Sunday 30 October 2011

ನವಿಲೇಕೆ ಹಾಡಲಿಲ್ಲ ..?

                                     ನವಿಲೇಕೆ  ಹಾಡಲಿಲ್ಲ ..?    

 ಕಾಡಿನಲ್ಲಿ  ಒಮ್ಮೆ  ಸಾಂಸ್ಕೃತಿಕ  ಸಮ್ಮೇಳನವೇ  ನಡೆಯಿತು . ಅಲ್ಲಿ  ಸಿಂಹ , ಆನೆ, ಕುದುರೆ ,ಒಂಟೆ, ಇಲಿ, ಹಾವು, ಕಪ್ಪೆ , ಕೋಗಿಲೆ ,ನವಿಲು,  ನಾಯಿ, ಕೋತಿ  ಎಲ್ಲಾ ಪ್ರಾಣಿಗಳು  ಮೇಳೈಸಿದವು . ತಮ್ಮ ತಮ್ಮ ಪ್ರತಿಭೆಯನ್ನ  ಪ್ರದರ್ಶಿಸಲು  ನಿರ್ಧರಿಸಿದವು. ಸಿಂಹ ಘರ್ಜನೆಯನ್ನು  ಮಾಡದೆ  ತನ್ನ  ಗಾಂಭೀರ್ಯ ಹೆಜ್ಜೆಯನ್ನು ಹಾಕುತ್ತಾ  ಕೊರಳಲ್ಲಿರುವ  ಗರಿ ಗರಿ ಕೂದಲನ್ನು ಕೆದರುತ್ತಾ  ತನ್ನ ಝಳಕ್ಕನ್ನು  ತೋರಿಸುತಿತ್ತು.   ಆನೆ ತನ್ನ ಸೊಂಡಿಲನ್ನು ತಿರುಗಿಸುತ್ತಾ ತನ್ನ ತನ್ನದೇ ಭಂಗಿಯನ್ನು ತೋರಿಸಿತ್ತು,  ಇಲಿಯು  ಒಂದೇ ನಿಮಿಷದಲ್ಲಿ  ಜೇಡ ಕಟ್ಟಿದ  ಹತ್ತಾರು ಪದರದ ಬಲೆಯನ್ನ ತುಂಡರಿಸಿದ್ದನ್ನು  ಕಂಡು ಎಲ್ಲರೂ ವಿಸ್ಮಿತರಾದರು. ಒಂಟೆ ತನ್ನ  ಕತ್ತು ಮತ್ತು ಬೆನ್ನಿನಲ್ಲಿ ಥಳುಕನ್ನು ತೋರಿಸುತಿತ್ತು.  ಹಾವು ತನ್ನ ಹೆಡೆ ಎತ್ತಿ  ಬಾಲವನ್ನು ಸುಂದಿಸುತ್ತಾ  ಬಳ್ಳಿಯಂತೆ  ಆಕೃತಿ  ತಂದವು. ನಾಯಿ ಎಲ್ಲೋ ಹುದುಕಿಟ್ಟ  ಮಾಂಸದ ತುಂಡನ್ನ ಕ್ಷಣಾರ್ಧದಲ್ಲಿ  ತೋರಿಸಿಕೊಟ್ಟಿತು. ಕುದುರೆ  ತನ್ನ  ಬಾಲವನ್ನು   ಅಲ್ಲಾಡಿಸುತ್ತಾ ತಾಳಕ್ಕೆ  ತಕ್ಕಂತೆ ಓಡುತ್ತಾ ನರ್ತಿಸಿ ಎಲ್ಲರ ಮನಸೂರೆ ಗೊಳ್ಳುವಂತೆ  ಮಾಡಿತು. ಹೀಗೆ ಎಲ್ಲ ಪ್ರಾಣಿಗಳು  ತಮ್ಮ ತಮ್ಮ ಪ್ರತಿಭೆಗಳನ್ನು  ಒಂದಕ್ಕಿಂತ ಒಂದು  ಮಿಗಿಲು ಎಂಬಂತೆ ಪ್ರದರ್ಶಿಸಿದವು . ಕೊನೆಯ ಸರದಿ  ಕೋಗಿಲೆ ಮತ್ತು  ನವಿಲಿನದ್ದಾಗಿತ್ತು. ಕೋಗಿಲೆ ನವಿಲಿನಲ್ಲಿ " ತಾಕತಿದ್ದರೆ  ನೀನು ನನ್ನಂತೆ  ಹಾಡಿ ನನಗಿಂತ ಹೆಚ್ಚು ಚಪ್ಪಾಳೆ ಗಿಟ್ಟಿಸಬೇಕು" ಎಂದಿತು . ಬಹಳ ಇಂಪಾದ ಹಾಡನ್ನು ಕೇಳಿ  ಜೋರು ಚಪ್ಪಾಳೆ ಬಂತು. ಮುಂದಿನ ಸರದಿ ನವಿಲಿನದ್ದಾಗಿತ್ತು. ನವಿಲು ಸ್ವಲ್ಪ ಯೋಚಿಸಿ,   ಕೋಗಿಲೆ  ಹಾಡಿದ ತಾಳದಲ್ಲಿಯೇ  ತನ್ನ ಗರಿಯನ್ನು ಕೆದರಿ ಹಾಡುವುದರ ಬದಲಾಗಿ ಕುಣಿಯಲಾರಂಭಿಸಿತು.  ವಿವಿಧ ಭಂಗಿಯಲ್ಲ್ಲಿ  ನರ್ತಿಸಿತು  ಅದರ ನೃತ್ಯ  ಆಕರ್ಷಣೀಯವಾಗಿತ್ತು. ಸಮ್ಮೇಳನಕ್ಕೆ ಬಂದುದು ಸಾರ್ಥಕ ಎಂದು ಎಲ್ಲರೂ  ಮನದಲ್ಲೇ ಅಂದು ಕೊಂಡರು. ಸಾವಿರ ಕಣ್ಣಿ ನ  ನೃತ್ಯ ನೋಡಲು ನಮಗೆ ಎರಡೇ  ಕಣ್ಣು ಸಾಕೆ? ಎಂದು ಮನದಲ್ಲೇ ಮರುಗಿದರು.ನಾಟ್ಯ  ಮುಗಿದಂತೆ ಯಾರು ಚಪ್ಪಾಳೆಯನ್ನು  ತಟ್ಟಲಿಲ್ಲ......ಬದಲಾಗಿ  ಎಲ್ಲರೂ   "ಇನ್ನೊಮ್ಮೆ" " ಇನ್ನೊಮ್ಮೆ"   "ಇನ್ನೊಮ್ಮೆ"  ಎಂದು ಘೋಶವನ್ನು  ಹಾಕಿದರು.

ಇದನ್ನು ದೂರದಿಂದ  ನೋಡುತ್ತಾ ಗಮನಿಸುತಿದ್ದ.......

ಇಬ್ಬರು ವಿದ್ಯಾರ್ಥಿಗಳು: "ನಾನು  ಈ ವಿದ್ಯಾಲಯಕ್ಕೆ ಬರಲು ಕಾರಣ ನಿನ್ನನ್ನು   ನೋಡಿ ನಿನ್ನಂತೆ  ಆಗಬೇಕೆಂದು, ನಾನೂ ಅಷ್ಟೇ  ನನ್ನ  ಅಣ್ಣ  ಯಾವುದನ್ನು  ಆರಿಸಿದ್ದಾನೋ ಅದೇ ವಿಷಯವನ್ನ  ಆರಿಸಿದ್ದೇನೆ  ! "

ಇಬ್ಬರು ವ್ಯಾಪಾರಿಗಳು:   "ನಾನು ಈ ವ್ಯಾಪಾರ ಮಾಡಲು ಕಾರಣ ನೀನು ,ಏಕೆಂದರೆ ನಿನ್ನ ವ್ಯಾಪಾರ ತುಂಬಾ ಲಾಭದಾಯಕದಾಗುತಿತ್ತು ;  ನಾನೂ ಅಷ್ಟೇ  ನನ್ನ ತಂದೆ ಮಾಡಿದ ವ್ಯಾಪಾರನೇ ಮಾಡ್ತಾ ಇದ್ದೀನಿ ! ". 

ಇಬ್ಬರು ಕೃಷಿಕರು: " ನೀನು  ಯಾವ ಕೃಷಿ ಮಾಡ್ತಾ ಇದ್ದಿಯೋ  ಅದೇ ಕೃಷಿಯನ್ನ ನೋಡಿ ನಾನೂ ಮಾಡ್ತಾ ಇದ್ದೀನಿ,;;ನಾನೂ ಅಷ್ಟೇ ಮುತ್ತಾತ ಮಾಡಿದ ಕೃಷಿಯನ್ನೇ  ಮಾಡ್ತಾ ಇದ್ದೀನಿ. !"

 ಗೆಳತಿಯರು: ನೀನು  ಹಾಗೆ ಸಿಂಗಾರ ಮಾಡಿದಿ ಎಂದು ನಾನೂ ಕಲಿತೆ......,

ತಂತ್ರಜರು: ನೀನು  ಆ ತಂತ್ರಜ್ಞಾನ  ಬಳಸಿದಿ ಎಂದು ನಾನೂ  ಅದೇ ತಂತ್ರಜ್ಞಾನ ಉಪಯೋಗಿಸಿದ್ದೀನಿ ....!!!

ಹೀಗೆ  ನಮ್ಮೊಳಗೇ  ಪ್ರತಿ ,ಅದರ ಅನು ಪ್ರತಿ , ಮರು ಪ್ರತಿ,ಗೆ   ತಿರು ಪ್ರತಿ,  ಯಾದಾಗ  ಸ್ವಾಭಾವಿಕವಾಗಿ ಪ್ರಗತಿಯಲ್ಲಿ  ಕುಂಠಿತ    ರಾಗುತ್ತೀವೇನೋ ..? ಸ್ಪರ್ಧೆಗೆ ಅವಕಾಶವನ್ನ  ಕಲ್ಪಿಸುತ್ತದೆಯೇ ಹೊರತು  ವಿಕಾಸ ಅಥವಾ ವೈವಿದ್ಯತೆಗೆ ಅಲ್ಲ. ಜೀವಿಗಳೆಲ್ಲಾ ಭೂಮಿಯವಸ್ತುವೇ.. ಪ್ರತಿಯೊಂದಕ್ಕೂ ಅದರದೇ ಆದ ಗುಣ ಶಕ್ತಿ ಇದೆ!
 "ವಜ್ರ ಆಕರ್ಷಿಸುವುದು ಅದರ ಪ್ರಜ್ವಲಿಸುವಿಕೆ ಯಿಂದ, ಅಯಸ್ಕಾಂತ  ಆಕರ್ಷಿಸುವುದು  ಅದರ ಗುರುತ್ವ ದಿಂದ !"  ಕೋಟಿ ಮೌಲ್ಯ ಇರುವ  ವಜ್ರ  ಚಿಕ್ಕ ಹುಡುಗನಿಗೆ  ಬೇಡ  ಅದು ಶೂನ್ಯ  ,ಅಯಸ್ಕಾಂತ ಕೆಳಗೆ ಬೀಳುವುದಿಲ್ಲ  ಎಂದು  ಕಬ್ಬಿಣದ  ಕಿಟಕಿಯಲ್ಲಿ ಜಾದೂ  ಮಾಡುತ್ತಾ ಇರುತ್ತಾನೆ . ಒಪ್ಪ  ಗೆಳತಿಗೆ ವಜ್ರ ತೋರಿಸಿ  ಅಯಸ್ಕಾಂತ  ಬರೀ ಶೂನ್ಯ. ತನ್ನ ಸೌಂದರ್ಯ ಮತ್ತು  ವಜ್ರದಲ್ಲಿ ಜಾದೂ ಮಾಡುತ್ತಾ ಇರುತ್ತಾಳೆ !

ತಾಕತಿದ್ದರೆ ನನ್ನಂತೆ  ಹಾಡು ಎಂದು ಕೋಗಿಲೆ ಸವಾಲೆಸೆದಾಗ ನವಿಲು ಕೋಗಿಲೆಯಂತೆ ಆಗಲು ಹೊರಟಿಲ್ಲ,  ಇಲ್ಲದ ತಾಕತ್ತನ್ನ  ತೋರಿಸಲು ಹೋಗಿಲ್ಲ ಇರುವ ತಾಕತ್ತಿನಲ್ಲಿ ರಂಜಿಸಿತಲ್ವೆ..?   ನವಿಲು  ಮತ್ತೊಮ್ಮೆ  ನಾಟ್ಯವಾಡಿತು.


No comments:

Post a Comment