Thursday 20 October 2011

KP Nettar 's " ಕರ್ಣ ಭಾರತ "

                                                 KP  Nettar 's 
     
                                    " ಕರ್ಣ  ಭಾರತ "

ಗದಗಿನ  ವೀರ  ನಾರಣಪ್ಪ (ಕುಮಾರವ್ಯಾಸ ) ಮಹಾಭಾರತವನ್ನ   ಭಟ್ಟಿಇಳಿಸಿ  ನಮಗೆಲ್ಲ  ರಕ್ತಗತ ವಾಗುವಂತೆ ಮಾಡಿದ .ಅವನ  ಕಾವ್ಯದಲ್ಲಿ  ನಮಗೆಲ್ಲ ಚೈತನ್ಯ ತುಂಬಿಸುವ  ಶಕ್ತಿ ಇದೆ ಇನ್ನು ಓದುವ ಎನ್ನುವ ಕೌತುಕವಿದೆ ,ನೋವಾಗುವಾಗ ಬೇಕಾಗುವ  ಸಾಂತ್ವಾನ  ಇದೆ ,ಜೀವನದುದ್ದಕ್ಕೂ ಬೇಕಾಗುವ ಉಪಾಯಗಳಿವೆ ,ಶೃಂಗಾರವಿದೆ ,ರಸಿಕರಿಗೆ ರಸಗಳಿವೆ ,ಶಾಸ್ತ್ರಜ್ಞರಿಗೆ  ಶಾಸ್ತ್ರಗಳಿವೆ ,ತರ್ಕಗಳಿವೆ ,ಉಲ್ಲಾಸವಿದೆ ,ಮೇಲಾಗಿ ಕರ್ನಾಟಕ ದಲ್ಲಿ ಭಾರತ  ಇದೆ!
 KP Nettar 's  ಗಣಕೀಕೃತ   ಅಕ್ಷರವಷ್ಟೆ  !!

 ಧರೆ ನೆನೆದ  ದುಷ್ಕ್ರುತವ ದೇನೆಂ
 ದರಸ ಬೆಸಗೊಂಬೈ  ನಿರಂತರ
 ಸುರಿವ ರುಧಿರಾಸಾರದಲಿ ಕೆಸರೆದ್ದು ಕಳನೊಳಗೆ
 ಹರಿವ ಬಿಂಕದ ರಥದ ಗಾಲಿಯ
 ಗರುವತನ  ಗಾಳಾಯ್ತಲೇ ಖೋ
 ಪ್ಪರಿಸಿತು ತಗ್ಗಿತು ತೇರು ತಡೆದುದು ಭಟನ  ಸಾಹಸವ

ಸಂಜಯ : ಎಲೈ  ಧೃತರಾಷ್ಟ್ರ ಭೂಪಾಲ  ಕೌರವೇಶ್ವರನ  ಧರೆಗೆಂದೇ  ತನ್ನ ಜೀವನವನ್ನು ಮುಡಿಪಾಗಿಸಿದ  ವೀರ  ಕರ್ಣ ನಿಗೆ  ಆ ಧರೆಯೇ   ಅಪಹಾಸ್ಯ ಮಾಡಿ  ಕಂಠಕವನ್ನು  ತಂದ  ಪರಿ ಕೇಳು .ಸವ್ಯ ಸಾಚಿಯಾದಂತಹ ಗಾಂಢೀವಿ ಏಕ ಕಾಲದಲ್ಲಿ  ಒಂದೇ ಬಾಣದಿಂದ  ಹಲವು ಗುರಿಯನ್ನಾಗಿಸಿದ್ದ . ಮಾತ್ರವಲ್ಲದೆ  ಏಕ ಕಾಲದಲ್ಲಿ ಹಲವು ಬಾಣಗಳಿಂದ ಒಂದೇ ಗುರಿಯನ್ನಾಗಿಸಿ   ಬೇಧಿಸಿದ್ದ . ಆದರೆ ಇದೆಲ್ಲವೂ ಕರ್ಣನ  ವೀರತನಕ್ಕೆ  ನಿರಾಯಾಸವಾಯಿತು. ಏಕಕಾಲದಲ್ಲಿ ವೈರಿಗಳ   ಕೆಲವು ಶರಗಳನ್ನೇಕೆ . ಸಹಸ್ರ ಶರಗಳನ್ನು ತುಂಡರಿಸುವ  ಚಾಣಾಕ್ಷತೆಯನ್ನ ತೋರಿದ . ಜಗದ್ಗುರು  ಪರಶುರಾಮರೆ ಬಂದು  ಹೋರಾಡುತ್ತಿದ್ದಾರೆ ಎಂಬಂತೆ ಬಾಸವಾಗುತ್ತಿತ್ತು. ಗ್ರಹಣವಾದಾಗ ಹೇಗೆ ಸೂರ್ಯ ರಶ್ಮಿಗಳು ಮಂಕಾಗುವುದೋ  ಹಾಗೆಯೇ  ಅರ್ಜುನನ ಬಾಣಗಳು ಮಂಕಾಗತೊಡಗಿದವು . ಸೂರ್ಯದೇವ  ತನ್ನ ರಶ್ಮಿಗಳನ್ನ ಕರ್ಣದೇವನಿಗೆ ಮಾತ್ರ ಕೊಟ್ಟು ತಾರತಮ್ಯ ಮಾಡುವಂತೆ ಭಾಸವಾಗುತ್ತಿತ್ತು . ಭೀಮನ ಗರ್ವ ಭಂಗ ಕರ್ಣನ ಸಾರಥ್ಯದಲ್ಲೇ ನಡೆಯಿತು . 
ಈ ಭೀಕರ ಬಾಣಗಳಿಂದ  ರಕ್ತಗಳ ಒರತೆಯೇ ಶುರುವಾದವು . ಕೌರವೇಶ್ವರ  ಅಥವಾ ಧರ್ಮರಾಜ ಇನ್ನು ಸ್ಮಶಾನಕ್ಕೆ ರಾಜ ಎಂದು  ಭಟರ  ಮಡದಿಯರು  ಕಿರುಚಾಡುತಿದ್ದರು. ಗಂಗೆಯಲ್ಲಿ ನೀರಿನ ಬದಲು ರಕ್ತ ಹರಿದರೆ ಹೇಗೋ ಹಾಗೆ ಕುರುಕ್ಷೇತ್ರದಲ್ಲಿ ಆಯಿತು. ಮಹಾರಾಜ,  ಗ್ರಹಣವು ಸೂರ್ಯನ ಕಿರಣಗಳನ್ನ  ಹೇಗೆ ಕ್ಷಣಿಕ ಕಾಲಕ್ಕೆ ಮಾತ್ರ  ಮಂಕಾಗಿಸುವುದೋ ಹಾಗೆ  ಅರ್ಜುನದೇವನನ್ನ ಮಂಕಾಗಿಸಿದ್ದು  ಕ್ಷಣಿಕಕ್ಕೆ  ಮಾತ್ರವಪ್ಪ ...
ಭಟರ ಮಡದಿಯರ  ಶಾಪವೋ , ಧರೆಗೆ ಕರ್ಣನ  ರಥದ ಗಾಲಿಗೆ ನೋವಾಗದಿರಲಿ ಎಂಬ  ಅನುಕಂಪವೋ,ಕರ್ಣನ ರಥ ಇರುವ ಭುವಿ  ಮೃದು ಹಾಸಿಗೆಯಂತೆ ಜೌಗು ಆಗತೊಡಗಿತು .ಕರ್ಣ ಇನ್ನೇನು  ಅರ್ಜುನನನ್ನು  ಗೆಲುವನು  ಎಂಬ ಸಂದರ್ಭದಲ್ಲಿ ಹೀಗಾಗಬೇಕೆ ?ರಥವು ವಾಲಿದವು ..ಕುದುರೆಗಳು ಡೊಂಕ ಹಾಕಲು  ಶುರುಮಾಡಿದವು. ಧರೆಗೆ ಕರ್ಣನನು  ಸೂರ್ಯ ರಶ್ಮಿ ಗಳನ್ನು ಹೀರಿದ ಕಮಲದಂತೆ ಕಂಡನು .ಆದ್ದರಿಂದ  ರಥದ  ಸುತ್ತ ಮುತ್ತಲೂ ಕೆಸರಾಯಿತು .ಯುದ್ಧದ ರಥ ಉಳುವ ನೇಗಿಲಾಯಿತು  . ಕರ್ಣ ತನ್ನ ಧನುಸ್ಸನ್ನು  ರಥದಲ್ಲಿ ಮಡಗಿ ,ರಟ್ಟೆಗಳಲ್ಲಿರುವ  ಶಕ್ತಿಯನ್ನೆಲ್ಲ    ಗಾಲಿಯನ್ನು ಕೆಸರಿನಿಂದ ತೆಗೆಯಲು ಪ್ರಯೋಗಿಸಿದನು, . ಮರು ಪ್ರಯತ್ನವನ್ನ ಮಾಡಿದನು ರಥವು ಸ್ವಲ್ಪ ಅಲುಗಾಡಿತಾದರೂ ಮೇಲೇರದ್ದನ್ನು ಕಂಡು ತನ್ನಲ್ಲಿರುವ ಎಲ್ಲಾ ಶಕ್ತಿಯನ್ನು ಪ್ರಯೋಗಿಸಿದನು ಇನ್ನೇನು ಮೇಲೆ ಬರುತ್ತದೆ ಎಂದು ಸಂತಸ ಪಟ್ಟನು ಕೌರವನಿಗೆ ಜಯ ನಿಶ್ಚಯ ಎಂದು ಮನದಲ್ಲೇ ಅಡಿಗಡಿಗೆ ಸಂತಸ ಪಟ್ಟನು , ಅಷ್ಟರಲ್ಲಿ ರಥವು ದೊಪ್ಪನೆ  ಮೊದಲಿನಂತೆ ಪುನ: ಕೆಸರಪಾಲಾಯಿತು .ತನ್ನ ಬಲವನ್ನೆಲ್ಲಾ ಬಾಣಗಳಿಗೆ  ಪ್ರಯೋಗಿಸುವ ಬದಲು ರಥವನ್ನು ಮೇಲಕ್ಕೆತ್ತಲು ಪ್ರಯೋಗಿಸಿದನು .ವೀರ ಕರ್ಣನ ಸಾಹಸವನ್ನು ಧರೆಯೇ ನುಂಗಿತು .ಸಾರಥಿಯಾದವನು  ನನ್ನಂತಹ  ಮಹಾರಥಿಗೆ ಸಲಹೆ ಕೊಡಬಾರದೆಂದು ಅವಮಾನಿಸಿ ಶಲ್ಯನನ್ನು   ಅಟ್ಟಿದೆ ,ಬಹುಶ: ಶಲ್ಯನು  ಸಾರಥಿಯಾಗಿರುತಿದ್ದರೆ ತನ್ನ ನೈಪುಣ್ಯತೆಯಿಂದ ರಥವನ್ನು ಈ ಹೂಳು ತುಂಬಿದ ಜಾಗದಿಂದ  ತಪ್ಪಿಸುತಿದ್ದನೇನೋ ..ಎಂದು ಕರ್ಣನು ಅಡಿಗಡಿಗೆ  ಮರುಗಿದನು .

ಇಳುಹಿದನು  ರಥದೊಳಗೆ  ಚಾಪವ
ನಳವಡಿಸಿದನು  ಸೆರಗಿನಲ್ಲಿಂ  
ದಿಳಿದು   ಗಾಲಿಯನಲುಗಿ ಪಾರ್ಥನನೋಡಿ ನಸುನಗುತ
ಎಲೈ  ಧನಂಜಯ ಸೈರಿಸುವುದರೆ
ಗಳಿಗೆಯನು ರಥವೆತ್ತಿ  ನಿನಗಾ
ನಳವಿಗೊಡುವೆನು ತನ್ನ ಪರಿಯನು  ಬಳಿಕ ನೋಡೆಂದ  ||

ರೂಢಿಸಿದ ಭಟ ನೀನು ಪ೦ಥದ
ಪಾಡುಗಳ ಬಲ್ಲವನು    ಶಾಸ್ತ್ರವ
ಖೋಡಿಗಳೆವವನಲ್ಲ ಲೌಕಿಕ  ವೈದಿಕ ಸ್ಥಿತಿಯ
ನಾಡೆ ಬಲ್ಲಿರಿ  ಶಸ್ತ್ರ ಹೀನರ
ಕೂಡೆ  ವಾಹನ ಹೀನರಲಿ ಕೈ
ಮಾಡಲನುಚಿತವೆಂಬ   ಮಾರ್ಗವನೆಂದನಾ   ಕರ್ಣ  ||




ಎಲೈ ಧನಂಜಯ ಗುರುವನ್ನು ಮೀರಿದ ಪ್ರತಿಭೆ ನಿನ್ನದು  ಭೀಷ್ಮ  ದ್ರೋಣರನ್ನು ಸೋಲಿಸಿದೆ ,ದಿನಕಳೆಯುದರೊಳಗೆ ಜಯದ್ರಥನ  ವಧೆ ಮಾಡದಿರೆ  ಅಗ್ನಿಗೆ  ಹಾರುವೆನೆಂದು  ಪ್ರತಿಜ್ನೆಯೂ ಆಯಿತು , ಇನ್ನೇನು  ಸೂರ್ಯ  ಮರೆಮಾಚುವನು ಎನ್ನುವಷ್ಟರಲ್ಲಿ  ಅವನ ತಲೆ ನಿನ್ನ ಬಾಣಗಳಿಗೆ ಆಹುತಿಯಾದವು.  ಗೋ ಗ್ರಹಣ ದಲ್ಲಿಯೂ  ಎಲ್ಲರನ್ನೂ ಮಣ್ಣು ಮುಕ್ಕಿಸಿದೆ.
ನನ್ನ ರಥವು ಕೆಸರಲ್ಲಿ ಹೂತು ಹೋಗಿದೆ, ಚಾಣಕ್ಷ ಸಾರಥಿಯಾದಂಥ ಶಲ್ಯ ನಿಂದ ದೂರನಾದೆ, ನಾನು ಈಗ ಶಸ್ತ್ರ ಹೀನನಾಗಿದ್ದೇನೆ,

ಏಸು ಮರುಳೆ  ಗಾಂದೀವಿಯಾಪ
ತ್ತೆಸಗಿದಾಗಲೇ  ಹಗೆಯ ಗೆಲುವುದು.

 .......ಮುಂದುವರಿಯುವುದು    ..,





  





1 comment:

  1. ತುಂಬಾ ಮಧುರವಾಗಿ ಮೂಡಿ ಬಂದಿರುವ ತಮ್ಮ ಬರಹ ಹೀಗೆ ಮುಂದುವರೆಯಲಿ.

    ReplyDelete