡುತ್ತಾ ಗಮನಿಸುತಿದ್ದ.......

ಇಬ್ಬರು ವಿದ್ಯಾರ್ಥಿಗಳು: "ನಾನು  ಈ ವಿದ್ಯಾಲಯಕ್ಕೆ ಬರಲು ಕಾರಣ ನಿನ್ನನ್ನು   ನೋಡಿ ನಿನ್ನಂತೆ  ಆಗಬೇಕೆಂದು, ನಾನೂ ಅಷ್ಟೇ  ನನ್ನ  ಅಣ್ಣ  ಯಾವುದನ್ನು  ಆರಿಸಿದ್ದಾನೋ ಅದೇ ವಿಷಯವನ್ನ  ಆರಿಸಿದ್ದೇನೆ  ! "

ಇಬ್ಬರು ವ್ಯಾಪಾರಿಗಳು:   "ನಾನು ಈ ವ್ಯಾಪಾರ ಮಾಡಲು ಕಾರಣ ನೀನು ,ಏಕೆಂದರೆ ನಿನ್ನ ವ್ಯಾಪಾರ ತುಂಬಾ ಲಾಭದಾಯಕದಾಗುತಿತ್ತು ;  ನಾನೂ ಅಷ್ಟೇ  ನನ್ನ ತಂದೆ ಮಾಡಿದ ವ್ಯಾಪಾರನೇ ಮಾಡ್ತಾ ಇದ್ದೀನಿ ! ". 

ಇಬ್ಬರು ಕೃಷಿಕರು: " ನೀನು  ಯಾವ ಕೃಷಿ ಮಾಡ್ತಾ ಇದ್ದಿಯೋ  ಅದೇ ಕೃಷಿಯನ್ನ ನೋಡಿ ನಾನೂ ಮಾಡ್ತಾ ಇದ್ದೀನಿ,;;ನಾನೂ ಅಷ್ಟೇ ಮುತ್ತಾತ ಮಾಡಿದ ಕೃಷಿಯನ್ನೇ  ಮಾಡ್ತಾ ಇದ್ದೀನಿ. !"

 ಗೆಳತಿಯರು: ನೀನು  ಹಾಗೆ ಸಿಂಗಾರ ಮಾಡಿದಿ ಎಂದು ನಾನೂ ಕಲಿತೆ......,

ತಂತ್ರಜರು: ನೀನು  ಆ ತಂತ್ರಜ್ಞಾನ  ಬಳಸಿದಿ ಎಂದು ನಾನೂ  ಅದೇ ತಂತ್ರಜ್ಞಾನ ಉಪಯೋಗಿಸಿದ್ದೀನಿ ....!!!

ಹೀಗೆ  ನಮ್ಮೊಳಗೇ  ಪ್ರತಿ ,ಅದರ ಅನು ಪ್ರತಿ , ಮರು ಪ್ರತಿ,ಗೆ   ತಿರು ಪ್ರತಿ,  ಯಾದಾಗ  ಸ್ವಾಭಾವಿಕವಾಗಿ ಪ್ರಗತಿಯಲ್ಲಿ  ಕುಂಠಿತ    ರಾಗುತ್ತೀವೇನೋ ..? ಸ್ಪರ್ಧೆಗೆ ಅವಕಾಶವನ್ನ  ಕಲ್ಪಿಸುತ್ತದೆಯೇ ಹೊರತು  ವಿಕಾಸ ಅಥವಾ ವೈವಿದ್ಯತೆಗೆ ಅಲ್ಲ. ಜೀವಿಗಳೆಲ್ಲಾ ಭೂಮಿಯವಸ್ತುವೇ.. ಪ್ರತಿಯೊಂದಕ್ಕೂ ಅದರದೇ ಆದ ಗುಣ ಶಕ್ತಿ ಇದೆ!
 "ವಜ್ರ ಆಕರ್ಷಿಸುವುದು ಅದರ ಪ್ರಜ್ವಲಿಸುವಿಕೆ ಯಿಂದ, ಅಯಸ್ಕಾಂತ  ಆಕರ್ಷಿಸುವುದು  ಅದರ ಗುರುತ್ವ ದಿಂದ !"  ಕೋಟಿ ಮೌಲ್ಯ ಇರುವ  ವಜ್ರ  ಚಿಕ್ಕ ಹುಡುಗನಿಗೆ  ಬೇಡ  ಅದು ಶೂನ್ಯ  ,ಅಯಸ್ಕಾಂತ ಕೆಳಗೆ ಬೀಳುವುದಿಲ್ಲ  ಎಂದು  ಕಬ್ಬಿಣದ  ಕಿಟಕಿಯಲ್ಲಿ ಜಾದೂ  ಮಾಡುತ್ತಾ ಇರುತ್ತಾನೆ . ಒಪ್ಪ  ಗೆಳತಿಗೆ ವಜ್ರ ತೋರಿಸಿ  ಅಯಸ್ಕಾಂತ  ಬರೀ ಶೂನ್ಯ. ತನ್ನ ಸೌಂದರ್ಯ ಮತ್ತು  ವಜ್ರದಲ್ಲಿ ಜಾದೂ ಮಾಡುತ್ತಾ ಇರುತ್ತಾಳೆ !

ತಾಕತಿದ್ದರೆ ನನ್ನಂತೆ  ಹಾಡು ಎಂದು ಕೋಗಿಲೆ ಸವಾಲೆಸೆದಾಗ ನವಿಲು ಕೋಗಿಲೆಯಂತೆ ಆಗಲು ಹೊರಟಿಲ್ಲ,  ಇಲ್ಲದ ತಾಕತ್ತನ್ನ  ತೋರಿಸಲು ಹೋಗಿಲ್ಲ ಇರುವ ತಾಕತ್ತಿನಲ್ಲಿ ರಂಜಿಸಿತಲ್ವೆ..?   ನವಿಲು  ಮತ್ತೊಮ್ಮೆ  ನಾಟ್ಯವಾಡಿತು.


Thursday 27 October 2011

' ಗೊಂಜೇಲ ' ರ ಕಂಡಿರಾ ..?

                                  '  ಗೊಂಜೇಲ ' ರ   ಕಂಡಿರಾ ..?

 ಕಾಮತ್ ಜಾತಿಯವರ ಹೋಟೆಲ್ ನಲ್ಲಿ ರುಚಿಯಾದ ಊಟವನ್ನ ಉಂಡಿದ್ದೀವಿ, ಗತ್ತು  ಇರುವ ಶೆಟ್ಟಿ ಜಾತಿಯವರನ್ನು ಕಂಡಿದ್ದೀವಿ, ಶಾಲು ಹಾಕಿ ಕೊಂಡು ಗ್ರಾಮದಲ್ಲಿರುವ  ಗೌಡರನ್ನ ನೋಡಿದ್ದೀವಿ, ಪೂಜೆ ಮಾಡುವ ಬ್ರಾಹ್ಮಣ ಜಾತಿಯನ್ನ ನೋಡಿದ್ದೀವಿ, ಲಾಭದಾಯಕವಾಗಿ  ವ್ಯಾಪರಮಾಡುವ ಮುಸಲ್ಮಾನ ಜಾತಿಯವರಲ್ಲಿ ವ್ಯಾಪಾರ ಮಾಡಿರುತ್ತೀವಿ,  ಕ್ರಿಶ್ಚ್ಯನ್  ಜಾತಿಯವರಿಂದ   ಶಾಂತಿ ಮಂತ್ರ ವನ್ನ ಕೇಳಿರುತ್ತೀವಿ ,...ಹೀಗೆ ಹಲವಾರು  ಜಾತಿ ,ಜಾತಿಯೊಳಗೆ  ಐನೂರ ಎಂಟು  ಜಾತಿ, ಅದರಲ್ಲಿ ಮುನ್ನೂರ ಎಂಟು ಉಪಜಾತಿ,  ಆಯಾಯ ಜಾತಿಗಳಲ್ಲಿ ವಿವಿಧ ಕ್ರಮಗಳು.

 ' ಗೊಂಜೇಲ '  ಎಂಬ ಜಾತಿಯನ್ನ ಕೇಳಿದ್ದೀರಾ? ನೋಡಿದ್ದೀರಾ?  .....ಕೇಳಿ, ಇವರು ಅಲ್ಪ  ಸಂಖ್ಯಾತರು ಅಲ್ಲ,ಬಹುಸಂಖ್ಯಾತಾರೆ  ಆಗಿರುತ್ತಾರೆ!   ಇವರು ಯಾವುದೋ ಬುಡಕಟ್ಟು ಜನಾಂಗದವರಾಗಿರುವುದಿಲ್ಲ , ನಮ್ಮ ಓರಗೆಯವರೇ, ಬಂಧುಗಳೇ ,ನಮ್ಮೊಂದಿಗೆ ಕಲಿಯುವವರೇ, ನಮ್ಮೊಂದಿಗೆ ಹಾಸ್ಟೆಲ್ ನಲ್ಲಿರುವವರೇ, ನಮ್ಮೊಂದಿಗೆ ಉದ್ಯೋಗ ಮಾಡುವವರೇ, ನಮ್ಮ ಆಸಕ್ತಿ, ಹವ್ಯಾಸಿಗರೇ ಆಗಿರುತ್ತಾರೆ.

"ಒಮ್ಮೆ ಸೂಜಿ  ಕೊಡುತ್ತೀರಾ..? ಮುಳ್ಳು ತೆಗೆದ ತಕ್ಷಣ  ನಾಳೆ  ಒಳಗೆ ಕೊಡುತ್ತೀನಿ " " ನಿಮ್ಮಲ್ಲಿ  ಆ ಪುಸ್ತಕ ಇದಿಯಲ್ಲಾ.. ಪುಸ್ತಕ ಓದಿ ನಂತರ ವಾಪಾಸ್ ಮಾಡುತ್ತೀನಿ" "ಪರೀಕ್ಷೆ  ಕಳೆದು  ಗೈಡು  ಪುಸ್ತಕ  ವಾಪಾಸ್ ಮಾಡುತ್ತೀನಿ "      " ನಾನೂ ಸಂಕರ್  ನಾಗ್  ಫ್ಯಾನು  ಅವನದ್ಯಾವುದಾದ್ರು  CD   ಐತಾ ..? ಸಿನಿಮಾ ನೋಡಿ ವಾಪಾಸ್ ಕೊಟ್ಬಿಟ್ಟೆ "   "ಸಂಜೆಯೊಳಗಾಗಿ   ಸ್ಕ್ರೂ  ಹಾಕಿ  ಕಟ್ಟಿಂಗ್ ಪ್ಲೇಯರ್ ,ಸ್ಕ್ರೂ ಡ್ರೈವರ್  ವಾಪಸ್ ಮಾಡುತ್ತೀವಿ"  "ನೈಲ್ ಪಾಲಿಶ್ ಹಾಕಿ ತಕ್ಷಣ ವಾಪಸ್ ಮಾಡ್ತೀನಿ..."
 ಹೀಗೆ  ಒಮ್ಮೆಗೆ  ಎಂದು ನಮ್ಮ ಕೈಯ್ಯಿಂದ  ತಗೊಂಡು  ಹೋದ  ವಸ್ತು ಅವರದ್ದೇ  ಆಗಿರುತ್ತದೆ! ಇದು ಮುಂದೆ ಹೀಗೆ ಆಗಬಹುದು ಎಂದು ನಮಗೂ ಗೊತ್ತಿರುತ್ತದೆ  ಆದರೆ ದಾಕ್ಷಿಣ್ಯಕ್ಕೆ ಸಿಕ್ಕಿಕೊಂಡು ಕೊಟ್ಟುಬಿಡುತ್ತೇವೆ. ನಾವು ಕೊಟ್ಟಿಲ್ಲ ಅಂದ್ರೆ  ನಮ್ಮದೇ ತಪ್ಪು ಎಂದು ನಮ್ಮ ವಠಾರದಲ್ಲಿ  ರಾದ್ಧಾಂತ ಮಾಡಿರುತ್ತಾರೆ. ಅವರಿಗೆ ಉಪಯೋಗವಾದಮೇಲೆ ವಾಪಾಸ್ ಮಾಡುತ್ತೀರಾ ಎಂದು ಕೇಳಿದೇವಾ  ಅಲ್ಲೂ    ಇವನಲ್ಲಿ ಇನ್ನುಮುಂದೆ ಯಾರೂ  ಕೇಳಲೇ  ಬೇಡಿ  ಎಂದೂ  ರಾದ್ಧಾಂತ  ಮಾಡುತ್ತಾರೆ. ಇವರು ಅನುಕೂಲಸ್ತರಲ್ಲದವರಲ್ಲ, ಅನುಕೂಲಸ್ತರೆ ಆಗಿರುತ್ತಾರೆ. ನೆನಪಿಡಬೇಕಾದದ್ದು ಇದು ನಮಗೆ ಮುಳ್ಳು ಚುಚ್ಚಿದಾಗ  ಅವರಲ್ಲಿ  ಸೂಜಿ ಏನು  ಸಲಾಕೆ , ಐಪಾಡ್  ಗಳೇ ಇರುತ್ತವೆ, ಆದರೆ ಅವುಗಳಿಂದ  ನಮ್ಮ ಮುಳ್ಳು  ತಗೆಯೋಕೆ ಆಗುವುದಿಲ್ಲ . ಕೊನೆಗೆ ಅದೇನು ಮಹಾ ಕೋಟಿ ರೂಪಾಯಿದಾ..? ಅಂತಲೂ ಉಸುಬುತ್ತಾರೆ. ನಮಗೆ ಬೇಕಾದ ಸೂಜಿ ಕೊಳ್ಳಲು , ಬೇಕಾದ ಪುಸ್ತಕ ತಗೊಳ್ಳಲು ,ಬೇಕಾದ ಸಿ ಡಿ ತಗೊಳ್ಳಲು ,ಕೋಟಿಗಿಂತಲೂ  ಹೆಚ್ಚಾದ  ಹುಡುಕಾಟ ಮಾಡಿರುತ್ತೀವಿ, ಸಮಯ ಕಳೆದಿರುತ್ತವೆ, ಆದರೆ ಅವರ    ' ಗೊಂಜೇಲು '   ತನಕ್ಕೆ     ಇದೆಲ್ಲವೂ ನಗಣ್ಯ, ಯಾವುದೂ ಕಾಣಿಸುವುದಿಲ್ಲ  ..

ಚಹಾ ಕುಡಿಯಲು ಒಟ್ಟಿಗೆ ಬಂದಿರುತ್ತಾರೆ, ಜೈಕಾರ  ಹಾಕಿಕೊಂಡು  ನಮ್ಮಲ್ಲೇ  ಇರುತ್ತಾರೆ, ಮದುವೆ ದಿಬ್ಬಣಕ್ಕೂ   ಊಟಕ್ಕೂ ಬಂದಿರುತ್ತಾರೆ..ಆದರೆ..;
ಇನ್ನೊಬ್ಬರಿಗೆ ಉಪಟಳ ಕೊಟ್ಟು ,  ತಗೊಂಡದನ್ನ  ಹಿಂದುರುಗಿಸದ, ರಾದ್ದಾಂತ ವನ್ನೇ ಇಷ್ಟ ಪಡುವ  ಗೊಂಜೇಲು ತನಕ್ಕೆ ದಿಕ್ಕಾರವಿರಲಿ, ಅವರೊಂದಿಗೆ ದಾಕ್ಷಿಣ್ಯದ  ಮಾತೇ    ಬೇಡ. ನಿಮ್ಮೊಂದಿಗೆ ಜೈ ಕಾರ ಹಾಕಲಿಲ್ಲ ಎಂದು  ನೀವು ಬೇಜಾರು ಪಡುವುದಿಲ್ಲ, ಮದುವೆ ದಿಬ್ಬಣಕ್ಕೆ ಬಂದು ಉಣದೆ ಇದ್ದರೂ ಚಿಂತೆಯಿಲ್ಲ, ನಿಮ್ಮೊಂದಿಗೆ  ಚಹಾ ಕುಡಿಯಲು ಒಟ್ಟಿಗೆ  ಬಂದಿಲ್ಲವಲ್ಲಾ  ಎಂಬ ತುಡಿಕೆಯಿಲ್ಲ. ಅವರು ಗೊಂಜೇಲು ತನವನ್ನ ಬಿಟ್ಟರೆ  ಅಷ್ಟೇ  ಸಾಕಲ್ವೆ..ಅದೇ ದೊಡ್ಡ ನೆಮ್ಮದಿ ಆಲ್ವಾ..?

ನನ್ನಲ್ಲಿರುವ  ಗೊಂಜೇಲು ತನಕ್ಕೆ  ಹಠಾವೋ  ಚಳುವಳಿ  ಇವತ್ತೇ ಶುರು  ಹಚ್ಕೊಂಡಿದ್ದೀನಿ....ನೀವು..?




Saturday 22 October 2011

ನೈಪುಣ್ಯತೆಯನ್ನು ಅರಸುತ್ತಾ....

                                          ನೈಪುಣ್ಯತೆಯನ್ನು  ಅರಸುತ್ತಾ....  

ನಾನು  ನನ್ನ ಡೊಮೈನ್ ಬದಲಾಯಿಸುತ್ತೀನಿ, ಇರುವ ಉದ್ಯೋಗವನ್ನು ಬಿಟ್ಟು  ಬೇರೊಂದನ್ನು ನೋಡುತ್ತೀನಿ, ಈ ಕೆಲಸ ನೆಟ್ಟಗಿಲ್ಲ ನೆಟ್ಟಗಿರೋದನ್ನು ಆರಿಸುತ್ತೀನಿ. ಹೀಗೆ ಇರುವ ಜಾಗದಲ್ಲಿ ,ಇರುವ ಕೆಲಸಗಳಲ್ಲಿ ,ಮಾಡುವ ಕಾರ್ಯಗಳಲ್ಲಿ  ದಿನೇ ಅಲವತ್ತು ಕೊಳ್ಳುವುದನ್ನು  ರೂಡಿ ಮಾಡಿಕೊಂಡಿರುತ್ತೀವಿ.
ನೀವು ಶೇವಿಂಗ್  ಮಾಡಿಸಲು ಹೋದಾಗ  ಯಾವಾಗಲು ನಿಮ್ಮನ್ನ ಶೇವು  ಮಾಡುವವನ ಹೊರತು ಇನ್ನೊಬ್ಬ ಮಾಡಲು ಹೊರಟರೆ ಯಾಕೋ ಮನಸು ಒಪ್ಪಲ್ಲ,ಹುಬ್ಬು ಕಟ್  ಮಾಡಿಸಲು, ವ್ಯಾಕ್ಸಿಂಗ್ ಮಾಡಿಸಲು  ಹೋಗುವ ನಿಮ್ಮ ಗಟ್ಟಿಗೆತ್ತಿ ಗೆಳತಿಯರಲ್ಲಿ ,ಅಕ್ಕ ತಂಗಿಯರಲ್ಲಿ ಅವರು ಹೋಗುವುದಕ್ಕಿಂತ  ದೊಡ್ಡ ಬ್ಯೂಟಿ ಪಾರ್ಲರ್ ಗೆ ಹೋಗಲು ಸಲಹೆ ಕೊಡಿ ಆಗ ಅವಳು ಒಪ್ಪಲ್ಲ ತನಗೆ ಇಷ್ಟ ವಾಗುವಂತೆ ಚೆನ್ನಾಗಿ   ಮಾಡುವ ಸಣ್ಣ ಪಾರ್ಲರ್ಗೆ ಹೊಗುತ್ತಾಳೆಯೇ ಹೊರತು ಇಷ್ಟವಿಲ್ಲದ ದೊಡ್ಡ ಪಾರ್ಲರ್ಗೆ ಹೋಗುವುದಿಲ್ಲ .ಕಾರಣ ಇಷ್ಟೆ ಸಲೂನ್ / ಬ್ಯೂಟಿ ಪಾರ್ಲರ್ ನವರ ನೈಪುಣ್ಯತೆ . ಅವರು ಹೇಗೆ ಇರಲಿ  ಅವರ ನೈಪುಣ್ಯತೆಗೆ  ನಮಗೆ ಗೊತ್ತಿಲ್ಲದಂತೆ  ನಾವು ಗೌರವ  ಕೊಡುತ್ತೇವೆ .  ಅದು  ಎಂದಿಗೂ  ಬಲವಂತವಾಗಿ  ಪಡೆದದ್ದೂ ಆಗಿರುವುದಿಲ್ಲ . ಅವರ ಮೌಲ್ಯವನ್ನು  ಹೆಚ್ಚಿಸಿರುವುದು  ಅವರ ನೈಪುಣ್ಯದಿಂದಲೇ ! ಗಾಡಿಯ ಶಬ್ದ ಕೇಳಿಯೇ  ಯಾವ ಪಾರ್ಟ್ ಸರಿಪಡಿಸಬೇಕೆಂದು  ಒಳ್ಳೆಯ ಫಿಟ್ಟರ್  ಪತ್ತೆಹಚ್ಚ್ಚಿರುತ್ತಾನೆ ,  ಬಟ್ಟೆಯನ್ನು  ನೋಡಿ  ಎಲ್ಲಿ ಹೊಲಿಗೆ  ಸರಿಯಾಗಿಲ್ಲ ಎಂಬುದನ್ನ  ಪಳಗಿದ ಟೈಲರ್ ಹೇಳಿರುತ್ತಾನೆ ,ಮನೆಯ  ಭೀಮು ಹೀಗೇನೆ  ನಿಲ್ಲಿಸ ಬೇಕಿತ್ತು ಎಂದು ಪರಿಣತಿ ಹೊಂದಿದ ಮೇಸ್ತ್ರಿ  ಹೇಳಿರುತ್ತಾನೆ.  ಇನ್ನೂ ಹುರಿಯಬೇಕಿತ್ತು  ಎಂದು ಅಡುಗೆ ಭಟ್ರು ಹೇಳಿರುತ್ತಾರೆ.
ಮೇಸ್ತ್ರಿಗಾಗಲಿ ,ಟೈಲರಿಗೆ, ಫಿಟ್ಟರ್ ಗೆ , ಕ್ಷೌರಿಕನಿಗೆ  ಇನ್ನು ಯಾರೇ ಆಗಿರಲಿ  ನೈಪುಣ್ಯತೆ  ಗಾಳಿಯಲ್ಲಿ ಹಾಗೆ  ತೇ ..ವ..ಲಿ..ಸಿಕೊಂಡು ಬಂದಿರುವುದಿಲ್ಲ . ಕೆಲಸದಲ್ಲಿನ ಒಂಚೂರು ಹೆಚ್ಚಿನ ಶ್ರದ್ಧೆ , ಅಚ್ಚುಕಟ್ಟುತನ , ಪೂರೈಸುವಿಕೆ, ಅದೆಲ್ಲೋ ಹಿಂದಿನ ಅನುಭವದ ಜ್ಞಾಪಕ, ಇನ್ನೊಬ್ಬನಿಗೆ ಹೀಗಾಗಿದೆ ಎಂಬ ತಿಳುವಳಿಕೆ, ಕ್ರಿಯಾಶೀಲತೆ  ಇದೆಲ್ಲದರ ಪರಿಣಾಮವಾಗಿ ಅವನ ಸಾಮರ್ಥ್ಯದಲ್ಲಿ ಕೌಶಲ ತುಂಬಿರುತ್ತದೆ . ಕೌಶಲ್ಯತೆಯಿಂದ  ಮಾಡಿದ ಕೆಲಸ ಅವನಿಗಲ್ಲದೆ  ಎಲ್ಲರಿಗೂ ಸಂತೋಷವಾಗುತ್ತದೆ.ಅದಕ್ಕಿಂತ ಹೆಚ್ಚಾಗಿ ಎಲ್ಲರನ್ನೂ ಆಕರ್ಷಿಸುತ್ತದೆ.   ಆ ಕೆಲಸವನ್ನು  ಅಚ್ಚುಕಟ್ಟಾಗಿ  ಮಾಡಿದ ತೃಪ್ತಿ ಸಿಗುತ್ತದೆ .
 ಅದು ಇವತ್ತಿನಿಂದ ನಾಳೆಗೆ  ತಕ್ಷಣವಾಗಿ  ಬಂದಿರುವುದಿಲ್ಲ  ಎಷ್ಟೋ ಪ್ರಯತ್ನಗಳನ್ನ ತಿಂದಿರುತ್ತದೆ. ನಮ್ಮ ಇತರೆ ಆಸಕ್ತಿಗಳನ್ನ ಮುಟ್ಟುಗೋಲು ಹಾಕಿರುತ್ತದೆ, ಇತರೆ ಕೆಲಸಗಳ ಪ್ರಾಮುಖ್ಯತೆಯನ್ನ ಕಡಿಮೆ ಮಾಡಿರುತ್ತದೆ. ನಮ್ಮನ್ನ ಆ ಕೆಲಸ ಅಳವಡಿಸಿಕೊಂಡಿರುತ್ತದೆ, ಗುರುಟಿಸಿರುತ್ತದೆ. ನಮ್ಮ ಇತರ ಎಷ್ಟೋ ಆಸೆಗಳನ್ನ ಒಣಗಿಸಿರುತ್ತದೆ.
ನಮ್ಮನ್ನ  ಅಳವಡಿಸಿಕೊಂಡಿರದ , ಪ್ರಾಮುಖ್ಯತೆಗಳಿಗೆ ಕಡಿವಾಣ ಹಾಕದ, ಪ್ರಯತ್ನಗಳನ್ನೇ ತುಂಬದ ,ಇತರ ಆಸೆಗಳಿಂದಲೇ ಬೆಳೆಸಿದ, ಒಂದು ಕೆಲಸದಲ್ಲಿ  ಸ್ವಲ್ಪ ಹೆಚ್ಚಿಗೆ ಗುರುಟಿಸಿ ಕೊಳ್ಳದ  ನಮ್ಮ ಬದುಕನ್ನ ಯಾರೂ ಗುರುತಿಸದಾಗುತ್ತಾರೆ. ವಿದ್ಯೆ ಇದ್ದರೂ ಕೌಶಲ ವಿರುವುದಿಲ್ಲ.ವಿದ್ಯೆಗೆ ವಿದ್ಯಾಲಯಗಳಿವೆ ಬಹುಷಃ  ಕೌಶಲಕ್ಕೆ ವಿಶ್ವವೇ ವಿದ್ಯಾಲಯವೇನೋ..?  

ಜ್ವರ  ಬಂದರೆ  ಮೆಡಿಕಲ್ ಗೆ ಹೋಗಿ ಕ್ರೋಸಿನ್ ತಗೊಳ್ಳುತ್ತೀವಿ , ಪ್ರೆಶರ್ ಕುಕ್ಕರ್ ಬೇಕಾದರೆ ಗಿರಿಯಾಸ್ ಗೆ ದೌಡಾಯಿಸುತ್ತೀವಿ, ಬಾಯಾರಿಕೆಯಾದರೆ ಕೊಕ್ ತಗೊಂಡು  ದಣಿವಾರಿಸುತ್ತೀವಿ, ಸೀರೆ ಬೇಕಾದರೆ  ಕಾನ್ಚೀವರಂ ಟಕ್ಸ್ ಟೈಲ್ಸ್ ನಲ್ಲಿ ಬೇಕಾದಷ್ಟು ಮಳಿಗೆಗಳಿವೆ.
     
ನೈಪುಣ್ಯತೆ ಅನ್ನೋದು  ಮೇಲೆ ಹೇಳಿದಂತೆ  ತಕ್ಷಣ  ಒಂದೇ ಕಡೆಯಲ್ಲಿ  ಸಿಗುತ್ತದೆಯಂತಾದರೆ ನನಗೆ ತಿಳಿಸಲು ಮರೆಯದಿರಿ ......... ಅಲ್ಲಿಗೆ  ದೌಡಾಯಿಸಲು  ಕಾತುರನಾಗಿದ್ದೇನೆ.

Thursday 20 October 2011

KP Nettar 's " ಕರ್ಣ ಭಾರತ "

                                                 KP  Nettar 's 
     
                                    " ಕರ್ಣ  ಭಾರತ "

ಗದಗಿನ  ವೀರ  ನಾರಣಪ್ಪ (ಕುಮಾರವ್ಯಾಸ ) ಮಹಾಭಾರತವನ್ನ   ಭಟ್ಟಿಇಳಿಸಿ  ನಮಗೆಲ್ಲ  ರಕ್ತಗತ ವಾಗುವಂತೆ ಮಾಡಿದ .ಅವನ  ಕಾವ್ಯದಲ್ಲಿ  ನಮಗೆಲ್ಲ ಚೈತನ್ಯ ತುಂಬಿಸುವ  ಶಕ್ತಿ ಇದೆ ಇನ್ನು ಓದುವ ಎನ್ನುವ ಕೌತುಕವಿದೆ ,ನೋವಾಗುವಾಗ ಬೇಕಾಗುವ  ಸಾಂತ್ವಾನ  ಇದೆ ,ಜೀವನದುದ್ದಕ್ಕೂ ಬೇಕಾಗುವ ಉಪಾಯಗಳಿವೆ ,ಶೃಂಗಾರವಿದೆ ,ರಸಿಕರಿಗೆ ರಸಗಳಿವೆ ,ಶಾಸ್ತ್ರಜ್ಞರಿಗೆ  ಶಾಸ್ತ್ರಗಳಿವೆ ,ತರ್ಕಗಳಿವೆ ,ಉಲ್ಲಾಸವಿದೆ ,ಮೇಲಾಗಿ ಕರ್ನಾಟಕ ದಲ್ಲಿ ಭಾರತ  ಇದೆ!
 KP Nettar 's  ಗಣಕೀಕೃತ   ಅಕ್ಷರವಷ್ಟೆ  !!

 ಧರೆ ನೆನೆದ  ದುಷ್ಕ್ರುತವ ದೇನೆಂ
 ದರಸ ಬೆಸಗೊಂಬೈ  ನಿರಂತರ
 ಸುರಿವ ರುಧಿರಾಸಾರದಲಿ ಕೆಸರೆದ್ದು ಕಳನೊಳಗೆ
 ಹರಿವ ಬಿಂಕದ ರಥದ ಗಾಲಿಯ
 ಗರುವತನ  ಗಾಳಾಯ್ತಲೇ ಖೋ
 ಪ್ಪರಿಸಿತು ತಗ್ಗಿತು ತೇರು ತಡೆದುದು ಭಟನ  ಸಾಹಸವ

ಸಂಜಯ : ಎಲೈ  ಧೃತರಾಷ್ಟ್ರ ಭೂಪಾಲ  ಕೌರವೇಶ್ವರನ  ಧರೆಗೆಂದೇ  ತನ್ನ ಜೀವನವನ್ನು ಮುಡಿಪಾಗಿಸಿದ  ವೀರ  ಕರ್ಣ ನಿಗೆ  ಆ ಧರೆಯೇ   ಅಪಹಾಸ್ಯ ಮಾಡಿ  ಕಂಠಕವನ್ನು  ತಂದ  ಪರಿ ಕೇಳು .ಸವ್ಯ ಸಾಚಿಯಾದಂತಹ ಗಾಂಢೀವಿ ಏಕ ಕಾಲದಲ್ಲಿ  ಒಂದೇ ಬಾಣದಿಂದ  ಹಲವು ಗುರಿಯನ್ನಾಗಿಸಿದ್ದ . ಮಾತ್ರವಲ್ಲದೆ  ಏಕ ಕಾಲದಲ್ಲಿ ಹಲವು ಬಾಣಗಳಿಂದ ಒಂದೇ ಗುರಿಯನ್ನಾಗಿಸಿ   ಬೇಧಿಸಿದ್ದ . ಆದರೆ ಇದೆಲ್ಲವೂ ಕರ್ಣನ  ವೀರತನಕ್ಕೆ  ನಿರಾಯಾಸವಾಯಿತು. ಏಕಕಾಲದಲ್ಲಿ ವೈರಿಗಳ   ಕೆಲವು ಶರಗಳನ್ನೇಕೆ . ಸಹಸ್ರ ಶರಗಳನ್ನು ತುಂಡರಿಸುವ  ಚಾಣಾಕ್ಷತೆಯನ್ನ ತೋರಿದ . ಜಗದ್ಗುರು  ಪರಶುರಾಮರೆ ಬಂದು  ಹೋರಾಡುತ್ತಿದ್ದಾರೆ ಎಂಬಂತೆ ಬಾಸವಾಗುತ್ತಿತ್ತು. ಗ್ರಹಣವಾದಾಗ ಹೇಗೆ ಸೂರ್ಯ ರಶ್ಮಿಗಳು ಮಂಕಾಗುವುದೋ  ಹಾಗೆಯೇ  ಅರ್ಜುನನ ಬಾಣಗಳು ಮಂಕಾಗತೊಡಗಿದವು . ಸೂರ್ಯದೇವ  ತನ್ನ ರಶ್ಮಿಗಳನ್ನ ಕರ್ಣದೇವನಿಗೆ ಮಾತ್ರ ಕೊಟ್ಟು ತಾರತಮ್ಯ ಮಾಡುವಂತೆ ಭಾಸವಾಗುತ್ತಿತ್ತು . ಭೀಮನ ಗರ್ವ ಭಂಗ ಕರ್ಣನ ಸಾರಥ್ಯದಲ್ಲೇ ನಡೆಯಿತು . 
ಈ ಭೀಕರ ಬಾಣಗಳಿಂದ  ರಕ್ತಗಳ ಒರತೆಯೇ ಶುರುವಾದವು . ಕೌರವೇಶ್ವರ  ಅಥವಾ ಧರ್ಮರಾಜ ಇನ್ನು ಸ್ಮಶಾನಕ್ಕೆ ರಾಜ ಎಂದು  ಭಟರ  ಮಡದಿಯರು  ಕಿರುಚಾಡುತಿದ್ದರು. ಗಂಗೆಯಲ್ಲಿ ನೀರಿನ ಬದಲು ರಕ್ತ ಹರಿದರೆ ಹೇಗೋ ಹಾಗೆ ಕುರುಕ್ಷೇತ್ರದಲ್ಲಿ ಆಯಿತು. ಮಹಾರಾಜ,  ಗ್ರಹಣವು ಸೂರ್ಯನ ಕಿರಣಗಳನ್ನ  ಹೇಗೆ ಕ್ಷಣಿಕ ಕಾಲಕ್ಕೆ ಮಾತ್ರ  ಮಂಕಾಗಿಸುವುದೋ ಹಾಗೆ  ಅರ್ಜುನದೇವನನ್ನ ಮಂಕಾಗಿಸಿದ್ದು  ಕ್ಷಣಿಕಕ್ಕೆ  ಮಾತ್ರವಪ್ಪ ...
ಭಟರ ಮಡದಿಯರ  ಶಾಪವೋ , ಧರೆಗೆ ಕರ್ಣನ  ರಥದ ಗಾಲಿಗೆ ನೋವಾಗದಿರಲಿ ಎಂಬ  ಅನುಕಂಪವೋ,ಕರ್ಣನ ರಥ ಇರುವ ಭುವಿ  ಮೃದು ಹಾಸಿಗೆಯಂತೆ ಜೌಗು ಆಗತೊಡಗಿತು .ಕರ್ಣ ಇನ್ನೇನು  ಅರ್ಜುನನನ್ನು  ಗೆಲುವನು  ಎಂಬ ಸಂದರ್ಭದಲ್ಲಿ ಹೀಗಾಗಬೇಕೆ ?ರಥವು ವಾಲಿದವು ..ಕುದುರೆಗಳು ಡೊಂಕ ಹಾಕಲು  ಶುರುಮಾಡಿದವು. ಧರೆಗೆ ಕರ್ಣನನು  ಸೂರ್ಯ ರಶ್ಮಿ ಗಳನ್ನು ಹೀರಿದ ಕಮಲದಂತೆ ಕಂಡನು .ಆದ್ದರಿಂದ  ರಥದ  ಸುತ್ತ ಮುತ್ತಲೂ ಕೆಸರಾಯಿತು .ಯುದ್ಧದ ರಥ ಉಳುವ ನೇಗಿಲಾಯಿತು  . ಕರ್ಣ ತನ್ನ ಧನುಸ್ಸನ್ನು  ರಥದಲ್ಲಿ ಮಡಗಿ ,ರಟ್ಟೆಗಳಲ್ಲಿರುವ  ಶಕ್ತಿಯನ್ನೆಲ್ಲ    ಗಾಲಿಯನ್ನು ಕೆಸರಿನಿಂದ ತೆಗೆಯಲು ಪ್ರಯೋಗಿಸಿದನು, . ಮರು ಪ್ರಯತ್ನವನ್ನ ಮಾಡಿದನು ರಥವು ಸ್ವಲ್ಪ ಅಲುಗಾಡಿತಾದರೂ ಮೇಲೇರದ್ದನ್ನು ಕಂಡು ತನ್ನಲ್ಲಿರುವ ಎಲ್ಲಾ ಶಕ್ತಿಯನ್ನು ಪ್ರಯೋಗಿಸಿದನು ಇನ್ನೇನು ಮೇಲೆ ಬರುತ್ತದೆ ಎಂದು ಸಂತಸ ಪಟ್ಟನು ಕೌರವನಿಗೆ ಜಯ ನಿಶ್ಚಯ ಎಂದು ಮನದಲ್ಲೇ ಅಡಿಗಡಿಗೆ ಸಂತಸ ಪಟ್ಟನು , ಅಷ್ಟರಲ್ಲಿ ರಥವು ದೊಪ್ಪನೆ  ಮೊದಲಿನಂತೆ ಪುನ: ಕೆಸರಪಾಲಾಯಿತು .ತನ್ನ ಬಲವನ್ನೆಲ್ಲಾ ಬಾಣಗಳಿಗೆ  ಪ್ರಯೋಗಿಸುವ ಬದಲು ರಥವನ್ನು ಮೇಲಕ್ಕೆತ್ತಲು ಪ್ರಯೋಗಿಸಿದನು .ವೀರ ಕರ್ಣನ ಸಾಹಸವನ್ನು ಧರೆಯೇ ನುಂಗಿತು .ಸಾರಥಿಯಾದವನು  ನನ್ನಂತಹ  ಮಹಾರಥಿಗೆ ಸಲಹೆ ಕೊಡಬಾರದೆಂದು ಅವಮಾನಿಸಿ ಶಲ್ಯನನ್ನು   ಅಟ್ಟಿದೆ ,ಬಹುಶ: ಶಲ್ಯನು  ಸಾರಥಿಯಾಗಿರುತಿದ್ದರೆ ತನ್ನ ನೈಪುಣ್ಯತೆಯಿಂದ ರಥವನ್ನು ಈ ಹೂಳು ತುಂಬಿದ ಜಾಗದಿಂದ  ತಪ್ಪಿಸುತಿದ್ದನೇನೋ ..ಎಂದು ಕರ್ಣನು ಅಡಿಗಡಿಗೆ  ಮರುಗಿದನು .

ಇಳುಹಿದನು  ರಥದೊಳಗೆ  ಚಾಪವ
ನಳವಡಿಸಿದನು  ಸೆರಗಿನಲ್ಲಿಂ  
ದಿಳಿದು   ಗಾಲಿಯನಲುಗಿ ಪಾರ್ಥನನೋಡಿ ನಸುನಗುತ
ಎಲೈ  ಧನಂಜಯ ಸೈರಿಸುವುದರೆ
ಗಳಿಗೆಯನು ರಥವೆತ್ತಿ  ನಿನಗಾ
ನಳವಿಗೊಡುವೆನು ತನ್ನ ಪರಿಯನು  ಬಳಿಕ ನೋಡೆಂದ  ||

ರೂಢಿಸಿದ ಭಟ ನೀನು ಪ೦ಥದ
ಪಾಡುಗಳ ಬಲ್ಲವನು    ಶಾಸ್ತ್ರವ
ಖೋಡಿಗಳೆವವನಲ್ಲ ಲೌಕಿಕ  ವೈದಿಕ ಸ್ಥಿತಿಯ
ನಾಡೆ ಬಲ್ಲಿರಿ  ಶಸ್ತ್ರ ಹೀನರ
ಕೂಡೆ  ವಾಹನ ಹೀನರಲಿ ಕೈ
ಮಾಡಲನುಚಿತವೆಂಬ   ಮಾರ್ಗವನೆಂದನಾ   ಕರ್ಣ  ||




ಎಲೈ ಧನಂಜಯ ಗುರುವನ್ನು ಮೀರಿದ ಪ್ರತಿಭೆ ನಿನ್ನದು  ಭೀಷ್ಮ  ದ್ರೋಣರನ್ನು ಸೋಲಿಸಿದೆ ,ದಿನಕಳೆಯುದರೊಳಗೆ ಜಯದ್ರಥನ  ವಧೆ ಮಾಡದಿರೆ  ಅಗ್ನಿಗೆ  ಹಾರುವೆನೆಂದು  ಪ್ರತಿಜ್ನೆಯೂ ಆಯಿತು , ಇನ್ನೇನು  ಸೂರ್ಯ  ಮರೆಮಾಚುವನು ಎನ್ನುವಷ್ಟರಲ್ಲಿ  ಅವನ ತಲೆ ನಿನ್ನ ಬಾಣಗಳಿಗೆ ಆಹುತಿಯಾದವು.  ಗೋ ಗ್ರಹಣ ದಲ್ಲಿಯೂ  ಎಲ್ಲರನ್ನೂ ಮಣ್ಣು ಮುಕ್ಕಿಸಿದೆ.
ನನ್ನ ರಥವು ಕೆಸರಲ್ಲಿ ಹೂತು ಹೋಗಿದೆ, ಚಾಣಕ್ಷ ಸಾರಥಿಯಾದಂಥ ಶಲ್ಯ ನಿಂದ ದೂರನಾದೆ, ನಾನು ಈಗ ಶಸ್ತ್ರ ಹೀನನಾಗಿದ್ದೇನೆ,

ಏಸು ಮರುಳೆ  ಗಾಂದೀವಿಯಾಪ
ತ್ತೆಸಗಿದಾಗಲೇ  ಹಗೆಯ ಗೆಲುವುದು.

 .......ಮುಂದುವರಿಯುವುದು    ..,





  





Wednesday 12 October 2011

' ಸ್ಯಾಂಡ್ ವಿಚ್ ' ಪಾಲಿಸಿಯನ್ನ ಅಳವಡಿಸಿದ್ದೀವಾ ..?

                       ' ಸ್ಯಾಂಡ್  ವಿಚ್ '  ಪಾಲಿಸಿಯನ್ನ  ಅಳವಡಿಸಿದ್ದೀವಾ ..?          

ನನ್ನ  ಬಗ್ಗೆ  ಗೊತ್ತುಂಟಲ್ಲ  ಏನಿದ್ರೂ  ನೇರವಾಗಿಯೇ ಹೇಳೋದು  ಹೀಗೆ  ಹೇಳಿಯೇ ದಿನವನ್ನ ಆರಂಭಿಸುತ್ತಾರೆ !  ವಾಸ್ತವವಾಗಿ ನೇರವಾಗಿ ಹೇಳೋದರಿಂದ  ತಾನು ನೇರವಾಗಿದ್ದೀನಿ, ನಿಂತರ ನೇರವಾಗಿ ಇಲ್ಲದೊಂತರ ಅಲ್ಲ ಎಂಬರ್ಥದಲ್ಲಿ ಮಾತನಾಡುತ್ತಾರೆ .ಅಷ್ಟಕ್ಕೂ  ಅವರು ನೇರವಾಗಿ ಹೇಳೋದು  ಇನ್ನೊಬ್ಬರ ಬಗ್ಗೆ ಟೀಕೆಗಳನ್ನ ಹೊರತು  ಅವರ ಬಗ್ಗೆ ಅಲ್ಲವೇ ಅಲ್ಲ.ಹೀಗೆ ಇನ್ನೊಬ್ಬರ ಟೀಕೆ ಮಾಡಿದಾಗ ತಾನೊಬ್ಬ  ಸಭ್ಯ ಮನುಷ್ಯನಾಗುವೆನೆ೦ದೂ ಇರುತ್ತದೆ . ಅಲ್ಲದೆ ಎಲ್ಲರ ಮೆಚ್ಚುಗೆಗೆ ಪಾತ್ರನಾಗುವೆನೆಂದೂ ಅನಿಸಿರುತ್ತಾರೆ . ಇಂತವರೆ ಹಾಗೆ  ಇನ್ನೊಬ್ಬರ ಅಭಿಪ್ರಾಯಕ್ಕೆ ಸ್ಪಂದಿಸದ , ತನ್ನ ಅಭಿಪ್ರಾಯಕ್ಕೆ ಮಾತ್ರ ಅಂಟಿಕೊಂಡು  ಬದಲಾಗದ ಹಳೇ  ಪ್ರಾವಿಶನ್ ಷ್ಟೊರು ತರ ಇರುತ್ತಾರೆ . ಅಂಗಡಿಯಲ್ಲಿ ಟೀವಿ  ಇಟ್ಟು ಗಿರಾಕಿಗಳನ್ನ ಕರೆಸಿ  ಅಂದರೆ ಸಾಕು 'ಶು೦ಠಿ  ತಗೊಳ್ಳೋಕೆ  ಗಿರಾಕಿಗಳು ಬರೋದು,ಟೀವಿ ನೋಡೋಕೆ ಅಲ್ಲ ' ಅಂತಾರೆ ಅಂಗಡಿಯಲ್ಲಿ  ಇನ್ನೂ ಶು೦ಠಿ ಗಳನ್ನ ದಾಸ್ತಾನು ಮಾಡಿ ಹಳೇ ಶು೦ಠಿ ಯನ್ನ  ಗಿರಾಕಿಗೆ ಕೊಡುತ್ತಾರೆ! ನಮ್ಮ ಪಾಲಿಸಿಗಳನ್ನ ಬದಲಾವಣೆ ಮಾಡದ ಹೊರತು ಜೀವನದಲ್ಲೂ ಬದಲಾವಣೆಯಾಗಿರುವುದಿಲ್ಲ.

ಟೀಕೆ  ನಮ್ಮ ತೀಟೆ ಗೋಸ್ಕರ ಉಪಯೋಗಿಸುವುದಲ್ಲ , ಅನವಶ್ಯಕ ಕಿರಿಕ್ಕನ್ನು ಉಂಟು  ಮಾಡಬಾರದು , ಟೀಕೆಯನ್ನು ಕೇಳಿಸಿದವನಲ್ಲಿ ಕಿರಿ ಕಿರಿ ಉಂಟಾದರೆ ಆ ಟೀಕೆ ಎಳ್ಳಷ್ಟು ಉಪಯೋಗವಿಲ್ಲ ಸಂಪೂರ್ಣ   ವ್ಯರ್ಥ.ಟೀಕೆಯನ್ನ ಸಂಪೂರ್ಣ ಪರಿಣಾಮಕಾರಿಯನ್ನಾಗಿಸಬೇಕು .  
ಅಭಿಪ್ರಾಯ ಹೇಳುವ ಮುನ್ನ  ಒಮ್ಮೆ ಯೋಚಿಸಬೇಕು   ಅಭಿಪ್ರಾಯ ಹೇಳಲು ನಮ್ಮ ಪಾತ್ರವೇನು?  ಇದು ಸಂಧರ್ಭನಾ? ಹೇಳದೆ ಇದ್ದರೆ   ಏನಾಗಬಹುದು? ಹೇಗೆ ಹೇಳಬೇಕು ?

ಅಭಿಪ್ರಾಯ  ಹೇಳುವ   ವಿಧಾನದಲ್ಲಿ,ಟೀಕೆ ಮಾಡುವಲ್ಲಿ  ಎಡವಿದರೆ  ಸಾಕು ನಮ್ಮ ಸಂಬಂಧಗಳು  ಎಕ್ಕುಟ್ಟಿ ಹೋಗಲು ಶುರುವಾಗುತ್ತದೆ.  'ಹಳಸಿದ  ರುಚಿ ಸಾಂಬಾರಿಗಿದೆ,ಒಂದು ದಿನವೂ ಸಾಂಬಾರು ತಿನ್ನೋತರ ಆಗಿಲ್ಲ'  'ಇಲ್ಲದ ರಾಗದಲ್ಲಿ ಹಾಡಿದ್ದೀಯ ಕೇಳೋನು ಯಾರು'  'ನೀನೊಬ್ಬ ವಿಚಿತ್ರ ಮನುಷ್ಯ'..ಹೀಗೆ ಟೀಕೆಗಳು...ಇಲ್ಲಿ ಸಾಂಬಾರು  'ಹಳಸು'ವುದಕ್ಕಿ೦ತಲೂ  ಸಂಭಂಧಗಳೇ ಹಳಸಲು ಶುರುವಾಗುತ್ತದೆ ,ಇಲ್ಲದ ರಾಗಕ್ಕಿಂತ ಇರುವ ರಾಗವೇ ಮುಂದೆ ಕಷ್ಟ ವಾಗುತ್ತದೆ , ವಿಚಿತ್ರ ಮನುಷ್ಯ ಇನ್ನೂ ಚಿತ್ರ ವಿಚಿತ್ರ ನಾಗುತ್ತಾನೆ .

ಟೀಕೆಯ ಮುನ್ನ  'ಸ್ಯಾಂಡು ವಿಚ್' ನ ನೆನೆಯಬೇಕು  ಅದರ ಮೇಲಿನ ಪದರ ಮೃದುವಾದ  ಬ್ರೆಡ್ ನಿಂದ ಕೂಡಿದೆ ,ಕೆಳಗೂ ಮೆತ್ತಗಿನ ಬ್ರೆಡ್ ಹಾಸಿದ್ದಾರೆ  ಇರಬೇಕಾದ ತಿರುಳು ,ಮಸಾಲೆ ಇದರ ಮಧ್ಯದಲ್ಲಿ ಇಟ್ಟು   ಬೆಚ್ಚಗೆ  ಮಾಡುತ್ತಾರೆ . ಬರೀ ತಿರುಳು ಮತ್ತು ಮಸಾಲೆ ತಿನ್ನೋದಕ್ಕೆ ,ಕರಗಿಸಿ ಕೊಳ್ಳೋದಕ್ಕೆ ಕಷ್ಟ .
ಮೊದಲು ಟೀಕೆಯಲ್ಲಿ  ಧನಾತ್ಮಕ ಅಂಶಗಳು ,ಕೊನೆಗೂ ಟೀಕೆಯಲ್ಲಿ ಧನಾತ್ಮಕ ಅಂಶಗಳು ,ಇದರ ಮಧ್ಯದಲ್ಲಿ ಹೇಳಬೇಕಾದ ಅಭಿಪ್ರಾಯಗಳನ್ನು ತುಂಬಿ  ಸ್ಯಾಂಡ್ ವಿಚ್ ತರ ಇದ್ದರೆ  ಅರಗಿಸಿ ಕೊಳ್ಳ ಬಹುದಲ್ವಾ..?



Saturday 1 October 2011

ಮನಸಿಗೂ 'ಬೆಸ್ಟ್ ಪ್ರ್ಯಾಕ್ಟೀಸಸ್ ' ಅ೦ತ ಇದಿಯಾ..?

                       ಮನಸಿಗೂ  ' ಬೆಸ್ಟ್ ಪ್ರ್ಯಾಕ್ಟೀಸಸ್  '    ಅ೦ತ ಇದಿಯಾ..?
ವಿಶಾಲವಾದ  ಮನೆಯಿದ್ದು ಅಲ್ಲಿ ನ  ಸ್ಟೊರು ರೂಮನ್ನು ಉಪಯೋಗಿಸದಿದ್ದರೆ ಮನೆಯಲ್ಲಿನ ಇತರ ರೂಮುಗಳೇ ಸ್ಟೊರ್ ರೂಮು ಆಗುತ್ತದೆ. ಅಲ್ಲಿಡಬೇಕಾದ ಬಕೆಟು ಈ ರೂಮಿಗೆ ಬ೦ದಿರುತ್ತದೆ, ಅಲ್ಲಿಡ ಬೇಕಾದ ಪೊರಕೆ ಇದೇ ರೂಮಲ್ಲಿ ನಮ್ಮನ್ನ ಇಣಕಿ ನೋಡುತಿರುತ್ತದೆ!  ಕುರ್ಚಿಯ  ಮೇಲೆ  ಕೂರಬೇಕಾದ ನಾವು  ಉದ್ದುವ ಬಟ್ಟೆಯ ಮೇಲೆ ಕೂತು ಕೊಳ್ಳುತ್ತೀವಿ, ಗಾರ್ಡನ್ ಗೆ ಬೇಕಾದ ಕತ್ತರಿಯೊ೦ದಿಗೆ ಮಗುವು ಆಟವಾಡುತ್ತಾ ಇರುತ್ತದೆ ,ಮು೦ದೆ ಬೇಕಾದೀತು ಎ೦ದಿಟ್ಟ ಬಳ್ಳಿ  ಜಗಲಿ ಮಧ್ಯದಲ್ಲಿ ಸಿಕ್ಕು ಹಾಕಿ ಕೊ೦ಡಿರುತ್ತದೆ ,ಅಗರು ಬತ್ತಿಯ ಪಕ್ಕದಲ್ಲೇ ಹಳೆ ಫಿನೈಲ್ ಇರುತ್ತದೆ ...
ಒಬ್ಬ್ಬ  ತನ್ನ  ದೇಹದ  ಬಗ್ಗೆ  ಅಸಡ್ಡೆ  ಇರುವ   ಜವಾನ ಗಿರಣಿಯಲಿರುವ ತು೦ಬಿದ ಗೋಣಿಯ೦ತಾಗಿರ್ತಾನೆ  ,
ಸಮಯದ  ಬಗ್ಗೆ ಗೊಡವೆಯೇ ಕೊಡದವನು  ಮಾಡಬೇಕಾದ ಕೆಲಸವನ್ನು ಆ ದಿವಸ ಮಾಡುವುದೇ ಇಲ್ಲ .
ಲೆಕ್ಕ ಪತ್ರಗಳನ್ನ ನೋಡದೆ  ಇರುವವನನನ್ನ  ಸಾಲಗಾರರೆ ಆಳುತಿರುತ್ತಾರೆ .

ಮನೆಯನ್ನ  ಓರಣವಾಗಿಡುವುದು , ದೇಹದ ಬಗ್ಗೆ ಶ್ರದ್ದೆ ವಹಿಸಿ ವ್ಯಾಯಾಮ ಮಾಡಿ  ಒ೦ದು ಆಯಾಮ ಕೊಡುವುದು , ಕೆಲಸ ಕಾರ್ಯದ ಬಗ್ಗೆ ಸಮಯದ  ಬಗ್ಗೆ ನಿಗಾ ಇಡೋದು ,ಲೆಕ್ಕ ಪತ್ರಗಳಲ್ಲಿ ಗಮನ ಹರಿಸುವುದು   ಇದೆಲ್ಲ ನಮ್ಮ ದೈನ೦ದಿನ ಜೀವನದ   ' ಬೆಸ್ಟ್ ಪ್ರ್ಯಾಕ್ಟೀಸಸ್ '   ಗಳು    ಅವು ನಮ್ಮ ಜೀವನದ  ಫಲವತ್ತತೆಯನ್ನ ಹೆಚ್ಚಿಸುತ್ತದೆ.

ಇದು  ಮನಸಿಗೂ    ' ಬೆಸ್ಟ್ ಪ್ರ್ಯಾಕ್ಟೀಸಸ್ '  ಬೇಡ್ವಾ ..? 

ನಮ್ಮ ಸ೦ಬ೦ಧಗಳು  ಬಿರುಕು  ಬಿಡುವುದೇ   ಮಾನಸಿಕ  ಅಸಮತೋಲನದಿ೦ದ   .., ಅವನಿಗೆ ತಿರುಗಿಸಿ ಬೈಯಲಿಲ್ಲವಲ್ಲಾ  ಎ0ದು ದಿನವಿಡೀ  ವ್ಯರ್ಥ ವಾಗುತ್ತದೆ  !  ಅವನಿ೦ದ ಬೈಸಿಕೊ೦ಡೆನಲ್ಲಾ  ಎ೦ದೂ  ಆ ದಿನ ವ್ಯರ್ಥ ವಾಗುತ್ತದೆ , ಎಲ್ಲರ ಮು೦ದೆ ನಕ್ಕನಲ್ಲಾ, ನನ್ನ ಚಿಕ್ಕ ಮಾತಿಗೆ ಅಷ್ಟೊ೦ದು ಸಿಟ್ಟು ಮಾಡಿದನಲ್ಲಾ   ಎ೦ದೂ  ಮು೦ದಿನ ದ್ವೇಷಕ್ಕೆ ಬುನಾದಿಯಾಗುತ್ತದೆ  ನಮ್ಮ ಮನಸಿನ ಭಾವನೆ ಗಳನ್ನ ಒರಣವಾಗಿರಿಸದಿದ್ದರೆ, ಮನಸನ್ನು ಆಯಮವಾಗಿರಿಸದಿದ್ದರೆ  ದಿನವೇ ವ್ಯರ್ಥವಾದ೦ತೆ  ಮು೦ದಿನ ಯೋಜನೆಗಳೇ ಯಾಕೋ ನಾವು ತಿಳಿದ೦ತೆ ಸಾಗೊದೆ ಇಲ್ಲ .

 ಇನ್ನೊಬ್ಬರಿಗೆ ಬೈಯೋದು ತಪ್ಪು  ಅ೦ತ ಎಲ್ಲರೂ ಹೇಳಿರುತ್ತಾರೆ  ಆದರೂ ಅದನ್ನ ಕೇಳಿ ಕೇಳಿಯೂ  ಕಡಿಮೆ ಮಾಡಿಲ್ಲ ..
ವಾಸ್ತವವಾಗಿ ಹೇಗೆ ಬೈಯ್ಯೋದು ತಪ್ಪೋ   ಹಾಗೆ ಬೈಯ್ಯದೆ ಇರುವುದೂ ತಪ್ಪೇ  ನಗದೆ ಇರುವುದೂ ತಪ್ಪೇ ಅಳದೆ ಇರುವುದೂ ತಪ್ಪೇ ..ನಾವು  ಅರೆ ತಾಳ್ಮೆಯಿ೦ದಲೋ , ಅರೆಧ್ಯಾನದಿ೦ದಲೋ  ಅರೆಬುದ್ಧಿವ0ತಿಕೆಯಿ0ದಲೋ  ಮನಸಿನ ಭಾವನೆಯನ್ನ ಅದುಮಿ ಇಡುತ್ತೀವಿ (supress ಮಾಡಿರುತ್ತೀವಿ ) ಅದಕೆ ಅದು ಯಾವತ್ತೋ ಒ೦ದು ದಿನ ಸ್ಪೋಟಗೊ೦ಡು  ನಾವು ಒಬ್ಬ ಮೂಡಿ  ಅ೦ತ ಪಟ್ಟ ಕಟ್ಟಿರುತ್ತಾರೆ.  ಭಾವನೆಗಳೇ ಹಾಗೆ ಅದಕೆ ಪ್ರಚ್ಛನ್ನ ಶಕ್ತಿ  (potential  energy) ಇದೆ ಅದನ್ನ ಹರಿಯಲು ಬಿಡಲೇ ಬೇಕು.
ಸಿಟ್ಟು ಬ0ದಾಗ ತೀಟೆ ತೀರುವಷ್ಟು ಬೈದು ಬಿಡಿ ,ನಗು ಬ0ದಾಗ ಹೊಟ್ಟೆ ಹುಣ್ಣಾಗುವಷ್ಟು ನಕ್ಕು ಬಿಡಿ , ಅಳು ಬ೦ದಾಗ ಹಗುರವಾಗುವಷ್ಟು ಅತ್ತು ಬಿಡಿ ; ನೆನಪಿರಲಿ  ನಮ್ಮಕೈಯ್ಯಿ೦ದ  ಬೈಸಿಕೊ೦ಡವರು , ನಗೆಸಿಕೊ೦ಡವರು,ನಮಗೆ ಅಳು ಬರೆಸಿದವರು  ಯಾರು  ಆ ರೂಮಲ್ಲಿರಬಾರದು ! ಹಾಗ೦ತ  ಬೇರೊಬ್ಬರೂ ಇರಲೂಬಾರದು ! ಎಲ್ಲವೂ ನಮ್ಮ ಮತ್ತು ಗೋಡೆ ಮಧ್ಯನೇ ಇರಲಿ . 
ಸತ್ಯವಾಗಲೂ ಹೇಳಲಾ  ಮೀಸೆ ಬ0ದ ಹುಡುಗನಿಗಾಗಲಿ,  ಮೊಡವೆ ಬ೦ದ ಮೇಲೆ ಹುಡುಗಿಗಾಗಲಿ ಬೈಯೋದರಿ೦ದ ಫಾಯಿದೇನೆ ಇಲ್ಲ . ಹಾಗ೦ತ ಹೇಳಬೇಕಾದನ್ನ  ಹೇಳದೆ ಇರಬಾರದಲ್ವಾ ?..
ರೂಮಿನಲ್ಲಿ  ಭಾವನೆಗಳನ್ನ  ಸಮತೋಲನ ಕ್ಕೆ ತ೦ದ ನ೦ತರ  ಬೈಯ್ಯ  ಬೇಕಾದ್ದನ್ನ ಹೇಳಿ .., ನಗಬೇಕಾದದನ್ನ ನಿಯ೦ತ್ರಿಸಿ, ಅಳಬೇಕಾದದನ್ನ  ದು:ಖಿಸಿ .ಇದು  'ಬೆಸ್ಟ್ ಪ್ರ್ಯಾಕ್ಟೀಸಸ್ '  ಆಲ್ವಾ..?  ಆ ದಿವಸ  ಕೆಲಸಗಳು ನಮಗೆ ಸ0ಪೂರ್ಣ ವಾಗಿಸುತ್ತದೆ ಮು೦ದೆಯೂ  ನಮ್ಮ ಯೋಜನೆಗಳನ್ನ  ಫಲಕಾರಿಯನ್ನಾಗಿಸುತ್ತದೆ.




Thursday 22 September 2011

" ಹಗುರವಾದ ’ ಬಾದಲ್ ’ ಗಳಾಗಿರಬೇಕಾ...? "

                          "     ಹಗುರವಾದ  ಬಾದಲ್ ಗಳಾಗಿರಬೇಕಾ...?            "
ನಾನು ಈ ಕೆಲಸವನ್ನೇ ಮಾಡಬಾರ್ದಿತ್ತಾ..? ಅವನ ಮಾತನ್ನು ಕೇಳಿ ಕೆಟ್ಟೆನಾ ....?, ಸಾಲ ತಗೊ೦ಡು ತಪ್ಪು ಮಾಡ್ಬಿಟ್ನಾ ...,? ಸಹಾಯ ಕೇಳಿದ್ದೇ ತಪ್ಪಾಯ್ತಾ ...,? ನಾನು ಆ ಕೆಲಸವನ್ನ ಆವತ್ತೇ ಮಾಡಬೇಕಿತ್ತಾ..?, ಅವಕಾಶವನ್ನು ಕಳಕೊ೦ಡೆನಾ..? ಈ ರೀತಿಯ ಪಶ್ಚಾತಾಪದ ಗೊ೦ದಲಗಳು ಆಗಾಗ್ಗೆ ಬರುತ್ತದೆ.
ಒಮ್ಮೆ ಕೇಳಿ ನೋಡಲಾ...? ಅಗತ್ಯಕ್ಕಿ೦ತ ಜಾಸ್ತಿ ಆಯ್ತಾ..? ಹೇಳಿಬಿಡಲಾ...? ಇದು ಸರಿಯಾದ ಸ೦ಧರ್ಭನಾ...? ಇವರೇ ಸರಿಯಾದ ವ್ಯಕ್ತಿನಾ..? ಹೇಗೆ ಅಗೊಲ್ಲಾ೦ತ ಹೇಳಲಿ..? ಸ್ವಲ್ಪ ವಿಚಾರಿಸೋದು ಒಳ್ಳೇದಲ್ವಾ..? ಇಷ್ಟು ತುರಾತುರಿಯಲ್ಲಿ ಬೇಕಾ..? ನಾನು ಅಷ್ಟೂ ಮಾಡದೇನೆ ಇದ್ರೆ ಕಮ್ಮೀನಾ..? ಆ ಮಾತು ಹೇಳಿದರೆ ನನ್ನ ಮರಿಯಾದೇನೆ ಹೋಗುತ್ತಾ .. ? ಈತರ ನಮಗೆ ರನ್ ಟೈಮು ಗೊ೦ದಲಗಳು ಆವಾಗ್ಗೆ ಬರುತ್ತೆ.
ಈ ಇನ್ನು ತು೦ಬಾ ಪೂರ್ವವಾಗಿ ನಾನು ಮ೦ದೆ ಹೀಗೆ ಆಗಲಾ.. ಇಲಾ ಅವನ೦ತೆ ಆಗಲಾ.? ಇದರ ಬದಲು ಇನ್ನೊ೦ದು ಬುಸಿನೆಸ್ಗೆ ಇಳಿಲಾ..? ಹೀಗೆ ನಾವು ಆಗಾಗ್ಗೆ ಗೊ೦ದಲಗಳ ಸರಮಾಲೆಯನ್ನೇ ಮನಸಲ್ಲಿ ಹಾಕೊಳ್ತೀವಿ.
ಪರಿಣತಿ ,ಪಕ್ವತೆ ಅನುಭವಕ್ಕೂ ಈ ಗೊ೦ದಲಕ್ಕೂ ಹತ್ತಿರದ ನ೦ಟು. ಒಬ್ಬ 100% ಪರಿಣತಿ ಹೊ೦ದಿದವನಿಗೆ ೦% ಗೊ೦ದಲ ; ಅದೇ ೦% ಪರಿಣತಿಗೆ 100 % ಗೊ೦ದಲವೇ . ಬೈಸಿ ಕೊ೦ಡವನಲ್ಲೇ ತಿರುಗ ಬೈಸಿಕೊಳ್ತೀವಿ . ಅವನು ಬರೀ ಛತ್ರಿ ಅ0ತ ಗೊತಿದ್ದೂ ನಮ್ಮ ಪ್ರೈವೆಸಿನ ಉಳಿಸಿಕೊಳ್ಳೋಕೆ ಆಗಲ್ಲ . ಜಗಳವಾಡಿದವನಲ್ಲೇ ಮತ್ತೆ ಜಗಳವಾಡುತ್ತೀವಿ.
ಇರುವ ಅನುಭವದ ಬಗ್ಗೆ ಎಲ್ಲೊ' ಚೆಕ್ ಲಿಷ್ಟು' ಮಾಡೋದನ್ನೆ ಮಾರೀತೀವಾ..? ಇ೦ತ ಅನುಭವಗಳನ್ನು ಮೆಲುಕು ಹಾಕೋದರಿ೦ದ ಎಡವಿದ ಹೆಜ್ಜೆಯನ್ನ ಅಲ್ಲೆ ಸರಿಪಡಿಸಬಹುದಲ್ವೆ..?   ಕಷ್ಟಗಳು ಗೊ೦ದಲಗಳೇ ಹಾಗೆ ಅದು ನಮ್ಮನ್ನ ಕೇಳಿ ಬರೋದಿಲ್ಲ ಚಪ್ಪಲಿಯ  ಉ೦ಗುಷ್ಟ ತು೦ಡಾದ ಹಾಗೆ ಯಾವುದೋ ದಾರಿ ಮಧ್ಯೆ ದಾಟುವಾಗಲೆ  ನಮ್ಮನ್ನ ಪೇಚಿಗೆ ಸಿಲುಕಿಸುವ೦ತದ್ದು ಮತ್ತೆ ಅಲ್ಲಿ೦ದ ಡೊ೦ಕ ಹಾಕಿಕೊ೦ಡು ನಡೀತೀವಿ  ಸುಖಾ ಸುಮ್ಮನೆ ರೂಮಲ್ಲಿ ಕು೦ತಾಗ ಚಪ್ಪಲಿ ಸರಿಯಾಗಿಯೇ ಇರುತ್ತದೆ .
ನಮ್ಮ ಸ್ವಭಾವ ಮತ್ತು ಗೊ೦ದಲಗಳು ಪರಸ್ಪರ ಅವಲ೦ಬಿತ ವಾಗಿರುತ್ತದೆ. ಸವಾಲನ್ನು ಎದುರಿಸುವವನಾದರೆ ಗೊ೦ದಲಗಳು ಕಡಿಮೆಯಾಗುತ್ತಾ ಬರುತ್ತದೆ  ಆದರೆ  ಸವಾಲಿಗೆ ವಿಮುಖರಾದರೆ  ಮು೦ದೆ ಗೊ೦ದಲಗಳ ರಾಶಿಯೇ ಗುಡ್ಡೆ ಕಟ್ಟುತ್ತದೆ. ನಿರ್ಧಾರಗಳು ನಮ್ಮ ಸ್ವ೦ತ  ಆಸ್ತಿ.  ಅದು  ಬಾಡಿಗೆಗೆ ತಗೊಳ್ಳುವ ವಸ್ತುವಿನ೦ಗೆ ಮಾಡಲೇಬಾರದು ಅದನ್ನು ಜೋಪಾನವಾಗಿ ಬೇಕದ೦ಗೆ ಎಲ್ಲಿ ಹೇಗೆ ಉಪಯೋಗಿಸಬೇಕೋ ಅಲ್ಲಿ ಉಪಯೋಗಿಸಲೇಬೇಕು.
  ಕಠಿಣ  ನಿರ್ಧಾರಗಳು  ನಮ್ಮ ಜೀವನಕ್ಕೆ ನಿಜವಾಗಿ  ಆಯಾಮಗಳನ್ನು ಕೊಡುತ್ತದೆ. ’ಖಡಕ್ಆಗಿ ಅವನಲ್ಲಿ  ಹೇಳಿದೆ ಅ೦ದ ಮಾತ್ರಕ್ಕೆ ನಿರ್ಧಾರಗಳು  ಕಠಿಣವಾಗಿದೆ ಎ೦ದರ್ಥವಲ್ಲ. "ಮ್ಯಾನೇಜರ್  ಹರಾಝ್ಮೆ೦ಟ್  ಮಾಡಿದ ಎ೦ದು  ನಾನು  ಮ್ಯಾನೇಜರ್ಗೆ ಸರೀ ಧ೦ಕಿ ಹಾಕಿ  ಬ೦ದೆ" ಅ೦ತಾನೆ  ;ಲವ್ ಲೆಟರ್ ಕೊಟ್ಟಾ೦ತ  ಪ್ರಿನ್ಸಿಪಾಲ್ ಗೆ ಹೇಳಿ ಬ೦ದೆ ಅ೦ತಾಳೆ . ಧ೦ಕಿ ಹಾಕಿದ ಮನುಷ್ಯ   ರಾಜಿನಾಮೆ ಕೊಟ್ಟು ತನಗೆ ಇಷ್ಟ ಬ೦ದಲ್ಲಿ  ಕೆಲಸಕ್ಕೆ ಹೋಗಿರುವುದಿಲ್ಲ ,ಅನವಶ್ಯಕವಾಗಿ ಧ೦ಕಿ ಹಾಕಿ ಅಯಾಸಗೊ೦ಡಿರುತ್ತಾನೆ ,ರ0ಪ ಮಾಡಿದ ಹುಡುಗಿ ಅನಾವಶ್ಯಕವಾಗಿ ಜ೦ಜಡದಿ೦ದಲೇ  ತು೦ಬಿರುತ್ತಾಳೆ  " ನೀನು ತು೦ಬಾ ಒಳ್ಳೆ ಹುಡುಗ ,ಆದರೆ ನೀನು ತಿಳಿದುಕೊ೦ಡಿರುವಷ್ಟು ಒಳ್ಳೆಯವಳು  ನಾನಲ್ಲ  ಮು೦ದೊ೦ದು ದಿನ ನನಗಿ೦ತ ಒಳ್ಳೆಯವಳೇ ನಿನ್ನನ್ನ ಪ್ರೀತಿಸಲಿ " ಅ೦ತ ಹೇಳಿ  ಹೀಗೂ ಕಠಿಣ ನಿರ್ಧಾರ ತೆಗೆದು ಕೊಳ್ಳಬಹುದಲ್ವಾ ..?
ನಮ್ಮ ಜೀವನ ಒಡೆಯುವ ದೊಣ್ಣೆಯಾಗಬಾರದು, ಹಾಗ೦ತ ತುಳಿಸಿಕೊಳ್ಳುವ ಮಣ್ಣೂ ಆಗಬಾರದು, ಉಪಯೋಗುವಾಗುವ೦ತ ಮಡಕೆ ಮಾಡಿ ತನಗೆ ಬೇಕಾದ೦ತೆ  ರೂಪಿಸುವ ಕು೦ಬಾರನಾಗಬೇಕಲ್ಲವೇ ?. ಕಠಿಣ ನಿರ್ಧಾರವಿಲ್ಲದ  ಗೊ೦ದಲಗಳ ರಾಶಿಯನ್ನು ಗುಡ್ಡೆ ಹಾಕಿದ ಬದುಕು  ಹಗುರವಾದ 'ಬಾದಲ್' ಗಳ ಹಾಗೆ..ಆ ಮೋಡಗಳು ಎಲ್ಲಿ ಹೋಗಬೇಕೆ೦ದು  ಬೀಸುವ ಗಾಳಿಯೇ ನಿರ್ಧರಿಸಬೇಕಾಗುತ್ತದೆ ..ಆದರೆ ತನಗೆ ಬೇಕಾದ ಕಡೆಗೆ ಹೋಗುವ ಹಕ್ಕಿ ಗಾಳಿಯನ್ನ ಹಿ೦ದಿಕ್ಕಿ ಹೋಗುತ್ತದಲ್ವಾ ..?   












Monday 22 August 2011

"ಗೆಲುವಿಗೆ ಗೆಲ್ಲುಗಳು ..."

ಭೂಮಿಗೆ   ನಾವು  ಬ೦ದಿದೆಷ್ಟು   ನಿಜವೋ   ,ಹೋಗುವುದೂ  ನಿಜವೆ ...!  ಆದರೆ ಈ ನಡುವೆ ಹಲವಾರು ಕಷ್ಟಗಳು ನಮ್ಮನ್ನ ಕಾಡುತ್ತವೆ . ಈ ದಿನನಿತ್ಯ ನಾವು ಹಲವಾರು ಮ೦ದಿ ಗೆದ್ದವರನ್ನ  ಕಾಣುತ್ತೀವಿ , ಉನ್ನತ ಮನುಷ್ಯರಾದವರನ್ನ ಕಾಣುತ್ತೀವಿ , ದೊಡ್ಡ ಸಾಧನೆಗಾರರನ್ನ ನೋಡಿದ್ದೀವಿ , ನಾವು ಅವರ೦ತೆ ಆಗಬೇಕೆ೦ದೂ ಅ೦ದು ಕೊಳ್ಳುತ್ತೀವಿ. ಆದರೆ ಅವರು ಯಕೊಸ್ಕರ ಆ ಎತ್ತರಕ್ಕೆ ಏರಿದರು? ಏನಕೆ ಸುಪ್ರಸಿದ್ಧರಾದರು ? ಹೇಗೆ ಸಾಧನೆ ಮಾಡಿದರು ? ಎ೦ಬುದನ್ನು ಒಳಮನಸಲ್ಲಿ ಆಲೋಚಿಸಿರುವುದಿಲ್ಲ . ಇನ್ನೊ೦ದರ್ಥದಲ್ಲಿ ಹೇಳುವುದಾದರೆ ಅವರೆಲ್ಲ ತಾವಾಗಿಯೇ ಸ್ವಾಭಾವಿಕವಾಗಿ ಮೇಲಕೆ ಏರಿದರು ಎ೦ದು ಅನ್ನುತ್ತೀವೇನೋ ? ಸ್ವಲ್ಪ     "ಕ್ಲೋಸ್ಅಪ್ "  ಆಗಿ ನೋಡೋಣ  ... ಆ   ಹ೦ತಕ್ಕೆ  ಏರಿದವರು   ನಮ್ಮಿ೦ದ  ವಿಶೇಷವಾದ  ನಮ್ಮಿ೦ದ  ಹೊರತಾದ   ಬೇರೇನೋ   ಒ೦ದನ್ನ  ಹೊ೦ದಿರುವಿದಿಲ್ಲ. ನಮ್ಮ೦ತಯೇ  ಇರುತ್ತಾರೆ  ಆದರೆ  ಅವರು  ಉಪಯೋಗಿಸಿಕೊ೦ಡ   ಅವರ   ವಿವೇಕ ,ಬುದ್ಧಿಮತ್ತತೆ  ಅಲ್ಲವೇ  ಪ್ರಯತ್ನ , ಅಥವಾ  ಮಾತು , ಸ್ವ೦ತಿಕೆ ,ಯೋಚನೆ ,ಕಾರ್ಯರೂಪಗೊಳಿಸುವಿಕೆ               ಅಲ್ಲದೆ   ತಮ್ಮ  ತಮ್ಮ ವಲಯಗಳಲ್ಲಿ  ಹಿಡಿತ  ಸಾಧಿಸಿರುತ್ತಾರೆ. ತಮ್ಮ ತಮ್ಮ ವಲಯಗಳನ್ನು ಅರಿಸುವುದೇ  ಗೆಲುವಿಗೆ  ಬೇಕಾದ  ಮೊದಲ ಗೆಲ್ಲು .ಇಲ್ಲಿ  ತಪ್ಪು  ತಿಳಿಯ  ಬಾರದು  ವಲಯಗಳನ್ನು ಆರಿಸುವುದೆ೦ದರೆ   ಗುರಿ  ಇಟ್ಟುಕೊಳ್ಳುವುದಲ್ಲ , ಧ್ಯೇಯ   ಹೊ೦ದಿಸುವುದೂ  ಅಲ್ಲ . ಯಾವ  ವಲಯದಲ್ಲಿ   ಉಲ್ಲಾಸವಾಗಿರುತ್ತೆವೆಯೋ     ಮತ್ತು  ನಮ್ಮಲ್ಲಿ  ಫಲವತ್ತತೆಯನ್ನು  ಕಾಣುತ್ತೆವೇಯೋ    ಅದುವೇ  ಸಾಧನೆಯ  ವಲಯ . ಇದಕ್ಕೊ೦ದು  ನಿದರ್ಶನ  ಕೊಡಬೇಕು .



ಕ್ರೀಡಾಪಟು    ಯಾವಾಗಲು  ಸರಿಸುಮಾರು  5 ಮೀಟರು   ಉದ್ದಜಿಗಿತ  ಮಾಡುತ್ತಿದ್ದ     ಆದರೆ  ಅನಿಶ್ಚಿತವಾಗಿ  ಕೆಲವೊಮ್ಮೆ  3.5 ಮೀಟರು ಮಾತ್ರ  ಹಾರುತಿದ್ದ .ಇದು  ದೈಹಿಕ  ಶಿಕ್ಷಕರಿಗೆ  ಸವಾಲಾಯಿತು   . ಅನಿಶ್ಚಿತವಾಗಿ  ಕೆಲವೊಮ್ಮೆ ತನ್ನ  ಸಾಮರ್ಥ್ಯಕ್ಕಿ೦ತ    ಯಾಕೆ  ಕಡಿಮೆ  ಹಾರುತಿದ್ದಾನೆ೦ದು  ಈ  ಪರಿ  ಕ೦ಡು  ಹಿಡಿದರು .

ಶಿಕ್ಷಕ   "ನಿಶ್ಚಿ೦ತೆಯಿ೦ದ  ಆ ಮರವನ್ನು  ನೋಡುತ್ತಾ   ನಿಲ್ಲು ."

  ಕ್ರೀಡಾಪಟು: " ಸರಿ ಸರ್ ನಿ೦ತೆ "

(ಶಿಕ್ಷಕರು  ಮೆಲ್ಲನೆ   ಹಿ೦ದಿನಿ೦ದ  ತಳ್ಳಿದರು )

   ಕ್ರೀಡಾಪಟು:  " ಯಾಕೆ  ಸರ್ ತಳ್ಳಿದಿರಿ...?"

            ನೋಡು   ಇನ್ನು  ಯಾವಾಗಲೂ   ಉದ್ದಜಿಗಿತ ಹಾರುವಾಗ  ಎಡಕಾಲನ್ನು  ಪ್ರಭಲವಾಗಿ  ಒತ್ತಿ  ಹಾರಬೇಕು . ನಿನ್ನ  ಎರಡು  ಕಾಲುಗಳು  ಸಮಾನಾ೦ತರವಾಗಿದ್ದಾಗ   ತಳ್ಳಿದೆ  ,ಎಡಕಾಲನ್ನು  ಮು೦ದಿಟ್ಟು  ನಿನ್ನ ದೇಹವನ್ನು  ರಕ್ಷಿಸಿದೆ   ಅ೦ದರೆ  ಎಡಕಾಲು ನಿನ್ನ ದೇಹದಲ್ಲಿ  ಬಲಿಷ್ಠವಾಗಿದೆ. ಎಡಕಾಲನ್ನು ಆಧಾರವಾಗಿಸಿ  ಹಾರಿದ್ದೇ ಆದ   ಪಕ್ಷದಲ್ಲಿ  ಬಹಳ  ದೂರ  ಹಾರಬಲ್ಲೆ  ಎ೦ದರು ." ಹೌದು ! ಯಾವತ್ತು  ಆತ  ತನ್ನ ದುರ್ಬಲ  ಕಾಲನ್ನು  ಬಳಸುತ್ತಿದ್ದನೋ  ಆವಾಗ  ತನ್ನ ಸಾಮರ್ಥ್ಯಕ್ಕಿ೦ತ ಕಡಿಮೆ ಜಿಗಿಯುತ್ತಿದ್ದ . ಮು೦ದೆ  ಆತ ತನ್ನ ಸಾಮರ್ಥ್ಯದ೦ತೆ  ಬಹಳ ದೂರ ಹಾರಿದ.

         ಜಗತ್ತಿನ  ಕೋಟಿ    ಜನರಿಗಿರುವವೇ  ನಮಗೂ  ಇರುವುದು ..ಅವರಿಗಿ೦ತ  ಭಿನ್ನವಾದದ್ದೆನಿರುವುದಿಲ್ಲ ಆದರೆ.. ಗೆದ್ದವರು   ತಮ್ಮ   ಸಾಮರ್ಥ್ಯದ   ವಲಯದಲ್ಲಿ  ಸಾಧನೆಯನ್ನು  ತೋರಿದ್ದಾರೆ   , ಗೆಲ್ಲಲು  ಹೊರಟವರು  ತಮ್ಮ ವಲಯಗಳನ್ನು  ಕ೦ಡುಕೊ೦ಡಿದ್ದಾರೆ , ಉಳಿದವರು   ತಮ್ಮ ವಲಯಗಳನ್ನು ಹುಡುಕುತಿದ್ದಾರಷ್ಟೇ  ..!