Thursday 27 October 2011

' ಗೊಂಜೇಲ ' ರ ಕಂಡಿರಾ ..?

                                  '  ಗೊಂಜೇಲ ' ರ   ಕಂಡಿರಾ ..?

 ಕಾಮತ್ ಜಾತಿಯವರ ಹೋಟೆಲ್ ನಲ್ಲಿ ರುಚಿಯಾದ ಊಟವನ್ನ ಉಂಡಿದ್ದೀವಿ, ಗತ್ತು  ಇರುವ ಶೆಟ್ಟಿ ಜಾತಿಯವರನ್ನು ಕಂಡಿದ್ದೀವಿ, ಶಾಲು ಹಾಕಿ ಕೊಂಡು ಗ್ರಾಮದಲ್ಲಿರುವ  ಗೌಡರನ್ನ ನೋಡಿದ್ದೀವಿ, ಪೂಜೆ ಮಾಡುವ ಬ್ರಾಹ್ಮಣ ಜಾತಿಯನ್ನ ನೋಡಿದ್ದೀವಿ, ಲಾಭದಾಯಕವಾಗಿ  ವ್ಯಾಪರಮಾಡುವ ಮುಸಲ್ಮಾನ ಜಾತಿಯವರಲ್ಲಿ ವ್ಯಾಪಾರ ಮಾಡಿರುತ್ತೀವಿ,  ಕ್ರಿಶ್ಚ್ಯನ್  ಜಾತಿಯವರಿಂದ   ಶಾಂತಿ ಮಂತ್ರ ವನ್ನ ಕೇಳಿರುತ್ತೀವಿ ,...ಹೀಗೆ ಹಲವಾರು  ಜಾತಿ ,ಜಾತಿಯೊಳಗೆ  ಐನೂರ ಎಂಟು  ಜಾತಿ, ಅದರಲ್ಲಿ ಮುನ್ನೂರ ಎಂಟು ಉಪಜಾತಿ,  ಆಯಾಯ ಜಾತಿಗಳಲ್ಲಿ ವಿವಿಧ ಕ್ರಮಗಳು.

 ' ಗೊಂಜೇಲ '  ಎಂಬ ಜಾತಿಯನ್ನ ಕೇಳಿದ್ದೀರಾ? ನೋಡಿದ್ದೀರಾ?  .....ಕೇಳಿ, ಇವರು ಅಲ್ಪ  ಸಂಖ್ಯಾತರು ಅಲ್ಲ,ಬಹುಸಂಖ್ಯಾತಾರೆ  ಆಗಿರುತ್ತಾರೆ!   ಇವರು ಯಾವುದೋ ಬುಡಕಟ್ಟು ಜನಾಂಗದವರಾಗಿರುವುದಿಲ್ಲ , ನಮ್ಮ ಓರಗೆಯವರೇ, ಬಂಧುಗಳೇ ,ನಮ್ಮೊಂದಿಗೆ ಕಲಿಯುವವರೇ, ನಮ್ಮೊಂದಿಗೆ ಹಾಸ್ಟೆಲ್ ನಲ್ಲಿರುವವರೇ, ನಮ್ಮೊಂದಿಗೆ ಉದ್ಯೋಗ ಮಾಡುವವರೇ, ನಮ್ಮ ಆಸಕ್ತಿ, ಹವ್ಯಾಸಿಗರೇ ಆಗಿರುತ್ತಾರೆ.

"ಒಮ್ಮೆ ಸೂಜಿ  ಕೊಡುತ್ತೀರಾ..? ಮುಳ್ಳು ತೆಗೆದ ತಕ್ಷಣ  ನಾಳೆ  ಒಳಗೆ ಕೊಡುತ್ತೀನಿ " " ನಿಮ್ಮಲ್ಲಿ  ಆ ಪುಸ್ತಕ ಇದಿಯಲ್ಲಾ.. ಪುಸ್ತಕ ಓದಿ ನಂತರ ವಾಪಾಸ್ ಮಾಡುತ್ತೀನಿ" "ಪರೀಕ್ಷೆ  ಕಳೆದು  ಗೈಡು  ಪುಸ್ತಕ  ವಾಪಾಸ್ ಮಾಡುತ್ತೀನಿ "      " ನಾನೂ ಸಂಕರ್  ನಾಗ್  ಫ್ಯಾನು  ಅವನದ್ಯಾವುದಾದ್ರು  CD   ಐತಾ ..? ಸಿನಿಮಾ ನೋಡಿ ವಾಪಾಸ್ ಕೊಟ್ಬಿಟ್ಟೆ "   "ಸಂಜೆಯೊಳಗಾಗಿ   ಸ್ಕ್ರೂ  ಹಾಕಿ  ಕಟ್ಟಿಂಗ್ ಪ್ಲೇಯರ್ ,ಸ್ಕ್ರೂ ಡ್ರೈವರ್  ವಾಪಸ್ ಮಾಡುತ್ತೀವಿ"  "ನೈಲ್ ಪಾಲಿಶ್ ಹಾಕಿ ತಕ್ಷಣ ವಾಪಸ್ ಮಾಡ್ತೀನಿ..."
 ಹೀಗೆ  ಒಮ್ಮೆಗೆ  ಎಂದು ನಮ್ಮ ಕೈಯ್ಯಿಂದ  ತಗೊಂಡು  ಹೋದ  ವಸ್ತು ಅವರದ್ದೇ  ಆಗಿರುತ್ತದೆ! ಇದು ಮುಂದೆ ಹೀಗೆ ಆಗಬಹುದು ಎಂದು ನಮಗೂ ಗೊತ್ತಿರುತ್ತದೆ  ಆದರೆ ದಾಕ್ಷಿಣ್ಯಕ್ಕೆ ಸಿಕ್ಕಿಕೊಂಡು ಕೊಟ್ಟುಬಿಡುತ್ತೇವೆ. ನಾವು ಕೊಟ್ಟಿಲ್ಲ ಅಂದ್ರೆ  ನಮ್ಮದೇ ತಪ್ಪು ಎಂದು ನಮ್ಮ ವಠಾರದಲ್ಲಿ  ರಾದ್ಧಾಂತ ಮಾಡಿರುತ್ತಾರೆ. ಅವರಿಗೆ ಉಪಯೋಗವಾದಮೇಲೆ ವಾಪಾಸ್ ಮಾಡುತ್ತೀರಾ ಎಂದು ಕೇಳಿದೇವಾ  ಅಲ್ಲೂ    ಇವನಲ್ಲಿ ಇನ್ನುಮುಂದೆ ಯಾರೂ  ಕೇಳಲೇ  ಬೇಡಿ  ಎಂದೂ  ರಾದ್ಧಾಂತ  ಮಾಡುತ್ತಾರೆ. ಇವರು ಅನುಕೂಲಸ್ತರಲ್ಲದವರಲ್ಲ, ಅನುಕೂಲಸ್ತರೆ ಆಗಿರುತ್ತಾರೆ. ನೆನಪಿಡಬೇಕಾದದ್ದು ಇದು ನಮಗೆ ಮುಳ್ಳು ಚುಚ್ಚಿದಾಗ  ಅವರಲ್ಲಿ  ಸೂಜಿ ಏನು  ಸಲಾಕೆ , ಐಪಾಡ್  ಗಳೇ ಇರುತ್ತವೆ, ಆದರೆ ಅವುಗಳಿಂದ  ನಮ್ಮ ಮುಳ್ಳು  ತಗೆಯೋಕೆ ಆಗುವುದಿಲ್ಲ . ಕೊನೆಗೆ ಅದೇನು ಮಹಾ ಕೋಟಿ ರೂಪಾಯಿದಾ..? ಅಂತಲೂ ಉಸುಬುತ್ತಾರೆ. ನಮಗೆ ಬೇಕಾದ ಸೂಜಿ ಕೊಳ್ಳಲು , ಬೇಕಾದ ಪುಸ್ತಕ ತಗೊಳ್ಳಲು ,ಬೇಕಾದ ಸಿ ಡಿ ತಗೊಳ್ಳಲು ,ಕೋಟಿಗಿಂತಲೂ  ಹೆಚ್ಚಾದ  ಹುಡುಕಾಟ ಮಾಡಿರುತ್ತೀವಿ, ಸಮಯ ಕಳೆದಿರುತ್ತವೆ, ಆದರೆ ಅವರ    ' ಗೊಂಜೇಲು '   ತನಕ್ಕೆ     ಇದೆಲ್ಲವೂ ನಗಣ್ಯ, ಯಾವುದೂ ಕಾಣಿಸುವುದಿಲ್ಲ  ..

ಚಹಾ ಕುಡಿಯಲು ಒಟ್ಟಿಗೆ ಬಂದಿರುತ್ತಾರೆ, ಜೈಕಾರ  ಹಾಕಿಕೊಂಡು  ನಮ್ಮಲ್ಲೇ  ಇರುತ್ತಾರೆ, ಮದುವೆ ದಿಬ್ಬಣಕ್ಕೂ   ಊಟಕ್ಕೂ ಬಂದಿರುತ್ತಾರೆ..ಆದರೆ..;
ಇನ್ನೊಬ್ಬರಿಗೆ ಉಪಟಳ ಕೊಟ್ಟು ,  ತಗೊಂಡದನ್ನ  ಹಿಂದುರುಗಿಸದ, ರಾದ್ದಾಂತ ವನ್ನೇ ಇಷ್ಟ ಪಡುವ  ಗೊಂಜೇಲು ತನಕ್ಕೆ ದಿಕ್ಕಾರವಿರಲಿ, ಅವರೊಂದಿಗೆ ದಾಕ್ಷಿಣ್ಯದ  ಮಾತೇ    ಬೇಡ. ನಿಮ್ಮೊಂದಿಗೆ ಜೈ ಕಾರ ಹಾಕಲಿಲ್ಲ ಎಂದು  ನೀವು ಬೇಜಾರು ಪಡುವುದಿಲ್ಲ, ಮದುವೆ ದಿಬ್ಬಣಕ್ಕೆ ಬಂದು ಉಣದೆ ಇದ್ದರೂ ಚಿಂತೆಯಿಲ್ಲ, ನಿಮ್ಮೊಂದಿಗೆ  ಚಹಾ ಕುಡಿಯಲು ಒಟ್ಟಿಗೆ  ಬಂದಿಲ್ಲವಲ್ಲಾ  ಎಂಬ ತುಡಿಕೆಯಿಲ್ಲ. ಅವರು ಗೊಂಜೇಲು ತನವನ್ನ ಬಿಟ್ಟರೆ  ಅಷ್ಟೇ  ಸಾಕಲ್ವೆ..ಅದೇ ದೊಡ್ಡ ನೆಮ್ಮದಿ ಆಲ್ವಾ..?

ನನ್ನಲ್ಲಿರುವ  ಗೊಂಜೇಲು ತನಕ್ಕೆ  ಹಠಾವೋ  ಚಳುವಳಿ  ಇವತ್ತೇ ಶುರು  ಹಚ್ಕೊಂಡಿದ್ದೀನಿ....ನೀವು..?




1 comment:

  1. ಗೊಂಜೇಲುತನ "ಕ್ಲೆಪ್ಟೋಮೇನಿಯಾ" ತರಹದ ಕ್ರಮಭಂಗವಾಗಿರುವ ಸಾಧ್ಯತೆಯಿರಬಹುದು...

    ReplyDelete