Thursday 10 November 2011

ಸಮಗಾರ ಹೇಳಿದ ಕಥೆ....

                                                        KP  Nettar ' s
                                               ಸಮಗಾರ ಹೇಳಿದ ಕಥೆ.... 

ಚರ್ಮದ  ಬೆಲ್ಟು, ಚಪ್ಲಿ  ಬಗ್ಗೆ ಅವನಿಗೆ  ಎಲ್ಲಿಲ್ಲದ ಪ್ರೀತಿ, ದಿನಾ ನೋಡುವುದು ,ಮಾತನಾಡುವುದು ,ಕೆಲಸಮಾಡುವುದು ಚಪ್ಲಿ ಬಗ್ಗೆ.ಪ್ರೀತಿಯಿಂದ ಹೊಲಿಗೆ ಹಾಕುವುದು , ಪಾಲಿಶ್  ಮಾಡುವುದು, ಚಪ್ಲಿಯನ್ನ  ಓರಣ ವಾಗಿರಿಸುವುದು. ಅವನು ಈ ಕೆಲಸವನ್ನ ಪ್ರೀತಿಸಿದ  ಕಾರಣ  ಬದುಕೂ ಅವನನ್ನ ಪ್ರೀತಿಸಿತ್ತು. ಅವನೊಬ್ಬ ಚಾಣಾಕಿ ಸಮಗಾರನಾಗಿದ್ದ. ಈ ಕಾರಣಕ್ಕೆ  ಊರಿನ  ಜನರೆಲ್ಲಾ ಚಪ್ಲಿಗಾಗಲಿ, ಬೆಲ್ಟು ಗೆ ಆಗಲಿ ಅವನಲ್ಲೇ ಹೋಗುತ್ತಿದ್ದರು....

ಒಂದು ದಿವಸ  ನಾಲ್ಕು ಜನ ಗೆಳತಿಯರು  ಕಾರಿನಲ್ಲಿ   ಯಾವುದೋ ಸಮಾರಂಭಕ್ಕೆ  ಹೊರಟರು. ದಾರಿ ಮಧ್ಯದಲ್ಲಿ  ಒಬ್ಬಳು  'ಬುಕೈ'  ಕೊಂಡುಕೊಳ್ಳಬೇಕೆಂದು  ನೆನಪಿಸಿದಳು. ಅಂಗಡಿಗೆ ಹೋಗಿ ಗೊಂಚಲಿನಲ್ಲಿ 4  ಚೆಂದದ ಹೂವುಗಳಿರುವುದನ್ನೇ ಆಯ್ಕೆ ಮಾಡಿದರು. ಹೀಗೆ ಮತ್ತೆ ಕಾರಿನೊಳಕ್ಕೆ  ಬರುವಷ್ಟರಲ್ಲಿ ಒಬ್ಬಳ ಚಪ್ಪಲಿಯ ಉಂಗುಷ್ಟ ತುಂಡಾಯಿತು. ನಾಲ್ಕೂ ಜನರು  ಸಮಗಾರನ  ಹತ್ತಿರ ಬಂದರು.  ಸಮಗಾರನು ಉಂಗುಷ್ಟಕ್ಕೆ ಹೊಲಿಗೆ ಹಾಕಲು ಶುರು ಮಾಡಿದನು. ನಿಮ್ಮ ಕಾರಿನ ಕ್ಲಚ್ ಗಟ್ಟಿಯಾಗಿರುವುದರಿಂದ ಸಡಿಲಿಸಿದರೆ ಒಳ್ಳೆದು ಎಂದನು. ಕಾರಿನ  ಕ್ಲಚ್  ಗಟ್ಟಿಯಾಗಿರುವುದು  ನಿನಿಗೆ ಹೇಗೆ ಗೊತ್ತಾಯಿತೆಂದು ಕೇಳಿದಳು. ಕ್ಲಚ್ಚನ್ನು ಅದುಮುವ ಪಾದದ ಭಾಗ ಬಹಳ ಅಚ್ಚನ್ನು  ಉಂಟು ಮಾಡಿದೆ ಎಂದನು. ಇದರಿಂದ ಕುತೂಹಲಗೊಂಡ  ಗೆಳತಿಯರು ಹಾಗಾದರೆ ತಮ್ಮ ಬಗ್ಗೆಯೂ ಹೇಳಬೇಕೆಂದರು. ಒಬ್ಬಳಲ್ಲಿ ನೀವು ಗ್ರಾಮೀಣ ಪ್ರದೇಶದಿಂದ ಬಂದಿರುತ್ತೀಯ,ಇನ್ನೊಬ್ಬಳಲ್ಲಿ  ಬಹಳ ಹೊತ್ತು ಅಡುಗೆ ಮನೆಯಲ್ಲಿಯೇ ಇರುತ್ತೀಯ, ಇನ್ನೊಬ್ಬಳಲ್ಲಿ ನೀನೊಬ್ಬಳು ನಾಟ್ಯ ಪ್ರವೀಣೆ ಅಂದ. ಹೇಗೆ ಸರಿಯಾಗಿಯೇ  ಹೇಳಿದಿ  ಎಂದು ಆಶ್ಚರ್ಯದಿಂದ ಕೇಳಿದರು. ಮೊದಲನೆ  ಯವಳಲ್ಲಿ ನಿನ್ನ ಪಾದವು ತುಂಬಾ ದಡರು ನಿಂದ ಕೂಡಿದೆ, ಇನ್ನೊಬ್ಬಳ  ಪಾದ ತುಂಬಾ ಶುಷ್ಕದಿಂದ  ಕೂಡಿ  ನೆರಿಗೆ ಗಳು ಶುರುವಾಗಿದೆ, ಇನ್ನೊಬ್ಬಳಲ್ಲಿ ಹೆಜ್ಜೆ  ಹಾಕುವ ಪಾದದ  ಅಂಚುಗಳು ಗಟ್ಟಿಯಾಗಿದೆ! ಎಂದ. ಅಷ್ಟು ಹೊತ್ತಿಗೆ ಉಂಗುಷ್ಟದ ಹೊಲಿಗೆಯೂ ಸಂಪೂರ್ಣವಾದವು. ಮತ್ತೆ   ಚಪ್ಪಲಿಯನ್ನು ಪಾಲಿಶ್  ಮಾಡುತ್ತಲೇ ...ಇರುವಾಗ  ಒಬ್ಬಳ ಕೈಯಿಂದ ಪುಸ್ತಕ  ಜಾರಿ  ಇವನ ಕೈಗಳಿಗೆ ಬಿದ್ದವು. ಹೀಗಿರುವಾಗ ಒಂದು ಪುಟ ಸಂಪೂರ್ಣವಾಗಿ ಪಾಲಿಶ್ ಮಯವಾದವು...ಆ ಪುಟ ತುಂಬಾ ಮುಖ್ಯ ವಾದವು  ಪಾಲಿಶ್ ನ್ನು ತೆಗೆಯ ಬೇಕೆಂದು ರೇಗಿದಳು. ಸಮಗಾರ ಪಾಲಿಶ್ ನ್ನು ತೆಗೆಯಲು ಪ್ರಯತ್ನಿಸಿದನು. ಇನ್ನೂ ರೇಗಿದಳು. ಸಮಗಾರ ತಾಳ್ಮೆಯನ್ನು  ಕಳಕೊಂಡವನಂತೆ   ಕಂಡು ಬಂದನು... ಬುಕೈ  ಯಲ್ಲಿರುವ  ಹೂವನ್ನು ನಾಲ್ಕೂ ದಿಕ್ಕುಗಳಲ್ಲಿ ಎಸೆದನು.   ಮತ್ತೆ ಜೋರಾಗಿ ರೇಗಿದಳು. ಬರು ಬರುತ್ತಾ ಇವನು ಪ್ರಯತ್ನ ವನ್ನು ನಿಲ್ಲಿಸಿದನು...

ನಾನು ಎಸೆದ ಹೂವುಗಳೆಲ್ಲಾ ಎಲ್ಲಿ ಹೋದವು ಗಮನಿಸಿದ್ದೀರಾ...? ಎಂದನು . ಯಾವ ಹೂವುಗಳೂ ಅಲ್ಲಿ ಇರಲಿಲ್ಲ. "ನಮ್ಮ ಸುತ್ತ ನಾಲ್ಕು ವಿವಿಧ ರೀತಿಯ   ಜನರು  ಬಂದು ಹೋಗಿದ್ದಾರೆ. ಮೊದಲನೆಯವನು   ಆಸ್ತಿಕ, ಹೂವನ್ನು ದೇವರಲ್ಲಿ  ಇಟ್ಟಿದ್ದಾನೆ  , ಎರಡೆನೆಯವನು ರಕ್ಷಕ   ಹೂವಿನ ಮುಳ್ಳನ್ನು  ಬೇಲಿಯೊಂದಿಗೆ ಇರಿಸಿದ್ದಾನೆ.  ಇನ್ನೊಬ್ಬ ರಸಿಕ ಪ್ರೇಮಿ  ಹೂವನ್ನು ಗೆಳತಿಗೆ ತೋರಿಸುತ್ತಿದ್ದಾನೆ! ಇನ್ನೊಬ್ಬ ಅವಿವೇಕಿ  ಸಮಾಜ ಘಾತುಕ  ಮುಳ್ಳನ್ನು  ಅಂಗಡಿಯಲ್ಲಿರುವ  ಬಾಳೆ  ಹಣ್ಣಿನೊಳಗೆ  ಇರಿಸುತಿದ್ದಾನೆ."  ಎಂದ.
 ಇದನ್ನೆಲ್ಲಾ   ಯಾಕಪ್ಪಾ  ಹೇಳುತ್ತೀಯಾ ..  ಅವರಲ್ಲೇ ಒಬ್ಬಳು ಕೇಳಿದಳು...ಸಮಗಾರ ತನ್ನ ಪ್ರಯತ್ನ ದಿಂದ ಆ ಪುಟದಿಂದ  ತೆಗೆದ  ಪಾಲಿಶ್ ನಲ್ಲಿ ಬರೀ ಶೀರ್ಷಿಕೆ  ಮಾತ್ರ ಕಾಣುತಿತ್ತು ... " ಜಗತ್ತು  ಮತ್ತು ವೈವಿದ್ಯತೆ . !"

ಅವರು ಹೋಗುತಿದ್ದುದು  ಬೇರೆ  ಯಾವ ಸಮಾರಂಭಕ್ಕೂ ಅಲ್ಲ. " ಜಗತ್ತು ಮತ್ತು ವೈವಿದ್ಯತೆ. " ಎಂಬ ಬಗ್ಗೆ  ಮಂಡಿಸಲು .
1000  ಕೋಟಿ ಜನರಿಗೂ ಜಗತ್ತು ಒಂದೇ , ಸಮಯದ ಪ್ರಮಾಣ ವೂ ಒಂದೇ!  ಉಪಯೋಗಿಸುವ  ಅವಕಾಶ ,ಮತ್ತು ರೀತಿ, ಸಮಯ  ವೈವಿದ್ಯವನ್ನು ಸೃಷ್ಟಿಸುತ್ತದಲ್ವೆ ..? ಎಂದು ಮೇಲಿನ ನಿದರ್ಶನ ಕೊಟ್ಟು ಮಂಡಿಸಿದಳು......    


No comments:

Post a Comment