Wednesday 12 October 2011

' ಸ್ಯಾಂಡ್ ವಿಚ್ ' ಪಾಲಿಸಿಯನ್ನ ಅಳವಡಿಸಿದ್ದೀವಾ ..?

                       ' ಸ್ಯಾಂಡ್  ವಿಚ್ '  ಪಾಲಿಸಿಯನ್ನ  ಅಳವಡಿಸಿದ್ದೀವಾ ..?          

ನನ್ನ  ಬಗ್ಗೆ  ಗೊತ್ತುಂಟಲ್ಲ  ಏನಿದ್ರೂ  ನೇರವಾಗಿಯೇ ಹೇಳೋದು  ಹೀಗೆ  ಹೇಳಿಯೇ ದಿನವನ್ನ ಆರಂಭಿಸುತ್ತಾರೆ !  ವಾಸ್ತವವಾಗಿ ನೇರವಾಗಿ ಹೇಳೋದರಿಂದ  ತಾನು ನೇರವಾಗಿದ್ದೀನಿ, ನಿಂತರ ನೇರವಾಗಿ ಇಲ್ಲದೊಂತರ ಅಲ್ಲ ಎಂಬರ್ಥದಲ್ಲಿ ಮಾತನಾಡುತ್ತಾರೆ .ಅಷ್ಟಕ್ಕೂ  ಅವರು ನೇರವಾಗಿ ಹೇಳೋದು  ಇನ್ನೊಬ್ಬರ ಬಗ್ಗೆ ಟೀಕೆಗಳನ್ನ ಹೊರತು  ಅವರ ಬಗ್ಗೆ ಅಲ್ಲವೇ ಅಲ್ಲ.ಹೀಗೆ ಇನ್ನೊಬ್ಬರ ಟೀಕೆ ಮಾಡಿದಾಗ ತಾನೊಬ್ಬ  ಸಭ್ಯ ಮನುಷ್ಯನಾಗುವೆನೆ೦ದೂ ಇರುತ್ತದೆ . ಅಲ್ಲದೆ ಎಲ್ಲರ ಮೆಚ್ಚುಗೆಗೆ ಪಾತ್ರನಾಗುವೆನೆಂದೂ ಅನಿಸಿರುತ್ತಾರೆ . ಇಂತವರೆ ಹಾಗೆ  ಇನ್ನೊಬ್ಬರ ಅಭಿಪ್ರಾಯಕ್ಕೆ ಸ್ಪಂದಿಸದ , ತನ್ನ ಅಭಿಪ್ರಾಯಕ್ಕೆ ಮಾತ್ರ ಅಂಟಿಕೊಂಡು  ಬದಲಾಗದ ಹಳೇ  ಪ್ರಾವಿಶನ್ ಷ್ಟೊರು ತರ ಇರುತ್ತಾರೆ . ಅಂಗಡಿಯಲ್ಲಿ ಟೀವಿ  ಇಟ್ಟು ಗಿರಾಕಿಗಳನ್ನ ಕರೆಸಿ  ಅಂದರೆ ಸಾಕು 'ಶು೦ಠಿ  ತಗೊಳ್ಳೋಕೆ  ಗಿರಾಕಿಗಳು ಬರೋದು,ಟೀವಿ ನೋಡೋಕೆ ಅಲ್ಲ ' ಅಂತಾರೆ ಅಂಗಡಿಯಲ್ಲಿ  ಇನ್ನೂ ಶು೦ಠಿ ಗಳನ್ನ ದಾಸ್ತಾನು ಮಾಡಿ ಹಳೇ ಶು೦ಠಿ ಯನ್ನ  ಗಿರಾಕಿಗೆ ಕೊಡುತ್ತಾರೆ! ನಮ್ಮ ಪಾಲಿಸಿಗಳನ್ನ ಬದಲಾವಣೆ ಮಾಡದ ಹೊರತು ಜೀವನದಲ್ಲೂ ಬದಲಾವಣೆಯಾಗಿರುವುದಿಲ್ಲ.

ಟೀಕೆ  ನಮ್ಮ ತೀಟೆ ಗೋಸ್ಕರ ಉಪಯೋಗಿಸುವುದಲ್ಲ , ಅನವಶ್ಯಕ ಕಿರಿಕ್ಕನ್ನು ಉಂಟು  ಮಾಡಬಾರದು , ಟೀಕೆಯನ್ನು ಕೇಳಿಸಿದವನಲ್ಲಿ ಕಿರಿ ಕಿರಿ ಉಂಟಾದರೆ ಆ ಟೀಕೆ ಎಳ್ಳಷ್ಟು ಉಪಯೋಗವಿಲ್ಲ ಸಂಪೂರ್ಣ   ವ್ಯರ್ಥ.ಟೀಕೆಯನ್ನ ಸಂಪೂರ್ಣ ಪರಿಣಾಮಕಾರಿಯನ್ನಾಗಿಸಬೇಕು .  
ಅಭಿಪ್ರಾಯ ಹೇಳುವ ಮುನ್ನ  ಒಮ್ಮೆ ಯೋಚಿಸಬೇಕು   ಅಭಿಪ್ರಾಯ ಹೇಳಲು ನಮ್ಮ ಪಾತ್ರವೇನು?  ಇದು ಸಂಧರ್ಭನಾ? ಹೇಳದೆ ಇದ್ದರೆ   ಏನಾಗಬಹುದು? ಹೇಗೆ ಹೇಳಬೇಕು ?

ಅಭಿಪ್ರಾಯ  ಹೇಳುವ   ವಿಧಾನದಲ್ಲಿ,ಟೀಕೆ ಮಾಡುವಲ್ಲಿ  ಎಡವಿದರೆ  ಸಾಕು ನಮ್ಮ ಸಂಬಂಧಗಳು  ಎಕ್ಕುಟ್ಟಿ ಹೋಗಲು ಶುರುವಾಗುತ್ತದೆ.  'ಹಳಸಿದ  ರುಚಿ ಸಾಂಬಾರಿಗಿದೆ,ಒಂದು ದಿನವೂ ಸಾಂಬಾರು ತಿನ್ನೋತರ ಆಗಿಲ್ಲ'  'ಇಲ್ಲದ ರಾಗದಲ್ಲಿ ಹಾಡಿದ್ದೀಯ ಕೇಳೋನು ಯಾರು'  'ನೀನೊಬ್ಬ ವಿಚಿತ್ರ ಮನುಷ್ಯ'..ಹೀಗೆ ಟೀಕೆಗಳು...ಇಲ್ಲಿ ಸಾಂಬಾರು  'ಹಳಸು'ವುದಕ್ಕಿ೦ತಲೂ  ಸಂಭಂಧಗಳೇ ಹಳಸಲು ಶುರುವಾಗುತ್ತದೆ ,ಇಲ್ಲದ ರಾಗಕ್ಕಿಂತ ಇರುವ ರಾಗವೇ ಮುಂದೆ ಕಷ್ಟ ವಾಗುತ್ತದೆ , ವಿಚಿತ್ರ ಮನುಷ್ಯ ಇನ್ನೂ ಚಿತ್ರ ವಿಚಿತ್ರ ನಾಗುತ್ತಾನೆ .

ಟೀಕೆಯ ಮುನ್ನ  'ಸ್ಯಾಂಡು ವಿಚ್' ನ ನೆನೆಯಬೇಕು  ಅದರ ಮೇಲಿನ ಪದರ ಮೃದುವಾದ  ಬ್ರೆಡ್ ನಿಂದ ಕೂಡಿದೆ ,ಕೆಳಗೂ ಮೆತ್ತಗಿನ ಬ್ರೆಡ್ ಹಾಸಿದ್ದಾರೆ  ಇರಬೇಕಾದ ತಿರುಳು ,ಮಸಾಲೆ ಇದರ ಮಧ್ಯದಲ್ಲಿ ಇಟ್ಟು   ಬೆಚ್ಚಗೆ  ಮಾಡುತ್ತಾರೆ . ಬರೀ ತಿರುಳು ಮತ್ತು ಮಸಾಲೆ ತಿನ್ನೋದಕ್ಕೆ ,ಕರಗಿಸಿ ಕೊಳ್ಳೋದಕ್ಕೆ ಕಷ್ಟ .
ಮೊದಲು ಟೀಕೆಯಲ್ಲಿ  ಧನಾತ್ಮಕ ಅಂಶಗಳು ,ಕೊನೆಗೂ ಟೀಕೆಯಲ್ಲಿ ಧನಾತ್ಮಕ ಅಂಶಗಳು ,ಇದರ ಮಧ್ಯದಲ್ಲಿ ಹೇಳಬೇಕಾದ ಅಭಿಪ್ರಾಯಗಳನ್ನು ತುಂಬಿ  ಸ್ಯಾಂಡ್ ವಿಚ್ ತರ ಇದ್ದರೆ  ಅರಗಿಸಿ ಕೊಳ್ಳ ಬಹುದಲ್ವಾ..?



2 comments:

  1. ಸಾಂಡ್ ವಿಚ್ ಪಾಲಿಸಿ ಯಲ್ಲಿಯೇ ನನ್ನ ಪ್ರತಿಕ್ರಿಯೆ ಬರೆಯುವ ಪ್ರಯತ್ನ ಮಾಡುತ್ತೇನೆ..!!

    ಅಂಕಣ ಒಂದು ಒಳ್ಳೆಯ ಪ್ರಯತ್ನ. ಬಹಳ ಶ್ಲಾಘನೀಯ .
    ಅಂಕಣದುದ್ದಕ್ಕೂ ಸ್ವಂತಿಕೆ ಎದ್ದು ಕಾಣುತ್ತದೆ.ತನ್ನ ಸುತ್ತಲಿನ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಿದ
    ಒಂದು ಸಂವೇದನಾಶೀಲ ಮನಸ್ಸಿನ ಉತ್ಪನ್ನ , ಈ ಅಂಕಣ ಎಂದು ಯಾವುದೇ ಎಗ್ಗಿಲ್ಲದೆ ಹೇಳಬಹುದು.

    ಭಾಷೆಯ ಮಟ್ಟಿಗೆ ಹೇಳುವುದಾದರೆ ,ಮಂಗಳೂರು-ಬೆಂಗಳೂರು- ಗ್ರಾಮೀಣ ಕನ್ನಡ - ಇಂಗ್ಲಿಷ್ ಗಳ ಸುಂದರ ಸಂಮಿಲನ.
    ಮೊದಲ ಸಾಲಿನಲ್ಲಿ (ನನ್ನ ಬಗ್ಗೆ ಗೊತ್ತುಂಟಲ್ಲ ...) ,ಮಂಗಳೂರು ಕನ್ನಡದ ಕಂಪು ಹರಿದಿದ್ದರೆ, ಎರಡನೇ ಸಾಲಿನಲ್ಲಿ
    ( ನೇರವಾಗಿದ್ದೀನಿ,..) ಬೆಂಗಳೂರು ಕನ್ನಡದ ವಾಸನೆ ಬಡಿಯುತ್ತದೆ. ಇಂಗ್ಲಿಷ್ ಪದಗಳು ಅಗತ್ಯಕ್ಕೆ ತಕ್ಕಷ್ಟೇ ಕೂಡಿಕೊಂಡು
    ವಾಕ್ಯದ ಸೊಗಸನ್ನು ಹೆಚ್ಚಿಸಿವೆ.

    ಆದರೆ ಲೇಖಕರು ತಾವು ಈ ನಿಟ್ಟಿನಲ್ಲಿ ಯಾವ ಪ್ರಯತ್ನ ಮಾಡಿದ್ದಾರೆ ಎಂಬುದಕ್ಕೆ ಯಾವ ಪುರಾವೆಯೂ ಈ ಲೇಖನದಲ್ಲಿ ಲಭ್ಯವಿಲ್ಲ.
    ತಮ್ಮದೇ ಜೀವನದ ದೃಷ್ಟಾಂತವನ್ನು ಒದಗಿಸಿದ್ದರೆ, ಲೇಖನಕ್ಕೆ ಇನ್ನಷ್ಟು ಗಟ್ಟಿತನ ಬರುತ್ತಿತ್ತು ಎಂಬುದರಲ್ಲಿ ಸಂಶಯವಿಲ್ಲ.ಅಂದರೆ,
    ಲೇಖಕರು ಯಾವುದಾದರೂ ಸಂದರ್ಭದಲ್ಲಿ ಸಾಂಡ್ ವಿಚ್ ಪಾಲಿಸಿ ಯನ್ನು ಅಳವಡಿಸಿದ್ದಾರೆಯೇ ಎಂಬುದು ಅಸ್ಪಷ್ಟ. ಅದಿಲ್ಲದಿದ್ದರೆ
    ಈ ಲೇಖನವೂ ,ಪರರಿಗೆ ಹಿತವಚನ ಬೋಧಿಸುವ ಸಾವಿರಾರು ಲೇಖನಗಳಲ್ಲಿ ತಾನೂ ಒಂದಾಗಿ ಹೋಗುವ ಅಪಾಯವಿದೆ.

    ಮಾನವೀಯ ಸಂಬಂಧಗಳು ಹಳಸುತ್ತಿರುವ ಈ ಕಾಲದಲ್ಲಿ ಹಳಸುತ್ತಿರುವ ಸಂಬಂಧದ ಬಗೆಗಿನ ಈ ಅಂಕಣ ಸಕಾಲಿಕ ಹಾಗೂ
    ಔಚಿತ್ಯಪೂರ್ಣ. ಉತ್ತಮ ಅಂಕಣಕಾರರಾಗುವ ಎಲ್ಲ ಕುರುಹುಗಳನ್ನು ಲೇಖನದುದ್ದಕ್ಕೂ ಕೆಪಿ ಯವರು ಬಿತ್ತುತ್ತಾ ಹೋಗಿ,
    ಮುಂದಿನ ಅಂಕಣಕ್ಕೆ ನಾವು ಕಾದು ಕೂರುವಂತೆ ಮಾಡಿದ್ದಾರೆ.

    ಶ್ರೀಹರ್ಷ ನೆಟ್ಟಾರು

    ReplyDelete
  2. ಶ್ರೀ ಹರ್ಷ ಅವರ ಅಭಿಪ್ರಾಯ ಸ್ವಾಗತಾರ್ಹ ,ಇಂತಹ ಅಭಿಪ್ರಾಯ "ಕಟ್ಟಡಗಳಿಗೆ ಬೇಕಾದ ಇಟ್ಟಿಗೆಯಂತೆ " ಮುಂದಿನ ಅಂಕಣಗಳು ಉತ್ತಮವಾಗಲು ಬುನಾದಿಯಾಗುತ್ತದೆ.

    ಅಭಿಪ್ರಾಯಕ್ಕಾಗಿ ತುಂಬು ಧನ್ಯವಾದಗಳು .

    ReplyDelete