Saturday 10 March 2012

ಕೆಪ್ಲಾಂಡಿಗರ ಸುತ್ತ...

                                                              ಕೆಪ್ಲಾಂಡಿಗರ ಸುತ್ತ...

ಆಲದ  ಮರ ನೆ  ಹಾಗೆ   ಅದರ  ಹತ್ತಿರ  ಮುಳ್ಳಾಗಲಿ, ಪೊದೆ ಗಂಟಿಗಳು ಇನ್ನಾವುದು ತೊಂದರೆ ಕೊಡುವ  ಹುಲ್ಲುಗಳಾಗಲಿ  ಹತ್ತಿರ ಇಟ್ಟುಕೊಂಡಿರುವುದಿಲ್ಲ.ಅಥವಾ  ತನ್ನ  ದೈತ್ಯ ಗಾತ್ರದಿಂದ  ಸೂರ್ಯ ರಶ್ಮಿಗಳನ್ನ ತಾನೇ ಹೀರುವುದರಿಂದ ಇನ್ನೊಂದು ಜೀವಕ್ಕೆ  ಅನ್ಯಾಯವಾಯಿತೇನೋ ..?   ನಾವಂತೂ  ಆಲದ ಮರದಷ್ಟು ದೊಡ್ಡವರಲ್ಲ,  ಇತ್ತ   ಪಾಚಿ ಹುಲ್ಲಿನಷ್ಟು  ಸಣ್ಣವರಾಗಿದ್ದರೆ   ಮುಳ್ಳಿನ ಭಯವೂ ಇರುತ್ತಿರಲಿಲ್ಲ.! ಎಲ್ಲಾ ಮುಳ್ಳನ್ನೂ  ತಪ್ಪಿಸಿ   ಬದುಕಲು  ಪಾಚಿ ಹುಲ್ಲಲ್ಲ, ಅಲ್ಲಾಡದೆ ನಿಂತಿರಲು  ಆಲದ ಮರದ ಜನ್ಮವೂ ಅಲ್ಲ. ಬೇಕಾದ ಹಾಗೆ ಧಡೂತಿ ಆಕೃತಿ ಬೆಳೆಸಿದ , ಮೈಯೆಲ್ಲಾ ಬಳ್ಳಿ ಆವರಿಸಿದ , ಅಲ್ಲಲ್ಲಿ ಗಂಟುಗಳನ್ನು ಆವರಿಸಿಕೊಂಡ , ಇನ್ನೊಂದೂ ಹುಲ್ಲು ಹುಟ್ಟದ ಹಾಗೆ ಕತ್ತಲನ್ನು ಆವರಿಸುವ ಆ ಆಲದ ಮರವನ್ನ ಎಲ್ಲರೂ ಇಷ್ಟಪಡುತ್ತಾರೆ ಅನ್ನೋದು ಅನುಮಾನ.ಇನ್ನು ಪಾಚಿಯೋ ಅದನ್ನ ಎಲ್ಲರೂ ಗಮನಿಸುವುದೂ ಕಷ್ಟದ ಸಂಗತಿ. 

ಅದೆಲ್ಲೋ  ಹೇಳುವಂತಹದಲ್ಲದ  ಸಣ್ಣ ತಪ್ಪು ನಮ್ಮಿಂದ ಆಗಿರುತ್ತದೆ  ನಮ್ಮ ಪೂರ್ವಜರ,ಇಲ್ಲವೇ ಹೆತ್ತವರ,   ಇತಿಹಾಸವನ್ನೋ, ಪರಿಸ್ಥಿತಿಯನ್ನೋ, ದೌರ್ಭಲ್ಯವನ್ನೋ,,ಚಟವನ್ನೋ  ದೊಡ್ಡ ನೆಪವಾಗಿಸಿಕೊಂಡು  ಹತ್ತಾರು ಮಂದಿಯ ಸಮ್ಮುಖದಲ್ಲೇ   ಅವಮಾನಿಸಿರುತ್ತಾರೆ. ನಿಜ್ಜ ಹೇಳಬೇಕಾದರೆ ನಾವು ಮಾಡಿದ ತಪ್ಪು ನಮ್ಮ ಅಪ್ಪ-ಅಮ್ಮ ,ಪೂರ್ವಜರು ಮಾಡಿದ ಇತಿಹಾಸಕ್ಕೆ ಅಥವಾ ದೌರ್ಭಲ್ಯಕ್ಕೆ ಹೋಲಿಕೆ ಇರುವುದಿಲ್ಲ.ಅದು ನಾವು ಮಾಡಿದ ತಪ್ಪಿಗೆ ಅಪ್ರಸ್ತುತ. ನಿಮ್ಮ ಅಪ್ಪ ಅಮ್ಮ ಹೀಗೆ ಇದ್ದರು ...ಅಂತ ಹೇಳುವವರು ನಮ್ಮ ತಪ್ಪು ಸರಿಯಾಗಲಿ ಎಂಬ ನಿಜ ಉದ್ದೇಶಕ್ಕಾಗಿರುವುದಿಲ್ಲ...ತಾನು ಸಭ್ಯಾರಾಗಿದ್ದೆವೆಂಬ ಎಂಬ ಸ್ವ ಪ್ರಶಂಸೆ ಪಡೆಯಲು! ಕೆಪ್ಲಾಂಡಿಗರಿಗೆ ಇಂತಹ ತೆವಲು. ನಿಜವಾಗಿ ನಮ್ಮ ತಪ್ಪನ್ನು ಅವರು ತಿದ್ದಬೇಕಾದರೆ ನಮ್ಮನ್ನು ಖಾಸಗಿಯಾಗಿ ಕರೆದು ಹೇಳಬೇಕಾದ ಹುಳುಕನ್ನು ಹೇಳಬಹುದಾದ ಕ್ರಮದಲ್ಲಿ ಹೇಳಬಹುದು . ಕೆಪ್ಲಾಂಡಿಗರಿಗೆ ಅದು ಬೇಕಾಗಿಲ್ಲ. ನಮ್ಮ ಅವಮಾನ ಮತ್ತು ಅವರ   ಸ್ವ ಪ್ರಶಂಸೆ ಅವರಿಗೆ ಬೇಕು. ತಕ್ಷಣ ಪ್ರತಿಕ್ರಿಯಿಸಬೇಕು (React) ಅಂತನಿಸದೆ ಇರದು ನಮಗೆ. ಒಂದುವೇಳೆ ನಾವು ಪ್ರತಿಕ್ರಿಯಿಸಿದ್ದೇ ಆದರೆ ಅದು ಕೆಪ್ಲಾಂಡಿಗರಿಗೆ ಸಂದ ಜಯ.
ಜವಾಬ್ಧಾರಿಯುತ ಮನೆಯ ಸೊಸೆ ನೀವಾಗಿದ್ದರೆ ತವರು ಮನೆಯ ಕುಟುಂಬದ ಯಾರೋ ಒಬ್ಬರು ಮಾಡಿದ ಎಡವಟ್ಟು ನೀವೇ ಮಾಡಿದ್ದೀರಿ ಎಂದು ಬಿಂಬಿಸಲು ಶುರು ಮಾಡುತ್ತಾರೆ. ಇಲ್ಲಿ ನಮ್ಮಲ್ಲಿರುವ ಸಂಯಮ ನಮ್ಮನ್ನು ಕಾಪಾಡುತ್ತದೆಯೇ ವಿನಃ ಪ್ರತಿಕ್ರಿಯಿಸುವುದರಿಂದಲ್ಲ.
ನಮ್ಮ ಜೀವನದಲ್ಲಿ ಇಂತಹ ಚಿಕ್ಕ ಚಿಕ್ಕ ವಿಷಯಗಳು ಮುಳ್ಳುಗಳು ಚುಚ್ಚುತಿರುತ್ತದೆ, ಆಗಾಗ್ಗೆ ನೋವನ್ನ ಕಾಡುತಿರುತ್ತದೆ. ಕಾಲ ಕ್ರಮೇಣ ರೋಧಕ ಶಕ್ತಿ ಹೆಚ್ಚುತಿರುತ್ತದೆ.ಎಲ್ಲ ವಿಚಾರವನ್ನು ನಾವು ಹೇಗೆ ಸ್ವೀಕರಿಸುತ್ತೀವಿ ಅನ್ನೋದರಲ್ಲೇ ನಮ್ಮ ಜೀವನದ ಪಾತ್ರವನ್ನು ವಹಿಸುತ್ತದೆ. ಅಯೋಡಿನ್ ಭರಿತ ಉಪ್ಪು ನಮ್ಮ ದೇಹದ ರಾಸಾಯಿನಿಕ ವನ್ನ ಹೇಗೆ ಸಮತೋಲನವನ್ನ ಕಾಪಾಡುತ್ತೋ ಒಂದರ್ಥದಲ್ಲಿ ಕೆಪ್ಲಾಂಡಿಗರು ಸಹ ನಮ್ಮ ಜೀವನವನ್ನ ಸಮತೋಲನವನ್ನ ಕಾಪಾಡಿರುತ್ತಾರೆ. ನಮ್ಮ ಜೀವನದ ಶೈಲಿಯ ಅಸಮತೋಲನವನ್ನ ತಪ್ಪಿಸಿರುತ್ತಾರೆ.
ಕೆಪ್ಲಾಂಡಿಗರು ಕಡಿಮೆ ಇರುವ ನಮ್ಮ ಓರಗೆಯವರನ್ನ ಗಮನಿಸಿ: ಪೋಲಿಸ್ ನ ಮಗ ಪೋಲಿಯಾಗಿರುವುದು, ಮಾಸ್ತರರ ಮಗ ಫೈಲಾಗಿರುವುದು, ಶ್ರೀಮಂತರ ಮಗ ಸಾಲಗಾರನಾಗಿರುವುದು, ದೊಡ್ಡವರ ಮಕ್ಳು ಸಣ್ಣತನ ಮಾಡಿರುವುದು.ಸಭ್ಯರ ಮಕ್ಕಳು ಪೋರ್ಕಿಯೊಂದಿಗೆ....ಹೀಗೆ ಹಲವಾರು ಉದಾಹರಣೆ ಯನ್ನ ಕಾಣುತ್ತೇವೆ. ಅದೇ ಕೆಪ್ಲಾಂಡಿಗರ ಜೊತೆ ಬೆಳೆದವರನ್ನ ಗಮನಿಸಿದಾಗ ಕುಡುಕನ ಮಗ ಕುಡಿತದಿಂದ ದೂರ, ಜೂಜುಗಾರನ ಮಗನಿಗೆ ಬಾಜಿ ಕಟ್ಟುವುದೇ ಗೊತ್ತಿರುವುದಿಲ್ಲ, ಸಣ್ಣ ವರ ಮಕ್ಕಳು ಸಣ್ಣ ತನ ,ಚಿಲ್ಲರೆ ಕೆಲಸದಿಂದ ದೂರವಿರುತ್ತಾರೆ, ಲಂಪಟ ತನ ವಿರುವವನ ಮಗ ಲಂಪಟ ತನದಿಂದ ದೂರವಿರುತ್ತಾನೆ, ಸಾಲಗಾರನ ಮಕ್ಕಳು ಸಾಲದಿಂದ ದೂರವಿರುತ್ತಾರೆ.
ಪುಣ್ಯವಶಾತ್ ನಾವು ನೀವೆಲ್ಲಾ ಕೆಪ್ಲಾಂಡಿಗರ ಸುತ್ತ ಬದುಕುತಿದ್ದೀವಿ ...ಏನಂತೀರಿ...?
   

2 comments:

  1. ಮೊದಲ ಲೇಖನಕ್ಕೂ, ಇದಕ್ಕೂ ಹೋಲಿಸಿದಾಗ
    ನಿರೂಪಣಾ ಶೈಲಿಯಲ್ಲಿ ಸಾಕಷ್ಟು
    Improvement ಇದೆ.
    ಹಾಡ್ತಾ ಹಾಡ್ತಾ ರಾಗ.. ಎಂಬುದು
    ತಮ್ಮ ಬರವಣಿಗೆಯಲ್ಲಿ ನಿಜವಾಗಿದೆ.
    ಭಾಷೆ ಪ್ರಬುದ್ಧವಾಗಿದೆ. "ಕೆಪ್ಲಾಂಡಿ" ಹಾಗೂ "ಪೋರ್ಕಿ"
    ಎಂಬ ಪದಗಳು ಬಿಟ್ಟರೆ ಎಲ್ಲವೂ ಶಿಷ್ಟ ಭಾಷೆಯಲ್ಲಿದೆ.=>ಗುಣಮಟ್ಟ ಒಂದು ಹಂತ ಮೇಲೇರಿದೆ..

    "ಕೆಪ್ಲಾಂಡಿ" ಎಂಬುದು ಬಹುಶಃ ಕನ್ನಡ ಪದಕೋಶಕ್ಕೆ ತಮ್ಮ ಹೊಸ ಕೊಡುಗೆ(Own ಆವಿಷ್ಕಾರ?)
    ಹೊಸ ಪದಗಳ ಸೃಷ್ಟಿಯ ತುಡಿತ(ಚಟ..? Take it lightly) ನಿಮ್ಮಲ್ಲಿ ಬಾಲ್ಯದಲ್ಲೇ ಇತ್ತು ಎಂಬುದು
    ನಿಮ್ಮೊಂದಿಗಿನ ಬಾಲ್ಯದ ಒಡನಾಟ ನನಗೆ ನೆನಪಿಸುತ್ತಿದೆ. ಅಂದಿನ ದಿನಗಳಲ್ಲಿ ತಮಗೆ
    ಸರಮೊಞ ಎಂಬ ಆವಿಷ್ಕಾರವನ್ನು ಎಲ್ಲರೂ ಬಳಸಬೇಕೆಂದು ಹಂಬಲವಿತ್ತು.. ನೆನಪಿದೆಯಾ?

    Anyhow,you keep writing,And i will keep reviewing...:-)

    ReplyDelete
    Replies
    1. ನಿಮ್ಮ ಅಭಿಪ್ರಾಯಗಳಿಗೆ ಯಾವಾಗಲೂ ಸ್ವಾಗತ.ಧನ್ಯವಾದಗಳು .

      Delete